ಲಂಡನ್: ಬ್ರಿಟನ್ ಪ್ರವಾಸದಲ್ಲಿ ಇರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಮತ್ತು ಬ್ರಿಟನ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಿಮ್ ಬಾರೋ ನಡುವಿನ ವಾರ್ಷಿಕ ಸಭೆಯಲ್ಲಿ ಪ್ರಧಾನಿ ರಿಷಿ ಸುನಕ್ ಕೆಲ ಕಾಲ ಭಾಗವಹಿಸಿದ್ದ ಘಟನೆ ನಡೆದಿದೆ.
ಎರಡು ದೇಶಗಳ ನಡುವಿನ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ನಡೆಯಲಿರುವ ಸಭೆಯಲ್ಲಿ ಬ್ರಿಟನ್ ಪ್ರಧಾನಿ ಭಾಗವಹಿಸುವ ಪದ್ಧತಿ ಇಲ್ಲ.
ಆದರೆ, ಭಾನುವಾರ ನಡೆದ ಸಭೆಯ ವೇಳೆ ಪ್ರಧಾನಿ ರಿಷಿ ಸುನಕ್ ಭಾಗವಹಿಸಿದ್ದರು ಎಂದು ಲಂಡನ್‌ನಲ್ಲಿ ಇರುವ ಭಾರತದ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.
ವಿಜ್ಞಾನ, ತಂತ್ರಜ್ಞಾನ, ರಕ್ಷಣೆ, ವಾಣಿಜ್ಯ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಹೆಚ್ಚಿನ ಸಹಕಾರಕ್ಕೆ ಆದ್ಯತೆ ನೀಡುವುದಾಗಿ ಬ್ರಿಟನ್ ಪ್ರಧಾನಿ ತಿಳಿಸಿದ್ದಾರೆ.
Related Articles
ಅವರ ನಿಲುವನ್ನು ಮೆಚ್ಚಿಕೊಳ್ಳುತ್ತೇವೆ ಎಂದು ಹೈಕಮಿಷನ್ ತಿಳಿಸಿದೆ. ಇದರ ಜತೆಗೆ ಬ್ರಿಟನ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಿಮ್ ಬಾರೋ ಶೀಘ್ರವೇ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದೂ ಹೇಳಿದೆ.