Advertisement

Viral: ಬಾಯಿ ಕ್ಯಾನ್ಸರ್‌ ನಿಂದ 90% ರಷ್ಟು ನಾಲಗೆ ಕತ್ತರಿಸಿ ತೆಗೆದರೂ ಮಾತನಾಡಿದ ಮಹಿಳೆ.!

11:34 AM Apr 13, 2023 | Team Udayavani |

ಲಂಡನ್:‌ ನಾಲಗೆ ಮಾತಿಗೆ ಮೂಲ. ನಾಲಗೆ ಇಲ್ಲದೆ ನಾವು ಪದದ ಉಚ್ಛರವನ್ನು ಮಾಡಲು ಆಗುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ನಾಲಗೆಯೇ ಇಲ್ಲದೇ ಮಾತನಾಡಿದ್ದಾರೆ.!

Advertisement

ಗೆಮ್ಮಾ ವೀಕ್ಸ್‌ ಎನ್ನುವ 37 ವರ್ಷದ ಮಹಿಳೆಗೆ ಕಳೆದ 6 ವರ್ಷಗಳಿಂದ ನಾಲಗೆಯಲ್ಲಿ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಮೊದಲು ನಾಲಗೆಯಲ್ಲಿ ಸಣ್ಣ ತೂತು ಕಾಣಿಸಿಕೊಂಡಿದ್ದು, ಆ ಬಳಿಕ ಅದು ದೊಡ್ಡದಾಗಿ ನಾಲಗೆಯಲ್ಲಿನ ನೋವು ಜಾಸ್ತಿಯಾಗಿದೆ. ಇದರಿಂದ ಯಾವುದೇ ಆಹಾರವನ್ನು ಸೇವಿಸದವರೆಗೆ ಸಮಸ್ಯೆ ಉಲ್ಬಣವಾಗಿದೆ.

ಇದನ್ನೂ ಓದಿ: Indian Currency; ಕತಾರ್ ನಲ್ಲಿ ಡಾಲರ್ ಬದಲು ರೂಪಾಯಿ ಬಳಸಿ ಶಾಪಿಂಗ್…ಮಿಕಾ ಸಿಂಗ್ ಟ್ವೀಟ್

ಇದಾದ ಬಳಿಕ ಇದೇ ವರ್ಷ ಗೆಮ್ಮಾ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿದಾಗ, ಗೆಮ್ಮಾ ಅವರಿಗೆ ಬಾಯಿ ಮತ್ತು ಕತ್ತಿನ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ನಿಮ್ಮ 90% ನಾಲಗೆಯನ್ನು ತೆಗೆಯಬೇಕಾಗುತ್ತದೆ. ಆ ಬಳಿಕ ಎಂದೂ ಮಾತನಾಡಲು ಆಗದೇ ಇರಬಹುದೆಂದು ವೈದ್ಯರು ಹೇಳಿದ್ದಾರೆ.

ಅಂದುಕೊಂಡಂತೆ ಮಾರ್ಚ್‌ 6 ರಂದು ಕೇಂಬ್ರಿಜ್‌ನಲ್ಲಿರುವ ಅಡೆನ್‌ಬ್ರೂಕ್ಸ್ ಆಸ್ಪತ್ರೆಯ ವೈದ್ಯರು ಗೆಮ್ಮಾ ಅವರ ಶಸ್ತ್ರ ಚಿಕಿತ್ಸೆಯ ಮೂಲಕ ಶೇ. 90 ರಷ್ಟು ನಾಲಗೆಯನ್ನು ತೆಗೆದಿದ್ದಾರೆ.

Advertisement

ಗೆಮ್ಮಾ ಮತ್ತೆ ಮಾತನಾಡುವುದು ಕಷ್ಟವೆಂದಿದ್ದ ವೈದ್ಯರು ಊಹೆಯನ್ನು ತಪ್ಪಾಗಿಸಿ, ಗೆಮ್ಮಾ ಮಾತನಾಡಿದ್ದಾರೆ.  ಆಸ್ಪತ್ರೆಗೆ ಭೇಟಿ ನೀಡಿದ ಗೆಮ್ಮಾರ ಪ್ರಿಯಕರ ಹಾಗೂ ಗೆಮ್ಮಾರ ಮಗಳನ್ನು ನೋಡಿ ʼಹೆಲೋʼ ಎಂದು ಗೆಮ್ಮಾ ಹೇಳಿದ್ದಾರೆ. ಇದನ್ನು ನೋಡಿದ ವೈದ್ಯರು ಅಚ್ಚರಿಗೊಂಡಿದ್ದಾರೆ.

ಅಂದು ನಾನು ಮಾತನಾಡಿದ್ದರಿಂದ ನನ್ನ ಮಾತನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಶಸ್ತ್ರ ಚಿಕಿತ್ಸೆಯ ದಿನಗಳ ಬಗ್ಗೆ ಗೆಮ್ಮಾ ʼಮೆಟ್ರೋʼ ನ್ಯೂಸ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next