Advertisement

ಸುಳ್ಳು ವರದಕ್ಷಿಣೆ ಪ್ರಕರಣ ತಡೆಗೆ ಮದುವೆಯಲ್ಲಿ ದೊರೆತ ಉಡುಗೊರೆ ಪಟ್ಟಿ ಇರಿಸಿಕೊಳ್ಳಿ

09:33 PM May 16, 2024 | Suhan S |

ಅಲಹಾಬಾದ್‌: ಸುಳ್ಳು ವರದಕ್ಷಿಣೆ ಪ್ರಕರಣಗಳನ್ನು ತಡೆಯುವ ದೃಷ್ಟಿಯಿಂದ ಗಂಡು ಮತ್ತು ಹೆಣ್ಣು ತಮ್ಮ ಮದುವೆಯಲ್ಲಿ ದೊರೆತ ಉಡುಗೊರೆಗಳ ಪಟ್ಟಿಯನ್ನು ಇರಿಸಿಕೊಳ್ಳಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.

Advertisement

ಇತ್ತೀಚೆಗೆ 1961ರ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ಬಹಳಷ್ಟು ಪ್ರಕರಣಗಳು ದಾಖಲಾಗಿದ್ದು ಈ ಕಾರಣಕ್ಕಾಗಿ ಈ ಆದೇಶ ನೀಡಿದೆ. ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್‌ 3(2)ರಲ್ಲಿ ಮಾಡಲಾದ ನಿಯಮಗಳಡಿ ಮಾಡಿದ ಪಟ್ಟಿಯನುಸಾರ ನಮೂದಿಸಿದ ಉಡುಗೊರೆಗಳು ಮದುವೆಯ ಸಂದರ್ಭ ನೀಡಿದ್ದರೆ ಅದನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎನ್ನುವ ಕಾಯ್ದೆಯಲ್ಲಿರುವ ಅಂಶವನ್ನು ಕೋರ್ಟ್‌ ಒತ್ತಿಹೇಳಿದೆ. ನ್ಯಾ.ವಿಕ್ರಮ್‌ ಡಿ.ಚೌಹಾಣ್‌ ಅವರಿದ್ದ ಪೀಠವು, ಈ ಮೇಲೆ ತಿಳಿಸಿದ ನಿಯಮಗಳನುಸಾರ ಮದುವೆಯ ಸಂದರ್ಭ ನೀಡಲಾದ ಉಡುಗೊರೆಗಳನ್ನು ಪಟ್ಟಿಯಲ್ಲಿ ನಮೂದಿಸಿ ಆ ಪಟ್ಟಿಗೆ ಗಂಡು ಮತ್ತು ಹೆಣ್ಣಿನ ಸಹಿ ಹಾಕಿಸಬೇಕು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next