Advertisement

ಡೈರಿ ಸ್ಫೋಟ ಎಫೆಕ್ಟ್: ಖಾಸಗಿ ಕಾರಿನಲ್ಲಿ ಸಿಎಂ ಅಜ್ಞಾತ ಸ್ಥಳಕ್ಕೆ

02:06 PM Feb 24, 2017 | Sharanya Alva |

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರಿಂದ ಕಾಂಗ್ರೆಸ್ ಹೈಕಮಾಂಡ್ ಗೆ ನೂರಾರು ಕೋಟಿ ರೂಪಾಯಿ ಕಪ್ಪ ಸಲ್ಲಿಕೆಯಾಗಿರುವ ಮಾಹಿತಿ ಇದೆ ಎನ್ನಲಾದ ಡೈರಿ ವಿವರಗಳನ್ನು ರಾಷ್ಟ್ರೀಯ ವಿದ್ಯುನ್ಮಾನ ಮಾಧ್ಯಮಗಳು ಬಯಲು ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿಯಾಗಿ ಮೌನಕ್ಕೆ ಶರಣಾಗಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

Advertisement

ಡೈರಿ ಮಾಹಿತಿ ಸ್ಫೋಟದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ನಿವಾಸದಲ್ಲಿಯೇ ಏಕಾಂಗಿಯಾಗಿದ್ದು, ಯಾರ ಭೇಟಿಗೂ ಅವಕಾಶ ಕೊಟ್ಟಿಲ್ಲ. ಮತ್ತೊಂದೆಡೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬೀಳಲಿದೆ ಎಂದು ಬಿಎಸ್ ಯಡಿಯೂರಪ್ಪ ಮತ್ತೆ ಬಾಂಬ್ ಸಿಡಿಸಿದ್ದಾರೆ.

ಕೇವಲ 15 ನಿಮಿಷದಲ್ಲೇ ದೇಗುಲ ದರ್ಶನ ಅಂತ್ಯ:
ಡೈರಿ ವಿಚಾರದಲ್ಲಿ ಮಾಧ್ಯಮದವರ ಕಣ್ತಪ್ಪಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಚಾಮರಾಜಪೇಟೆಯ ದೇಗುಲಕ್ಕೆ ಭೇಟಿ ನೀಡಿ, ತರಾತರಿಯಲ್ಲಿ ಪೂಜೆ ಸಲ್ಲಿಸಿ, ಕೇವಲ 15 ನಿಮಿಷದಲ್ಲೇ ಯಾರ ಕೈಗೂ ಸಿಗದೆ ಅಲ್ಲಿಂದ ನಿವಾಸಕ್ಕೆ ಪ್ರಯಾಣ ಬೆಳೆಸಿದ್ದರು. ದೇಗುಲದಿಂದ ಕಾವೇರಿ ನಿವಾಸಕ್ಕೆ ಬಂದ ಬಳಿಕ ಖಾಸಗಿ ಕಾರಿನಲ್ಲಿ ಯಾವುದೇ ಬೆಂಗಾವಲು ಪಡೆ ಇಲ್ಲದೆ ಅಜ್ಞಾತ ಸ್ಥಳಕ್ಕೆ ತೆರಳಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next