Advertisement
ಸದ್ಯ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಗರಿಷ್ಠ 638ಕ್ಕೆ ಏರಿಕೆಯಾಗಿದೆ. ಅಂದರೆ, ದೆಹಲಿಯ ರಿಯಲ್ ಟೈಮ್ ಏರ್ ಕ್ವಾಲಿಟಿ ಇಂಡೆಕ್ಸ್(ಎಕ್ಯೂಐ) 100 ದಾಟಿದರೆ ಆ ಗಾಳಿ ಆರೋಗ್ಯಕ್ಕೆ ಹಾನಿಕರ ಎನ್ನುತ್ತದೆ. ಆದರೆ, ದೆಹಲಿಯಲ್ಲಿ ಈ ಪ್ರಮಾಣ 600 ದಾಟಿದ್ದು ಉಸಿರಾಡುವ ಗಾಳಿಯಲ್ಲಿ ಸಂಪೂರ್ಣ ವಿಷ ಬೆರೆತಿದೆ ಎಂದು ವರದಿ ತಿಳಿಸಿದೆ.
Related Articles
Advertisement
151-200 ರ ಮಾಲಿನ್ಯ ಪ್ರಮಾಣದಿಂದ ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಮೇಲೆ ಏನೋ ಸಮಸ್ಯೆಯಾಗುತ್ತಿದೆ ಎಂಬುದು ಅರಿವಾಗುತ್ತದೆ. ಅಲ್ಲದೆ ಕೆಲವೊಂದು ಸೂಕ್ಷ ವ್ಯಕ್ತಿಗಳ ಮೇಲೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಲ್ಲೂ ಮಕ್ಕಳು ಮತ್ತು ವಯಸ್ಕರ ಮೇಲೆ ಅಡ್ಡ ಪರಿಣಾಮ ಬೀರುವುದಲ್ಲದೇ, ಅಸ್ತಮಾ ಸೇರಿದಂತೆ ಕೆಲವೊಂದು ರೋಗಗಳ ಹೊಂದಿರುವವರಿಗೂ ಭಾರಿ ಸಮಸ್ಯೆಯಾಗುತ್ತದೆ.
ಗಂಭೀರ ಸ್ಥಿತಿ: ಎಕ್ಯೂಐ 201-300ರ ಗಾಳಿಯ ಮಾಲಿನ್ಯದಿಂದ ಗಂಭೀರವಾದ ಸಮಸ್ಯೆಗಳೇ ಸೃಷ್ಟಿಯಾಗಬಹುದು. ಇಂಥ ವೇಳೆ ಆರೋಗ್ಯದ ತುರ್ತು ಪರಿಸ್ಥಿತಿ ಘೋಷಿಸಬೇಕಾಗಿ ಬರಬಹುದು. ಅಲ್ಲದೆ ಎಲ್ಲ ಜನರಿಗೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಗಾಳಿಯಿಂದ ಮಕ್ಕಳು, ಅಸ್ತಮಾ ರೋಗಿಗಳು ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಗಳಲ್ಲಿ ನರಳುತ್ತಿರುವವರಿಗೆ ಹೆಚ್ಚಿನ ಹಾನಿಯುಂಟಾಗುತ್ತದೆ.
ಎಕ್ಯೂಐ 301+ ಆದರೆ ಈ ಗಾಳಿ ತೀರಾ ಅಪಾಯಕಾರಿ ಎಂದೇ ಪರಿಗಣಿಸಲ್ಪಡುತ್ತದೆ. ಎಲ್ಲ ಸಮುದಾಯದ ಜನರಿಗೂ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಗಾಳಿ ಈ ಪ್ರಮಾಣ ಮೀರಿದಾಗ ಪ್ರತಿಯೊಬ್ಬರು ಮನೆ ಬಿಟ್ಟು ಆಚೆ ಬರದಿರುವುದೇ ಉತ್ತಮ.
ತುಂಬಾ ಮಂದಿಗೆ ಮಾಲಿನ್ಯದಿಂದ ಅಪಾಯವೇನು ಎಂಬ ಬಗ್ಗೆ ಅರಿವೇ ಇರುವುದಿಲ್ಲ. ಅಲ್ಲದೆ ಮನೆಯೊಳಗಿದ್ದವರಿಗೆ ಇದರಿಂದ ಹೆಚ್ಚೇನೂ ಅಪಾಯವೂ ಇಲ್ಲ ಅಂತೆಂದುಕೊಂಡಿರುತ್ತಾರೆ. ಆದರೆ ಹೊರಗೆ ಓಡಾಡುವವರಿಗಿಂತ ಮನೆಯೊಳಗಡೆ ಇರುವವರಿಗೇ ಹೆಚ್ಚು ಅಪಾಯ ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ.
