Advertisement

ಬ್ರಿಕ್ಸ್ ಶೃಂಗದಲ್ಲಿ ದೊಡ್ಡ ಜಯ; ಈಗ ಭಾರತಕ್ಕೆ ಚೀನಾ ಸಾಥ್!

01:31 PM Sep 04, 2017 | Sharanya Alva |

ಕ್ಸಿಯಾಮೆನ್/ನವದೆಹಲಿ: ಡೋಕ್ಲಾಮ್ ಬಿಕ್ಕಟ್ಟಿನ ಬಳಿಕ ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಲಭಿಸಿದೆ. ಇದೇ ಮೊದಲ ಬಾರಿಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು ಪಾಕಿಸ್ತಾನ ಹೆಸರನ್ನು ಉಲ್ಲೇಖಿಸಿದೇ ಪಾಕ್ ಪ್ರಾಯೋಜಿತ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿವೆ.

Advertisement

ಬ್ರಿಕ್ಸ್ ಸಮ್ಮೇಳನದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳಾದ ಹಕ್ಕಾನಿ ನೆಟ್ ವರ್ಕ್, ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮ್ಮದ್ ಹಾಗೂ ತಾಲಿಬಾನ್, ಆಲ್ ಖೈದಾ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಂಡಿದೆ. ಅಲ್ಲದೇ ಭಯೋತ್ಪಾದನೆ ವಿರುದ್ಧ ಹೋರಾಡುವ ಭಾರತದ ಧ್ವನಿಗೆ ಚೀನಾ ಕೂಡಾ ಧ್ವನಿಗೂಡಿಸಿದೆ.

ಬ್ರಿಕ್ಸ್ ದೇಶಗಳಲ್ಲಿ ಸೇರಿದಂತೆ ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲಾ ಭಯೋತ್ಪಾದನಾ ಘಟನೆಗಳನ್ನು ನಾವು ಖಂಡಿಸುತ್ತೇವೆ. ಉಗ್ರವಾದವನ್ನು ಯಾವುದೇ ನೆಲೆಯಲ್ಲೂ ಸಮರ್ಥಿಸಿಕೊಳ್ಳಬಾರದು ಎಂದು ಬ್ರಿಕ್ಸ್ ನಿರ್ಣಯ ಕೈಗೊಂಡಿದೆ. ಬ್ರಿಕ್ಸ್  ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಪಾಕಿಸ್ತಾನದ ಹೆಸರನ್ನು ಹೆಸರಿಸಿಲ್ಲ. ಆದರೆ ಪ್ರಾಯೋಜಿತ ಭಯೋತ್ಪಾದನೆಯನ್ನು ಉಲ್ಲೇಖಿಸಿ ಹೇಳಿಕೆಯನ್ನು ನೀಡಿದೆ.

ಡೋಕ್ಲಾಮ್ ಗಡಿ ಬಿಕ್ಕಟ್ಟಿನ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಸೋಮವಾರ ಪರಸ್ಪರ ಹಸ್ತಲಾಘವ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next