Advertisement

ಭಾರತ –ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

09:05 AM Nov 19, 2022 | Team Udayavani |

ಲಂಡನ್‌: ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಪೂರ್ಣಗೊಳಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡಲಾಗುವುದು ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹೇಳಿದರು.

Advertisement

ಇಂಡೋನೇಷ್ಯಾದ ಬಾಲಿಯಲ್ಲಿ ಪೂರ್ಣಗೊಂಡ ಜಿ20 ಶೃಂಗಸಭೆಯ ಅನಂತರ ಬ್ರಿಟನ್‌ ಸಂಸತ್‌ನಲ್ಲಿ ಈ ಬಗ್ಗೆ ಪ್ರಸ್ತಾವಿಸಿದ ಸುನಕ್‌, “ಜಿ20 ಶೃಂಗಸಭೆ ನೇಪಥ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಚರ್ಚಿಸಲಾಯಿತು.

ಆಕ್ಷೇಪಗಳು ಇದ್ದರೆ ಅದನ್ನೂ ಶೀಘ್ರದಲ್ಲೇ ನಿವಾರಿಸಿ, ಆದಷ್ಟು ಬೇಗ ಈ ಒಪ್ಪಂದ ಏರ್ಪಡುವ ನಿಟ್ಟಿನಲ್ಲಿ ಎರಡೂ ದೇಶಗಳು ಕಾರ್ಯ ನಿರ್ವಹಿಸಲು ಬದ್ಧವಾಗಿವೆ,’ ಎಂದರು.

ಇದನ್ನೂ ಓದಿ : 7 ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಮೂವರು ಸದಸ್ಯರ ನೇಮಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next