ಕೊರಟಗೆರೆ: ಬಡ ರೈತರು ಮತ್ತು ಸಾರ್ವಜನಿಕರಿಂದ ಅಧಿಕಾರಿಗಳು ಲಂಚ ಪಡೆಯೋದನ್ನಾ ನಾವು ಕೇಳಿದ್ದೀವಿ-ನೋಡಿದ್ದೀವಿ.. ಆದರೇ ಸರಕಾರಿ ಸಿಬಂದಿಯ ಸಂಬಳ ನೀಡೋದಿಕ್ಕೆ ಲಂಚ ಕೇಳಿ ಸಿಕ್ಕಿಬಿದ್ದ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ.ಜಿ.ಕೆ ಲೋಕಾಯುಕ್ತ ದೂರಿನಂತೆ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರದ ದೂರಿನ ಅನ್ವಯ ಬೆಂಗಳೂರು ಆಯುಕ್ತ ಆದೇಶದಂತೆ ಅಮಾನತು ಆಗಿರುವ ಅಧಿಕಾರಿ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ.ಜಿ.ಕೆ ಕರ್ತವ್ಯಲೋಪ ಮತ್ತು ಭ್ರಷ್ಟಚಾರದ ದೂರಿನ ಅನ್ವಯ ಅಮಾನತು ಆದ ಅಧಿಕಾರಿ. ಸಮಾಜ ಕಲ್ಯಾಣ ಇಲಾಖೆಯ ಕಂಪ್ಯೂಟರ್ ಆಪರೇಟರ್(ಹೊರಗುತ್ತಿಗೆ) ನೌಕರನ ಪ್ರತಿತಿಂಗಳ ಸಂಬಳ ನೀಡಲು ಲಂಚದ ಹಣ ನೀಡುವಂತೆ ತಿಳಿಸಿದ ಹಿನ್ನಲೆಯಲ್ಲಿ ಆತ ತಕ್ಷಣವೇ ತುಮಕೂರು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಂಪ್ಯೂಟರ್ ಆಪರೇಟರ್ಗೆ 2-3ತಿಂಗಳಿಗೊಮ್ಮೆ ಸಂಬಳ ಮಾಡುತ್ತಿದ್ದು ಸಂಬಳವಾದಾಗ ಸಹಾಯಕ ನಿರ್ದೇಶಕಿ ಉಮಾದೇವಿ.ಜಿ.ಕೆಗೆ ಪ್ರತಿ ತಿಂಗಳು 1500 ರೂ ಲಂಚದ ಹಣ ನೀಡಬೇಕಿದೆ. ಪ್ರತಿ ತಿಂಗಳು ಗೈರುಹಾಜರಿಯ ಸಂಬಳ 4500 ರೂ ಹಾಗೂ ಜುಲೈ ತಿಂಗಳ ಗೈರುಹಾಜರಿಯ 3 ಸಾವಿರ ಸೇರಿ ಒಟ್ಟು 7500 ಲಂಚದ ಹಣ ನೀಡುವಂತೆ ಸಹಾಯಕ ನಿರ್ದೇಶಕಿ ಬೇಡಿಕೆ ಇಟ್ಟು ಕೊನೆಗೆ 7 ಸಾವಿರ ನೀಡುವಂತೆ ಒತ್ತಾಯ ಮಾಡಿದ್ದಾರೆ ಎಂದು ನೌಕರ ಬಾಲಾಜಿ ಎಂಬಾತ ೨೦೨೨ರ ಡಿ.೩೦ರಂದು ತುಮಕೂರು ಲೋಕಾಯುಕ್ತ ಕಚೇರಿಗೆ ಕಾನೂನು ಕ್ರಮಕ್ಕಾಗಿ ದೂರು ದಾಖಲಿಸಿದ್ದಾನೆ.
ನೌಕರ ಬಾಲಜಿಯ ದೂರಿನ ಅನ್ವಯ2022 ನೇ ಡಿ.30 ರಂದೇ ಲೋಕಾಯುಕ್ತ ಠಾಣೆಯಲ್ಲಿ ಸಹಾಯಕ ನಿರ್ದೇಶಕಿ ಉಮಾದೇವಿ ವಿರುದ್ದ ಪ್ರಕರಣ ದಾಖಲಾಗಿದೆ. 2023 ರ ಮಾ.3 ರಂದು ಆರೋಪಿಯು ನ್ಯಾಯಾಲಯದಿಂದ ಜಾಮೀನಿನ ಮೇಲೆ ಲೋಕಾಯುಕ್ತ ಠಾಣೆಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
Related Articles
ಲಂಚದ ಹಣಕ್ಕೆ ಅಪೇಕ್ಷೆಪಟ್ಟು ಕರ್ನಾಟಕ ನಾಗರೀಕ ಸೇವಾ ನಿಮಯ 2021ರ 3 ನ್ನು ಉಲ್ಲಂಘಿಸಿರುತ್ತಾರೆ ಎಂದು ಪ್ರಸ್ತಾಪ ಮಾಡಲಾಗಿದೆ. ನಂತರ ಕೊರಟಗೆರೆಯ ಸಮಾಜ ಕಲ್ಯಾಣ ಇಲಾಖೆಗೇ ಹಾಜರಾಗಿ ಕೆಲಸವನ್ನು ನಿರ್ವಹಣೆ ಮಾಡಿದ್ದಾರೆ.
ಕೊರಟಗೆರೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ ವಿರುದ್ದ ದಾಖಲಾಗಿರುವ ಕರ್ತವ್ಯಲೋಪ ಮತ್ತು ಭ್ರಷ್ಟಚಾರದ ದೂರಿನ ಅನ್ವಯ ಇಲಾಖೆಯ ವಿಚಾರಣೆ ಕಾಯ್ದಿರಿಸಿ ತಕ್ಷಣಕ್ಕೆ ಬರುವಂತೆ ಮೇ.೫ರಂದು ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ಕುಮಾರ್.ಕೆ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಮೇಲಾಧಿಕಾರಿ ಅನುಮತಿ ಪಡೆಯದೇ ಕೇಂದ್ರಸ್ಥಾನ ಬೀಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರಭಾರಿ ಸಹಾಯಕ ನಿರ್ದೇಶಕರ ನೇಮಕ
ಕೊರಟಗೆರೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ ಅಮಾನತು ಆದ ಹಿನ್ನಲೆಯಲ್ಲೇ ತುಮಕೂರು ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ ಅವರು ಪಾವಗಡದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರಿಗೆ ಕೊರಟಗೆರೆಯ ಪ್ರಭಾರ ಸಹಾಯಕ ನಿರ್ದೇಶಕನಾಗಿ ನೇಮಿಸಿ ಆದೇಶ ಮಾಡಿದ್ದಾರೆ.
ದೂರು ನೀಡಿ ತನ್ನ ಕೆಲಸವೇ ಬಿಟ್ಟ ನೌಕರ
ಕೊರಟಗೆರೆ ಸಮಾಜ ಕಲ್ಯಾಣ ಇಲಾಖೆಯ ಕಂಪ್ಯೂಟರ್ ಆಪರೇಟರ್ ಬಾಲಾಜಿ.ಕೆ.ಎಸ್(ಹೊರಗುತ್ತಿಗೆ) ನೌಕರ ತನಗಾದ ಅನ್ಯಾಯ ವಿರುದ್ದ ತುಮಕೂರು ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ ತಕ್ಷಣವೇ ಆತನ ಮೇಲೆ ರಾಜಕೀಯ ಮತ್ತು ವೈಯಕ್ತಿಕ ಕಿರುಕುಳ ಪ್ರಾರಂಭವಾಗಿವೆ. ಸಹಾಯಕ ನಿರ್ದೇಶಕಿ ಮೇಲೆ ಲಂಚದ ಹಣದ ಪ್ರಕರಣ ದಾಖಲಾದ್ರು ಜಾಮೀನಿನ ಮೇಲೆ ಮತ್ತೇ ಅದೇ ಸ್ಥಳಕ್ಕೆ ಆಗಮಿಸಿದ ಹಿನ್ನಲೆ ನೌಕರ ಕೆಲಸಕ್ಕೆ ಬರದೇ ಗೈರು ಆಗಿದ್ದು ಆತನ ಮೇಲೆ ಮತ್ತಷ್ಟು ರಾಜಕೀಯ ನಾಯಕರ ಒತ್ತಡದ ಪ್ರಭಾವ ಬೀರಿದೆ ಎನ್ನಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಬಾಲಾಜಿ.ಕೆ.ಎಸ್ ದೂರಿನ ಅನ್ವಯ ಸಹಾಯಕ ನಿರ್ದೇಶಕಿ ಉಮಾದೇವಿ.ಜಿ.ಕೆ ವಿರುದ್ದ ಲಂಚದ ಹಣದ ವಿಚಾರವಾಗಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣವಿದೆ. ಕರ್ತವ್ಯಲೋಪ ಮತ್ತು ಭ್ರಷ್ಟಚಾರದ ಆರೋಪದ ಅನ್ವಯ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕರಣದ ವಿಚಾರಣೆ ಬಾಕಿ ಇರಿಸಿ ಅಮಾನತು ಆದೇಶ ಮಾಡಿದ್ದಾರೆ. ಪಾವಗಡದ ಮಲ್ಲಿಕಾರ್ಜುನ್ ಎಂಬುವರನ್ನ ಕೊರಟಗೆರೆಯ ಪ್ರಭಾರಿ ಸಹಾಯಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಎಸ್.ಕೃಷ್ಣಪ್ಪ. ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ. ತುಮಕೂರು