Advertisement

IPL ನಿಂದ ಹಿಂದೆ ಸರಿದಿ ಬ್ರೂಕ್‌: ಡೆಲ್ಲಿ ತಂಡಕ್ಕೆ ದಕ್ಷಿಣ ಆಫ್ರಿಕಾ ವೇಗಿ

12:14 AM Apr 09, 2024 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ವೇಗಿ ಲಿಝಾಡ್‌ ವಿಲಿಯಮ್ಸ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂಗ್ಲೆಂಡ್‌ ಬ್ಯಾಟರ್‌ ಹ್ಯಾರಿ ಬ್ರೂಕ್‌ ಸ್ಥಾನವನ್ನು ಲಿಝಾಡ್‌ ತುಂಬಲಿದ್ದಾರೆ. ಅಜ್ಜಿಯ ನಿಧನದಿಂದಾಗಿ ಬ್ರೂಕ್‌ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.

Advertisement

ಹ್ಯಾರಿ ಬ್ರೂಕ್‌ ಅವರನ್ನು ಡೆಲ್ಲಿ 4 ಕೋಟಿ ರೂ.ಗೆ ಖರೀದಿಸಿತ್ತು. ಕಳೆದ ವರ್ಷ ಸನ್‌ರೈಸರ್ ಹೈದರಾಬಾದ್‌ ಫ್ರಾಂಚೈಸಿ ಹ್ಯಾರಿ ಬ್ರೂಕ್‌ ಅವರಿಗೆ 13.25 ಕೋಟಿ ರೂ. ನೀಡಿತ್ತು. ಕೆಕೆಆರ್‌ ವಿರುದ್ಧ 55 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದನ್ನು ಹೊರತುಪಡಿಸಿದರೆ 11 ಪಂದ್ಯಗಳಿಂದ ಗಳಿಸಿದ್ದು 190 ರನ್‌ ಮಾತ್ರ. ಆದರೆ ಈ ಬಾರಿ ಡೆಲ್ಲಿ ಪರ ಆಡುವ ಅವಕಾಶ ಲಭಿಸಲಿಲ್ಲ.

2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಲಿಝಾಡ್‌ ವಿಲಿಯಮ್ಸ್‌ 2 ಟೆಸ್ಟ್‌, 4 ಏಕದಿನ ಮತ್ತು 11 ಟಿ20 ಪಂದ್ಯಗಳನ್ನು ಆಡಿದ್ದಾರೆ. ಡೆಲ್ಲಿ ಬೌಲಿಂಗ್‌ ತೀರಾ ದುರ್ಬಲವಾಗಿರುವ ಕಾರಣ ಬ್ಯಾಟರ್‌ ಬದಲು ವೇಗಿಯನ್ನು ಆಯ್ದುಕೊಂಡಿದೆ. ಮುಂಬೈ ವಿರುದ್ಧ ಆ್ಯನ್ರಿಚ್‌ ನೋರ್ಜೆ ಅವರ ಒಂದೇ ಓವರ್‌ನಲ್ಲಿ 32 ರನ್‌ ಸೋರಿಹೋದದ್ದು ಡೆಲ್ಲಿ ಬೌಲಿಂಗ್‌ ವೈಫ‌ಲ್ಯಕ್ಕೊಂದು ಉತ್ತಮ ನಿದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next