ಕೊರಟಗೆರೆ: ಮನೆಯ ಮುಂಭಾಗದಲ್ಲಿರುವ ನೀರಿನ ಸಂಪ್ ಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಅನೈತಿಕ ಸಂಬಂಧಕ್ಕಾಗಿ ಅಣ್ಣ ಮತ್ತು ತಂಗಿ ಜೊತೆಯಾಗಿ ತಾಯಿಯನ್ನೇ ಕೊಲೆಗೈದಿರುವ ಅಂಶ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜನವರಿ 30ರಂದು ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸುಮಿತ್ರಾ (45ವರ್ಷ) ಎಂಬವರು ಮನೆಯ ಮುಂಭಾಗದ ಸಂಪ್ ಗೆ ಬಿದ್ದು ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು.
ಮೃತ ಸುಮಿತ್ರಾಳ ಎರಡನೇ ಮಗಳು ಶೈಲಜಾ(21) ಬಿಕಾಂ ಪದವಿ ವ್ಯಾಸಾಂಗ ಮಾಡುತ್ತಿದ್ದು, ಮೃತಳ ತಂಗಿಯ ಮಗ ಪುನೀತ್(23) ಪ್ಯಾಕ್ಟರಿ ಕೆಲಸ ಮಾಡುತ್ತಿದ್ದನು. ಇವರಿಬ್ಬರು ಅನೈತಿಕ ಸಂಬಂಧ ಹೊಂದಿರುವ ವಿಚಾರ ಸುಮಿತ್ರಾ ತಿಳಿದಿದ್ದರಿಂದ, ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಬುಹುದು ಎಂದು ಈ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
Related Articles
ಬುದ್ದಿವಾದದ ನಂತರ ಇಬ್ಬರೂ ದೂರವಾಗಿದ್ದರೂ ಕೂಡಾ, ಮತ್ತೆ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆನ್ನಲಾಗಿದೆ. ತಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಸುಮಿತ್ರಾಳನ್ನು ಕತ್ತು ಹಿಸುಕಿ ಕೊಲೆಗೈದಿದ್ದರೆನ್ನಲಾಗಿದೆ.
ಈ ಘಟನೆ ನಡೆದ ನಂತರ ಸುಮಿತ್ರಾ ಸಂಪ್ ಗೆ ಬಿದ್ದು ಸಾವನ್ನಪ್ಪಿರುವುದಾಗಿ ಶೈಲಜಾ ಮತ್ತು ಪುನೀತ್ ಕಥೆ ಹೆಣೆದಿದ್ದರು. ಘಟನೆ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಶೈಲಜಾ ಮತ್ತು ಪುನೀತ್ ನನ್ನು ಕೊರಟಗೆರೆ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಕೊಲೆ ಗುಟ್ಟು ಹೊರಬಿದ್ದಿದ್ದು, ಇದೀಗ ಇಬ್ಬರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಮೃತಳ ಹಿರಿಯ ಮಗಳು ಸುವರ್ಣ ಲಕ್ಷ್ಮೀ(23) ನೀಡಿದ ದೂರಿನ ಮೇರೆಗೆ, ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಸಲಾಗುತ್ತಿದೆ.