Advertisement

Bihar ಮತ್ತೊಂದು ಸೇತುವೆ ಕುಸಿತ; ವಾರದೊಳಗೆ ನಾಲ್ಕನೇ ಘಟನೆ!

04:42 PM Jun 27, 2024 | Team Udayavani |

ಪಾಟ್ನಾ : ಬಿಹಾರದಲ್ಲಿ ಸೇತುವೆ ಕುಸಿತ ಸರಣಿ ಮುಂದುವರಿದಿದ್ದು ವಾರದೊಳಗೆ ನಾಲ್ಕನೇ ಸೇತುವೆ ಕುಸಿತು ಬಿದ್ದಿದೆ. ಕಿಶನ್‌ಗಂಜ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದು ಬಿದ್ದಿದೆ. ಕಂಕೈ ನದಿಯ ಉಪನದಿಯಲ್ಲಿ ಬಹದ್ದೂರ್‌ಗಂಜ್ ಮತ್ತು ದಿಘಲ್‌ಬ್ಯಾಂಕ್ ಬ್ಲಾಕ್‌ಗಳನ್ನು ಸಂಪರ್ಕಿಸುವ 70 ಮೀಟರ್ ಸೇತುವೆ ಕುಸಿದು ಬಿದ್ದಿದ್ದು ಎರಡು ಪಟ್ಟಣಗಳ ನಡುವಿನ ಸಂಪರ್ಕದ ಮೇಲೆ ಪರಿಣಾಮ ಬೀರಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

Advertisement

ನದಿಯ ನೀರಿನ ಮಟ್ಟ ಹೆಚ್ಚಾಗಿದೆ ಮತ್ತು ಬಲವಾದ ಪ್ರವಾಹದಿಂದಾಗಿ ಸೇತುವೆಯ ಮಧ್ಯದಲ್ಲಿ ಹಲವಾರು ಪಿಲ್ಲರ್‌ಗಳು ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸೆಲ್‌ಫೋನ್ ವೀಡಿಯೊಗಳು ವೈರಲ್ ಆಗಿವೆ. ಸೇತುವೆಯ ಮಧ್ಯ ಭಾಗವು ಕುಸಿದು ಬಿದಿದ್ದು ವೇಗವಾಗಿ ಹರಿಯುವ ನದಿ ನೀರನ್ನು ಬಹುತೇಕ ಸ್ಪರ್ಶಿಸುತ್ತಿರುವುದನ್ನು ತೋರಿಸಿದೆ, ಅದು ಯಾವಾಗ ಬೇಕಾದರೂ ಸಂಪೂರ್ಣವಾಗಿ ಕೊಚ್ಚಿ ಹೋಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next