2015ರಲ್ಲಿ ದೆಹಲಿ ಮೀರಿಸಿದ್ದ ಬೆಂಗಳೂರುಅಚ್ಚರಿ ಎಂದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ-ಬೆಸ ನಿರ್ಧಾರ ಜಾರಿಗೆ ತಂದು ದೆಹಲಿಯಲ್ಲಿ ವಾಹನಗಳ ಓಡಾಟ ಕಡಿಮೆ ಮಾಡಿದ್ದಾಗ ವಾಯು ಮಾಲಿನ್ಯ ಕಡಿಮೆಯಾಗಿತ್ತು. ವಿಚಿತ್ರವೆಂದರೆ, ಆಗ ಬೆಂಗಳೂರಿನ ಮಾಲಿನ್ಯ ಪ್ರಮಾಣ ದೆಹಲಿಯನ್ನೂ ಮೀರಿಸಿತ್ತು. ಅಂದರೆ, ಆಗ ದೆಹಲಿಯ ಮಾಲಿನ್ಯ ಪ್ರಮಾಣ 182(ಎಕ್ಯೂಐ) ಇದ್ದರೆ, ಬೆಂಗಳೂರಿನ ಮಾಲಿನ್ಯ ಪ್ರಮಾಣ 310(ಎಕ್ಯೂಐ)ಗೆ ಏರಿಕೆಯಾಗಿತ್ತು. ಬೆಂಗಳೂರಿನ ವಿವಿಧೆಡೆ ದಾಖಲಾದ ಮಾಲಿನ್ಯದ ಪ್ರಮಾಣ
ಪೀಣ್ಯ – 161(ಎಕ್ಯೂಐ)
ಸಿಟಿ ರೈಲ್ವೆ ಸ್ಟೇಷನ್ – 130(ಎಕ್ಯೂಐ)
ದೆಹಲಿಯಲ್ಲಿನ ಮಾಲಿನ್ಯದ ಪ್ರಮಾಣ
ಆì.ಕೆ.ಪುರಂ – 638(ಎಕ್ಯೂಐ)
ಸಿರಿಪೋರ್ಟ್ – 325(ಎಕ್ಯೂಐ)
ಶಾದಿಪುರ – 318(ಎಕ್ಯೂಐ)
ದೇಶದ ಬೇರೆ ಬೇರೆ ನಗರಗಳ ವಾಯು ಮಾಲಿನ್ಯ ಪ್ರಮಾಣ
ಪುಣೆ – 316(ಎಕ್ಯೂಐ)
ಕಾನ್ಪುರ – 416(ಎಕ್ಯೂಐ)
ವಾರಾಣಸಿ – 315(ಎಕ್ಯೂಐ)
ಮಾಲಿನ್ಯದ ಅಪಾಯಗಳು ಎಕ್ಯೂಐ ಅಂಕಿ ಅಂಶ
70 ಲಕ್ಷ: ವರ್ಷಕ್ಕೆ ಮಾಲಿನ್ಯದಿಂದ ಸಾಯುವವರ ಸಂಖ್ಯೆ. ಅಂದರೆ ವರ್ಷಕ್ಕೆ ಸಾಯುವ 8 ಮಂದಿಯಲ್ಲಿ ಒಬ್ಬರು ಮಾಲಿನ್ಯದಿಂದಾಗಿಯೇ ಸಾಯುತ್ತಾರೆ. ಶೇ.54: ಹೊರಗೆ ಕೆಲಸ ಮಾಡುವವರಿಗಿಂತ ಮನೆಯೊಳಗೆ ಇರುವ ಶೇ.54 ರಷ್ಟು ಮಹಿಳೆಯರು ಮಾಲಿನ್ಯ ತಂದೊಡ್ಡುವ ರೋಗಗಳಿಂದ ಸಾಯುತ್ತಾರೆ. 6,00000: ಇಡೀ ಜಗತ್ತಿನಲ್ಲೇ ವಾಯು ಮಾಲಿನ್ಯದಿಂದ ಸಾವನ್ನಪ್ಪುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಮಾಲಿನ್ಯದಿಂದ ಬರುವ ಕಾಯಿಲೆಗಳು
-ಅಸ್ತಮಾ
-ಶ್ವಾಸಕೋಶ ಸಂಬಂಧಿ ಕಾಯಿಲೆಗಳು
-ಶ್ವಾಸಕೋಶ ಕ್ಯಾನ್ಸರ್
-ಹೃದಯ ಸಂಬಂಧಿ ಕಾಯಿಲೆಗಳು