Advertisement
ಒಂದು ವೇಳೆ ಇದು ಕುಸಿದಲ್ಲಿ ರಾಜಧಾನಿ ಮತ್ತು ಕರಾವಳಿ ನಡುವೆ ಸಂಪರ್ಕ ಸಾಧಿಸುವ ಪ್ರಮುಖ ಮಾರ್ಗವೊಂದು ಬಂದ್ ಆಗಲಿದೆ. ಮಾರನಹಳ್ಳಿ-ಸಕಲೇಶಪುರ ನಡುವಿನ 18 ಕಿ.ಮೀ. ವ್ಯಾಪ್ತಿಯ ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ನಡುವೆ ಇರುವ ಎತ್ತಿನಹೊಳೆ ಯೋಜನಾ ವ್ಯಾಪ್ತಿಯಲ್ಲಿ ಈ ಸೇತುವೆ ಇದೆ. ಸೇತುವೆ ಸ್ತಂಭಗಳು ದುರ್ಬಲವಾಗಿವೆ. ಸೇತುವೆಯ ಮಧ್ಯದಲ್ಲಿ ಡಾಮರು ಎದ್ದು ಹೋಗಿದೆಯಲ್ಲದೆ ಕಬ್ಬಿಣದ ಸರಳುಗಳು ಮೇಲೆದ್ದು ಬಂದಿವೆ. ಹಾದು ಹೋಗುವ ವಾಹನಗಳ ಚಕ್ರಗಳು ಪಂಕ್ಚರ್ ಆಗುತ್ತವೆ. ಅಲ್ಲಲ್ಲಿ ರಂಧ್ರಗಳು ಸೃಷ್ಟಿಯಾಗಿದ್ದು ದಿನೇದಿನೆ ವಿಸ್ತರಿಸುತ್ತಿವೆ. ದೊಡ್ಡ ರಂಧ್ರಗಳ ಮೂಲಕ ತಳಭಾಗ ಕಾಣಿಸುತ್ತಿದೆ. ವಾಹನ ಗಳು ಸಂಚರಿಸುವಾಗ ಸೇತುವೆಗೆ ನಡುಕ ಬರುತ್ತದೆ.
Related Articles
ಕರಾವಳಿಯಿಂದ ರಾಜಧಾನಿಗೆ ಮುಖ್ಯ ಸಂಪರ್ಕ ಕೊಂಡಿ ಶಿರಾಡಿ ಘಾಟಿ ರಸ್ತೆ. ಉದ್ಯೋಗ, ವ್ಯಾಪಾರ ವಹಿವಾಟುಗಳಲ್ಲಿ ಈ ರಸ್ತೆ ಪ್ರಧಾನ ಪಾತ್ರ ವಹಿಸುತ್ತದೆ. ಸೇತುವೆ ಕುಸಿದು ಸಂಚಾರ ಸ್ಥಗಿತಗೊಂಡಲ್ಲಿ ಕರಾ ವಳಿಯ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ, ವಾಣಿಜ್ಯ ಹೀಗೆ ಎಲ್ಲ ರಂಗಗಳ ಮೇಲೆ ಭಾರೀ ಪರಿಣಾಮ ತಟ್ಟಲಿದೆ. ಹಾಗಾಗುವ ಮೊದಲು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಟೆಲಿ ಪ್ರವಾಸ ದಲ್ಲಿರುವುದಾಗಿ ಆಪ್ತ ಮೂಲಗಳು ತಿಳಿಸಿದ್ದು ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ದ.ಕ. ಸಂಸದ ನಳಿನ್ ಕೂಡ ಸಂಪರ್ಕಕ್ಕೆ ಲಭ್ಯವಾಗಿಲ್ಲ.
Advertisement
ಪ್ರಧಾನಿ ಗಮನಕ್ಕೆ ತರಲು ಸಿದ್ಧತೆಪ್ರಮುಖ ಹೆದ್ದಾರಿಯ ಅವ್ಯವಸ್ಥೆಯಿಂದ ಬೇಸತ್ತಿ ರುವ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ವಿದ್ಯಾ ಆಚಾರ್ಯ ಅವರು ಹೊಂಡಗುಂಡಿಯ ರಸ್ತೆ ಹಾಗೂ ಶಿಥಿಲ ಸೇತುವೆಯ ಛಾಯಾಚಿತ್ರ ತೆಗೆದು ಪ್ರಧಾನಿ ಮೋದಿಯವರಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಎತ್ತಿನಹಳ್ಳ ಸೇತುವೆ ಶಿಥಿಲವಾದ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗದ ಅಧಿಕಾರಿಗಳ ಗಮನಕ್ಕೆ ತರುವೆ. ತತ್‌ಕ್ಷಣ ಸೇತುವೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸುವೆ.
ಆರ್. ಗಿರೀಶ್, ಹಾಸನ ಜಿಲ್ಲಾಧಿಕಾರಿ – ಬಾಲಕೃಷ್ಣ ಭೀಮಗುಳಿ