ನಂತರ ಮಾತನಾಡಿದ ಅವರು ಆರೋಗ್ಯ ಇಲಾಖೆಯ ಮೂಲಕ ಪ್ರತಿ ವರ್ಷದ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸ್‍ರ್ ಜಾಗೃತಿ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
Advertisement
ಸ್ತನ ಕ್ಯಾನ್ಸ್‍ರ್ ಒಂದು ಗಂಭೀರ ಕಾಯಿಲೆಯಾಗಿದ್ದು ಸೂಕ್ತ ತಪಾಸಣೆ ಮತ್ತು ಚಿಕಿತ್ಸೆಯಿಂದ ಇದನ್ನು ಪ್ರಥಮ ಹಂತದಲ್ಲಿಯೇ ಗುಣಪಡಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಮಹಿಳೆಯರು ಸೂಕ್ತ ತಪಾಸಣೆಯನ್ನು ವೈದ್ಯರಲ್ಲಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಇದಕ್ಕೂ ಪೂರ್ವ ಮಾತನಾಡಿದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಸ್ತನ ಕ್ಯಾನ್ಸ್‍ರ್ ಕುರಿವು ವಿವರವನ್ನು ನೀಡುತ್ತಾ ಮಹಿಳೆಯರು ಪ್ರಾಥಮಿಕವಾಗಿ ತಾವೇ ಪರೀಕ್ಷಿಸಿಕೊಳ್ಳಬಹುದಾದ ಕಾಯಿಲೆ ಇದಾಗಿದ್ದು ಯಾರೂ ಕೂಡಾ ನಿರ್ಲಕ್ಷ ಮಾಡದೇ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ ಮಾಡಿದರೆ ಇದೊಂದು ಗಂಭೀರ ಕಾಯಿಲೆಯಾಗಿದೆ ಎಂದರು.
ಸ್ತ್ರೀರೋಗ ತಜ್ಞೆ ಡಾ. ಶಂಮ್ಸ್ ನೂರ್ ಅವರು ಮಾತನಾಡಿ ಸ್ತನ ಕ್ಯಾನ್ಸ್‍ರ್‍ನ್ನು ಪ್ರತಿಯೋರ್ವ ಮಹಿಳೆ ತಾವೇ ಪರೀಕ್ಷಿಸಿಕೊಳ್ಳಬಹುದು. ಯಾವುದೇ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಯುವುದು ಮುಖ್ಯವಾಗಿದ್ದು ಇದನ್ನೂ ಕೂಡಾ ಮಹಿಳೆಯರು ತಮ್ಮ ಜೀವನ ಪದ್ಧತಿಯಿಂದಲೇ ತಡೆಯಬಹುದು ಎಂದರು.
ನಂತರ ತಾಲೂಕಾ ಆಸ್ಪತ್ರೆಯಿಂದ ಹೊರಟ ಜಾಗೃತಿ ಜಾಥಾವು ಆಸ್ಪತ್ರೆ ರಸ್ತೆಯಿಂದ ಇಂದಿರಾ ಕ್ಯಾಂಟೀನ್ ಮೂಲಕ ರಾಷ್ಟ್ರೀಯ ಹೆದ್ದಾರಿಯಾಗಿ ಶಂಶುದ್ಧೀನ್ ಸರ್ಕಲ್, ಸಾಗರ ರಸ್ತೆಯ ಮೂಲಕ ಮತ್ತೆ ತಾಲೂಕಾ ಆಸ್ಪತ್ರೆಯನ್ನು ತಲುಪಿ ಸಂಪನ್ನಗೊಂಡಿತು.
ಜಾಥಾದಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಾಲೂಕಾ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ವಲಯ ಅರಣ್ಯಾದಿಕಾರಿ ಸವಿತಾ ದೇವಡಿಗ, ಶಿಶುಅಭಿವೃದ್ಧಿ ಇಲಾಖೆಯ ಸುಶೀಲಾ ಮೊಗೇರ, ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಸುಮಾ ಬಿ., ಗ್ರಾಮೀಣ ಠಾಣೆಯ ರತ್ನಾ ಕುರಿ ತಾಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತರು, ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿಗಳು ಭಾಗವಹಿಸಿದ್ದರು.