Advertisement

ಏನು ತಿಂಡಿ?ಇವತ್ತೂ ಉಪ್ಪಿಟಾ!

07:09 PM Mar 24, 2021 | Team Udayavani |

ಬಲ್ಲವನೆ ಬಲ್ಲ ಬೆಲ್ಲದ ರುಚಿಯಾ ಅನ್ನುವ ಹಾಗೆ, ಉಂಡವನೇ ಬಲ್ಲಉಪ್ಪಿಟ್ಟಿನ ರುಚಿಯಾ. ನಮ್ಮ ದಕ್ಷಿಣ ಭಾರತದಲ್ಲಿ ಯಾರಾದರೂ ಮೂರು ಜನರನ್ನು ಕರೆದು “ಮನೇಲಿ ಇವತ್ತು ಏನ್‌ ತಿಂಡಿ?’ ಅಂತ ಕೇಳಿದ್ರೆ ಅದರಲ್ಲಿ ಒಬ್ಬರ ಉತ್ತರ ಖಂಡಿತವಾಗಿಯೂ-ಉಪ್ಪಿಟ್ಟು ಎಂಬುದೇ ಆಗಿರುತ್ತದೆ.

Advertisement

ಬಹುತೇಕ ಮನೆಗಳಲ್ಲಿ, ಹಾಸ್ಟೆಲುಗಳಲ್ಲಿ, ಪಿ.ಜಿಗಳಲ್ಲಿ ವಾರದಲ್ಲಿ ಒಂದು ದಿನದ ತಿಂಡಿ ಉಪ್ಪಿಟ್ಟು ಅಂತ ಫಿಕ್ಸ್ ಆಗಿರುತ್ತೆ. ರವೆಯನ್ನು ಹದವಾಗಿ ಹುರಿಯುತ್ತಲೇ ಉಪ್ಪಿಟ್ಟಿನ ಪರಿಮಳ ಶುರುವಾದಂತೆ, ನಂತರ ಒಗ್ಗರಣೆಯೊಂದಿಗಿನ ತರಕಾರಿ, ಕರಿಬೇವು, ಉಪ್ಪು, ಮೆಣಸಿನಕಾಯಿ, ಶುಂಠಿ ಎಲ್ಲವನ್ನೂಬಿಸಿನೀರಿನಲ್ಲಿ ಹಾಕುತಿ ದ್ದಂತೆ ರವೆ ಅರಳಿ ಉಪ್ಪಿಟ್ಟು ರೆಡಿ.

ಹೋಟೆಲ್‌ಗ‌ಳಲ್ಲಿ ಖಾರಾಬಾತ್‌ ಅಂದ್ರೆ ಇಷ್ಟ ಪಡೋ ನಾವು,ಅದ್ಯಾಕೋ ಮನೇಲಿ ಉಪ್ಪಿಟ್ಟು ಅಂದ್ರೆ ಇಷ್ಟ ಪಡೋಲ್ಲ. ಸ್ಟಾರ್‌ ಹೋಟೆಲ್‌ ಗಳಲ್ಲೂ ಸೆಮೋಲಿನ ಡಿಶ್‌ ಅಂತಹೆಸರಿಟ್ಟು ಕೊಡೋದು ಇದೇ ಉಪ್ಪಿಟ್ಟನ್ನು ತಾನೆ?

ತರಕಾರಿಗಳೊಂದಿಗೆ ಬೆರೆತು ತರಕಾರಿಉಪ್ಪಿಟ್ಟಾದ್ರೆ, ಅವರೇಕಾಯಿ ಕಾಲದಲ್ಲಿಅವರೇಕಾಯಿ ಉಪ್ಪಿಟ್ಟು, ಶಾವಿಗೆ ಹಾಕಿ ಮಾಡುದ್ರೆ ಶಾವಿಗೆ ಉಪ್ಪಿಟ್ಟು,ಅಕ್ಕಿ ತರಿಯಲಿ ಮಾಡಿದರೆ ಅಕ್ಕಿತರಿ ಉಪ್ಪಿಟ್ಟು, ಈಗಂತೂ ಹೊಸದಾಗಿ ಮಿಲೆಟ್ಸ್‌ ಉಪ್ಪಿಟ್ಟು, ಇಡ್ಲಿ ಮಿಕ್ಕಿದರೆ ಇಡ್ಲಿ ಕಿವುಚಿ ಮಾಡೋ ಇಡ್ಲಿ ಉಪ್ಪಿಟ್ಟು, ಇನ್ನು ಹೇಳ್ತಾಹೋಗೋದಾದ್ರೆ ಸಬ್ಬಕ್ಕಿ ಉಪ್ಪಿಟ್ಟು, ಬ್ರೆಡ್‌ ಉಪ್ಪಿಟ್ಟು, ಗೋಧಿ ನುಚ್ಚಿನ ಉಪ್ಪಿಟ್ಟು ಕೊನೆಗೆ ಏನೂ ಇಲ್ಲದಿದ್ರೆ ಬೋಳ್‌ ಉಪ್ಪಿಟ್ಟು. ಇಷ್ಟೆಲ್ಲಾ ತರಾವರಿಉಪ್ಪಿಟ್ಟುಗಳಿದ್ದರೂ ಅದ್ಯಾಕೋ ಪಾಪ,ಅದರ ಮೇಲೆ ಮಲತಾಯಿ ಧೋರಣೆ ತಪ್ಪಿದ್ದಲ್ಲ.

