Advertisement

ಬಡವರಿಗೆ ಹಬ್ಬದ ಇಟ್ಟಿಗೆಯ ಸೂರು: ಪೊಂಗಾಲಾ ನೆಲೆ

03:45 AM May 16, 2017 | Team Udayavani |

ತಿರುವನಂತಪುರ: ಇಲ್ಲಿನ ಅಟ್ಟುಕಲ್‌ ದೇವಿ ದೇಗುಲದಲ್ಲಿ ನಡೆಯುವ ಪ್ರಸಿದ್ಧ ಪೊಂಗಾ ಲಾ (ಬೆಳೆ ಹಬ್ಬ) ಎಲ್ಲ ಹಬ್ಬಗಳಂತಲ್ಲ. ಲಕ್ಷಾಂ ತರ ಮಂದಿ ಸೇರುವ ಈ ಹಬ್ಬ ಇದೀಗ ಬಡ ವರಿಗೆ ಸೂರು ಕಟ್ಟಿಕೊಳ್ಳಲೂ ನೆರವಾಗಲಿದೆ.

Advertisement

ಈ ಹಬ್ಬದಲ್ಲಿ ಜನರು ಪೊಂಗಾಲಾ ಹೆಸರಿನ ಸಿಹಿ ತಯಾರಿಸಿ, ದೇವರನ್ನು ಪೂಜಿಸುತ್ತಾರೆ. ಇದಕ್ಕಾಗಿ ಭಕ್ತರೇ ಹೊಸ ಇಟ್ಟಿಗೆಗಳನ್ನು ತಂದು ದೇಗುಲ ಸನಿಹ ಅಡುಗೆ ಮಾಡುತ್ತಾರೆ. ಅಟ್ಟುಕಲ್‌ ದೇಗುಲದ ಸನಿಹ ಸುಮಾರು 7 ಕಿ.ಮೀ.ವರೆಗೂ ಭಕ್ತರು ಪೊಂಗಾಲಾ ಆಚರಣೆ ಪ್ರಯುಕ್ತ ಅಡುಗೆ ಮಾಡಿ ಪ್ರಾರ್ಥಿಸುತ್ತಾರೆ. ಮಹಿಳಾ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಇನ್ನೊಂದು ವಿಶೇಷ. 

ಪೊಂಗಾಲಾ ಬಳಿಕ ಅಡುಗೆಗೆ ಬಳಸಿದ ಇಟ್ಟಿಗೆ ವ್ಯರ್ಥವಾಗುವುದಿಲ್ಲ. ಅದೀಗ, ಬಡವರಿಗೆ ಸೂರು ಕಟ್ಟಿಕೊಳ್ಳಲು ನೆರವಾಗುತ್ತಿವೆ. ತಿರುವನಂತಪುರ ನಗರ ಪಾಲಿಕೆ ಇಟ್ಟಿಗೆಗಳನ್ನು ಸಂಗ್ರಹಿಸಿ, ಕಡಿಮೆ ಬೆಲೆಗೆ ಮನೆಗಳನ್ನು ಕಟ್ಟಿಕೊಡಲಿದೆ. ವರ್ಷಂಪ್ರತಿ ಲಕ್ಷಗಟ್ಟಲೆ ಇಟ್ಟಿಗೆಗಳು ಪೊಂಗಾಲಾ ಹಬ್ಬದಿಂದ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ಇಟ್ಟಿಗೆ ಮುಂದಿನ ವರ್ಷಕ್ಕೆ ಸರ್ಕಾರದ “ಲೈಫ್’ ವಸತಿ ಯೋಜನೆಗೆ ಬಳಕೆಯಾಗುತ್ತದೆ. ಇದರಿಂದ ಬಡವರಿಗೆ ಸೂರೂ ಸಿಕ್ಕಿತು, ಸ್ವತ್ಛತೆ ದೃಷ್ಟಿಯಿಂದಲೂ ಪ್ರಯೋಜನಕಾರಿ ಎನ್ನುತ್ತಾರೆ ತಿರುವನಂತಪುರ ಮೇಯರ್‌ ವಿ.ಕೆ. ಪ್ರಶಾಂತ್‌.

ಹಿಂದೆಲ್ಲ ಈ ಇಟ್ಟಿಗೆಗಳನ್ನು ವ್ಯಾಪಾರಿಗಳು ಸಂಗ್ರಹಿಸಿ ಮಾರುತ್ತಿದ್ದರು. ಇನ್ನು ಇದನ್ನು ಪಾಲಿಕೆ ಸಂಗ್ರಹಿಸಿ ಬಡವರಿಗೆ ನೀಡಲಿದೆ. ಒಂದು ಇಟ್ಟಿಗೆಗೆ 20ರಿಂದ 30 ರೂ. ಬೆಲೆ ಇದ್ದು, ಪೊಂಗಾಲಾ ಆಚರಣೆಯಿಂದ ಮನೆ ಕನಸಿದ್ದವರಿಗೆ ವರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next