Advertisement

ಬಿಆರ್‌ಐ v/s ಬಿ3ಡಬ್ಲ್ಯು ! ಚೀನದ ಸಂಚಿಗೆ ಜಿ 7 ರಾಷ್ಟ್ರಗಳಿಂದ ತಿರುಗುಬಾಣ

02:49 AM Jun 28, 2022 | Team Udayavani |

ಎಲ್ಮಾವು (ಜರ್ಮನಿ): ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಬಹುಕೋಟಿ ಡಾಲರ್‌ ಮೌಲ್ಯದ ಬೆಲ್ಟ್ ಆ್ಯಂಡ್‌ ರೋಡ್‌ ಇನಿಷಿಯೇಟಿವ್‌ (ಬಿಆರ್‌ಐ) ಮೂಲಕ ಸಾಲದ ಜಾಲಕ್ಕೆ ಸಿಲುಕಿಸುವ ಚೀನದ ಸಂಚಿಗೆ ದೊಡ್ಡ ಮಟ್ಟದ ಹೊಡೆತ ನೀಡಲು ಜಿ7 ರಾಷ್ಟ್ರ ಗಳು ಮುಂದಾಗಿವೆ.

Advertisement

ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೊಸ ಪರಿವರ್ತನೆ ಯನ್ನು ತರುವಂಥ ಮೂಲ ಸೌಕರ್ಯ ಯೋಜನೆಗಳನ್ನು ಜಾರಿ ಮಾಡುವ ಹೊಸ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಇತರ ಜಿ7 ನಾಯಕರು ಘೋಷಿಸಿದ್ದಾರೆ. ಈ ಮೂಲಕ ವಿಸ್ತರಣ ವಾದಿ ಚೀನಕ್ಕೆ ಸಡ್ಡು ಹೊಡೆಯುವ ಮಾಸ್ಟರ್‌ಪ್ಲ್ರಾನ್‌ ರೂಪಿಸಿದ್ದಾರೆ.

ಜರ್ಮನಿಯಲ್ಲಿ ಸೋಮವಾರ ನಡೆದ ಜಿ7 ಶೃಂಗದಲ್ಲಿ ಈ ಮಹತ್ವದ ಘೋಷಣೆ ಮಾಡಲಾಗಿದೆ. 2027ರೊಳಗಾಗಿ 600 ಶತಕೋಟಿ ಡಾಲರ್‌ ಮೊತ್ತ ವನ್ನು ಸಂಗ್ರಹಿಸಿ, ಆ ಮೊತ್ತದಿಂದ ಅಭಿವೃದ್ಧಿಶೀಲ ದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ಯೋಜನೆ ಇದು. ಬಿಲ್ಡ್‌ ಬ್ಯಾಕ್‌ ಬೆಟರ್‌ ವರ್ಲ್ಡ್(ಬಿ3ಡಬ್ಲ್ಯು) ಎಂಬ ಹೆಸರಿನಲ್ಲಿ ಈ ಯೋಜನೆ ಜಾರಿಯಾಗಲಿದೆ.

ಏನಿದು ಚೀನದ ಬಿಆರ್‌ಐ?
2013ರಲ್ಲಿ ಘೋಷಣೆಯಾದ ಯೋಜನೆಯಿದು. ಏಷ್ಯಾದಿಂದ ಯುರೋಪ್‌ವರೆಗೆ ಮತ್ತು ಅದ ರಿಂದಾಚೆಗೆ ರೈಲ್ವೇ, ಬಂದರು, ಹೆದ್ದಾರಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಚೀನದ ಈ ಯೋಜನೆಗೆ 100ಕ್ಕೂ ಹೆಚ್ಚು ದೇಶಗಳು ಒಪ್ಪಿವೆ. ಆದರೆ ಬಿಆರ್‌ಐ ಹೆಸರಲ್ಲಿ ಚೀನವು ಶ್ರೀಲಂಕಾದಂಥ ದೇಶ ಗಳಿಗೆ ಸಾಲ ನೀಡಿ, ಸಾಲದ ಶೂಲಕ್ಕೆ ಸಿಲುಕಿಸುತ್ತಿದೆ.

ಏನಿದು ಬಿ3ಡಬ್ಲ್ಯು ಯೋಜನೆ?
ಅಮೆರಿಕ, ಬ್ರಿಟನ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ಜಪಾನ್‌ ಮತ್ತು ಇಟಲಿ ದೇಶಗಳು ಖಾಸಗಿ ಸಂಸ್ಥೆಗಳಿಂದ ಸಾಲ ಸೇರಿದಂತೆ ಹಲವು ಮೂಲಗಳಿಂದ 600 ಶತಕೋಟಿ ಡಾಲರ್‌ ಬಂಡವಾಳ ಸಂಗ್ರಹಿಸಿ, ಅಭಿವೃದ್ಧಿಶೀಲ ದೇಶಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಯೋಜನೆಯಿದು. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ 4 ಪ್ರಮುಖ ಕ್ಷೇತ್ರಗಳಾದ ಆರೋಗ್ಯ, ಡಿಜಿಟಲ್‌ ಸಂಪರ್ಕ, ಲಿಂಗ ಸಮಾನತೆ ಮತ್ತು ಹವಾಮಾನ- ಇಂಧನ ಭದ್ರತೆಯಲ್ಲಿ ಸುಧಾರಣೆ ತರುವುದು ಕೂಡ ಇದರ ಉದ್ದೇಶವಾಗಿದೆ.

Advertisement

ಭಾರತಕ್ಕೇನು ಲಾಭ?
-ಆರೋಗ್ಯಸೇವೆ, ಡಿಜಿಟಲ್‌ ಸಂಪರ್ಕ,ಲಿಂಗ ಸಮಾನತೆ, ಹವಾಮಾನ ಮತ್ತು ಇಂಧನ ಭದ್ರತೆಯಂಥ ಪ್ರಮುಖ ವಲಯಗಳ ಸುಧಾರಣೆಗೆ ಒತ್ತು ಸಿಗಲಿದೆ.
-ಇಂಗಾಲದ ಪ್ರಮಾಣ ತಗ್ಗಿಸುವ ಭಾರತದ ಪ್ರಯತ್ನಕ್ಕೆ ಹಣಕಾಸು ನೆರವು ಲಭಿಸಲಿದೆ.
-ಆಹಾರ ಭದ್ರತೆ ವಿಸ್ತರಣೆ, ಕೃಷಿ ವ್ಯವಸ್ಥೆ ಸುಧಾರಣೆಗಾಗಿ ಭಾರತದಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮ 30 ದಶಲಕ್ಷ ಡಾಲರ್‌ ಹೂಡಿಕೆ ಮಾಡಲಿದೆ.
-ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲು ಭಾರತದ ಕಂಪೆನಿಗಳು, ಉದ್ಯಮಿಗಳಿಗೆ ನೆರವಾಗಲಿದೆ.
-ದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗ ಲಿದೆ, ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next