ತರಿ ತರಿಯಾದ ಉಪ್ಪಿಟ್ಟು ಬೇಕಾದರೆ ಬನ್ಸಿರವೆ ಅಥವಾ ಅಕ್ಕಿತರಿಉಪ್ಪಿಟ್ಟು ಮಾಡಬಹುದು, ಚಿರೋಟಿರವೆ ಹಾಕಿ ಮೆತ್ತಗಿನ ಉಪ್ಪಿಟ್ಟು ಸಹ ಮಾಡಬಹುದು. ಇನ್ನೂ ಹಲ್ಲು ಬರದೇ ಇರುವ ಮಕ್ಕಳಿಗೂಕೊಡಬಹುದು, ಹಲ್ಲು ಕಟ್ಟಿಸಿಕೊಂಡಿರುವ ಅಜ್ಜಿ ತಾತಂದಿರೂ ಇದನ್ನು ತಿನ್ನಬಹುದು.

Advertisement

ಉಪ್ಪಿಟ್ಟಿನ ಆಪ್ತ ಸ್ನೇಹಿತ ಕೇಸರಿಬಾತ್‌. ಇವೆರಡೂ ನಾಲಿಗೆಮೇಲೆ ಕೂಡಿದರೆ ಸಿಹಿ ಖಾರಗಳರುಚಿಯಾದ ಮಿಲನ. ದಕ್ಷಿಣ ಕನ್ನಡದಕಡೆ ಉಪ್ಪಿಟ್ಟಿನೊಂದಿಗೆ ಖಾರದಅವಲಕ್ಕಿ ಕೊಡುವ ರೂಢಿ ಇದೆ. ಚಟ್ನಿ, ಚಟ್ನಿಪುಡಿ, ಉಪ್ಪಿನಕಾಯಿ, ಸಕ್ಕರೆ, ಮೊಸರು… ಹೀಗೆ ಯಾವುದರ ಜೊತೆಗಾದರೂ ನೆಂಚಿಕೊಂಡು ತಿನ್ನಬಹುದು. ಯಾವುದೂ ಇಲ್ಲವಾದರೆ ಬಿಸಿ ಉಪ್ಪಿಟ್ಟಿನಮೇಲೆ ಒಂದು ಮಿಳ್ಳೆತುಪ್ಪ ಹಾಕಿ ತಿಂದರೆ ಆಹಾ! ಉಪ್ಪಿಟ್ಟು ಪ್ರಿಯರ ಪಟ್ಟಿಯಲ್ಲಿ ಮೊದಲು ನೆನಪಿಗೆ ಬರುವವರು ಶಿಕ್ಷಣ ತಜ್ಞರಾಗಿದ್ದ ಎಚ್‌.ನರಸಿಂಹ ಯ್ಯನವರು. ಅವರು ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾಗೆಹೋದಾಗ ಮೂರ್ನಾಲ್ಕು ವರ್ಷಗಳಕಾಲ ಉಪ್ಪಿಟ್ಟನ್ನೇ ಮಾಡಿಕೊಂಡುಸೇವಿಸುತ್ತಿದ್ದರಂತೆ. ಈಗಂತೂದಿಢೀರ್‌ ಆಗಿ ಮಾಡಿ ತಿನ್ನುವ ಮಿಕÕ… ಗಳು ಮಾರುಕಟ್ಟೆಗೆ ಬಂದಿವೆ. ಆದರೆ, ಅದ್ಯಾಕೋ ಉಪ್ಮಾ ಅಂತ ಕರೆದಾಗ ಉಪ್ಪಿಟ್ಟಿನ ರುಚಿ ಕುಗ್ಗಿದ ಹಾಗೆಅನ್ನಿಸುವುದು. ಮತ್ತೆ ಉಪ್ಪಿಟ್ಟಾ? ಮತ್ತೆಕಾಂಕ್ರಿಟಾ? ಅಂತ ಏನಾದ್ರೂಹೇಳಲಿ. ಉಪ್ಪಿಟ್ಟಿನ ಮೇಲೆ ಮಾತ್ರ ಬೇಡ ಸಿಟ್ಟು.

 

ಶ್ರೀಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next