Advertisement
ಏನಿದು ಘಟನೆ: ಪಶ್ಚಿಮ ಬಂಗಾಳದ ಝಾರ್‌ಗ್ರಾಮ್ ಜಿಲ್ಲೆಯಲ್ಲಿ ಕಳೆದ ವಾರ ಮದುವೆ ಸಮಾರಂಭ ನಡೆದಿದೆ ಮದುವೆಯಾದ ಬಳಿಕ ವರನ ಮನೆಯಲ್ಲಿ ಔತಣ ಕೂಟವನ್ನು ಕಳೆದ ಭಾನುವಾರ ಏರ್ಪಡಿಸಿದ್ದರು. ಮನೆಯವರೆಲ್ಲಾ ಔತಣ ಕೂಟದ ತಯಾರಿಯಲ್ಲಿದ್ದರು, ಬರುವ ನೆಂಟರಿಗೆ ಭರ್ಜರಿ ಊಟವನ್ನು ತಯಾರಿ ಮಾಡಲಾಗುತ್ತಿತ್ತು ಇದಕ್ಕಾಗಿ ಕೆಲವು ಮಂದಿ ಅಡುಗೆಯವರೂ ಬಂದಿದ್ದರು, ನೂರಾರು ಮಂದಿಗೆ ಬೇಕಾಗುವ ಅಡುಗೆಯನ್ನು ತಯಾರು ಮಾಡುತ್ತಿದ್ದರು. ಅಷ್ಟೋತ್ತಿಗೆ ಮದುವೆ ಮನೆಯಲ್ಲಿ ಮಾಡುತ್ತಿದ್ದ ಅಡುಗೆಯ ಪರಿಮಳ ಊರಿಗೆ ಹಬ್ಬಿತ್ತು ಅದೇ ಹೊತ್ತಿಗೆ ನೂರಾರು ಆನೆಗಳು ಬಂದು ಮದುವೆ ಮನೆಯ ಅಡುಗೆ ಕೋಣೆಗೆ ನುಗ್ಗಿ ಎಲ್ಲ ಅಡುಗೆಗಳನ್ನು ತಿಂದು ತೇಗಿದೆ.
ಜಾರ್‌ಗ್ರಾಮ್‌ನ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಆನೆಗಳು ಸಂಚರಿಸುತ್ತಿರುವುದು ಇಲ್ಲಿನ ನಿವಾಸಿಗಳಲ್ಲಿ ಭಯವನ್ನು ಹುಟ್ಟುಹಾಕಿದೆ, ಅಲ್ಲದೆ ಜೊವಾಲ್‌ಬಂಗಾ, ಕಾಜ್ಲಾ, ಕುಸುಮ್‌ಗ್ರಾಮ್, ಝೋಬಾನಿ, ಆದಿಶೋಲ್ ಮತ್ತು ಕೊಲಬಾನಿ ಮುಂತಾದ ಪ್ರದೇಶಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ ನಿವಾಸಿಗಳು ಮನೆಯಲ್ಲಿ ಅಡುಗೆ ಮಾಡಲು ಹೆದರುತ್ತಾರಂತೆ ಕಾರಣ ಅಡುಗೆಯ ಸುವಾಸನೆಗೆ ಆನೆಗಳು ಮನೆಯತ್ತ ಬರುತ್ತವೆ ಎಂಬ ಭಯದಿಂದ.
Related Articles
ಆನೆಗಳ ಉಪಟಳ ವಿಪರೀತವಾಗಿದ್ದು ಊರಿನಲ್ಲಿ ಸಮಾರಂಭ ನಡೆಸಲು ಜನ ಪಡುತ್ತಾರೆ, ಕಳೆದ ಭಾನುವಾರ ನಡೆದ ಘಟನೆ ನೆನೆದು ಊರಿನ ಕೆಲ ಕುಟುಂಬ ನಿಗಧಿಯಾಗಿದ್ದ ಮದುವೆಯನ್ನು ಮುಂದೂಡಿದ್ದಾರಂತೆ.
Advertisement
ಚುನಾವಣೆ ಮೇಲೂ ಪರಿಣಾಮ ಇಲ್ಲಿ ಆನೆಗಳ ಹಾವಳಿ ಕೇವಲ ಮದುವೆಗೆ ಮಾತ್ರವಲ್ಲದೆ ಪಂಚಾಯತ್ ಚುನಾವಣೆಯ ಮೇಲೂ ಪರಿಣಾಮ ಬೀರಿದ್ದು ಪ್ರತಿ ಭಾರಿ ನಡೆಯುವ ಚುನಾವಣೆ ಸಮಯದಲ್ಲೂ ಆನೆಗಳು ತೊಂದರೆ ನೀಡುತ್ತದೆಯಂತೆ ಹಾಗಾಗಿ ಇಲ್ಲಿ ಚುನಾವಣಾ ಪ್ರಚಾರದಿಂದಲೂ ಅಭ್ಯರ್ಥಿಗಳು ದೂರ ಉಳಿಯುತ್ತಾರಂತೆ. ಇದನ್ನೂ ಓದಿ: G20 ಶೃಂಗಸಭೆಯಲ್ಲಿ ಪುಟಿನ್ ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇವೆ: MEA