Advertisement

ಸ್ಮಾರ್ಟ್‌ಫೋನ್‌ ಜಾಹೀರಾತುಗಳಿಗೆ ಬ್ರೇಕ್‌ ಹಾಕಿ!

08:14 PM May 07, 2020 | Sriram |

ಮೊಬೈಲ್‌ನಲ್ಲಿ ಇಂಟರ್ನೆಟ್‌ನಲ್ಲಿ ಏನೋ ನೋಡುತ್ತಿದ್ದೀರಿ. ಧುತ್ತನೆ ಜಾಹೀರಾತೊಂದು ಪ್ರತ್ಯಕ್ಷವಾಗುತ್ತದೆ. ಹೀಗೆ ದಿನನಿತ್ಯ ಜಾಹೀರಾತುಗಳು ನಿಮಗೆ ಇನ್ನಿಲ್ಲದ ತೊಂದರೆ ನೀಡುತ್ತಿರಬಹುದು. ಈ ಜಾಹೀರಾತುಗಳಿಂದ ಪಾರಾಗುವುದು ಸುಲಭವಿದೆ. ಮೊಬೈಲ್‌ ಸೆಟ್ಟಿಂಗ್ಸ್‌ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದರೆ ಇದಕ್ಕೆ ಪರಿಹಾರ ಸಾಧ್ಯ.

Advertisement

ಗೂಗಲ್‌ ಕ್ರೋಮ್‌ನಲ್ಲಿ ಆ್ಯಡ್‌ ಬ್ಲಾಕ್‌
ಆ್ಯಂಡ್ರಾಯಿಡ್‌ ಫೋನ್‌ಗಳಲ್ಲಿ ಹೆಚ್ಚಾಗಿ ಬ್ರೌಸಿಂಗ್‌ಗೆ ಬಳಸುವುದು ಗೂಗಲ್‌ ಕ್ರೋಮ್‌ ವೆಬ್‌ ಬ್ರೌಸರ್‌. ಇದು ನೀವು ಸರ್ಚ್‌ ಮಾಡಿದ ಸಂಗತಿಗಳನ್ನೆಲ್ಲ ಫಾಲೋ ಮಾಡಿ, ಅದರ ಕುರಿತಾದ ಜಾಹೀರಾತುಗಳನ್ನು ನಿರಂತರ ನೀಡುತ್ತಿರುತ್ತದೆ. ಇದಕ್ಕಾಗಿ ಮಾಡಬೇಕಾದ್ದಿಷ್ಟೆ. ಪಾಪ್‌ ಅಪ್‌ಗ್ಳನ್ನು ಬ್ಲಾಕ್‌ ಮಾಡುವುದು. ಬ್ರೌಸರ್‌ ತೆರೆದು ಸೆಟ್ಟಿಂಗ್ಸ್‌ಗೆಹೋಗಿ ಸೈಟ್‌ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಪಾಪ್‌ ಅಪ್ಸ್‌ ಎಂದಿರುತ್ತದೆ. ಅದನ್ನು ಬ್ಲಾಕ್‌ ಮಾಡಿ.

ಇತರ ಬ್ರೌಸರ್‌ಗಳ ಬಳಕೆ
ಗೂಗಲ್‌ ಕ್ರೋಮ್‌ನಲ್ಲಿ ನಿರಂತರ ಜಾಹೀರಾತು ಬರುತ್ತಿರುತ್ತದೆ ಎಂಬ ಸಮಸ್ಯೆಯಿದ್ದರೆ ಇತರ ಆ್ಯಡ್‌ ಬ್ಲಾಕರ್‌ ಇರುವ ಬ್ರೌಸರ್‌ಗಳನ್ನು ನೀವು ಬಳಸಬಹುದು. ಇದಕ್ಕಾಗಿ ಒಪೆರಾ, ಆ್ಯಡ್‌ ಬ್ಲಾಕರ್‌ ಬ್ರೌಸರ್‌ ಇತ್ಯಾದಿ ಬ್ರೌಸರ್‌ಗಳನ್ನು ನೀವು ಆಯ್ದುಕೊಳ್ಳಬಹುದು. ಇವುಗಳು ಪಾಪ್‌ ಅಪ್‌ಗ್ಳನ್ನು ನಿಯಂತ್ರಿಸುತ್ತವೆ. ಮತ್ತು ಬಿಲ್ಟ್ ಇನ್‌ ಆ್ಯಡ್‌ ಬ್ಲಾಕರ್‌ಗಳನ್ನು ಹೊಂದಿವೆ.

ಅಪ್ಲಿಕೇಶನ್‌ಗಳು
ಜಾಹೀರಾತುಗಳನ್ನು ತಡೆಯುವ ಅಪ್ಲಿಕೇಶನ್‌ಗಳೂ ಲಭ್ಯವಿವೆ. ಇವುಗಳಲ್ಲಿ ಆ್ಯಡ್‌ ವೇ ಮತ್ತು ಆ್ಯಡ್‌ ಬ್ಲಾಕ್‌ ಪ್ಲಸ್‌ಗಳು ಪ್ರಸಿದ್ಧವಾದದವುಗಳು. ಈ ಅಪ್ಲಿಕೇಶನ್‌ಗಳು ಅನಿಯಂತ್ರಿತ ಜಾಹೀರಾತು, ಯಾವುದೋ ಮೂಲದಿಂದ ಬರುವ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತವೆ.

ಫೋನ್‌ ಸೆಟ್ಟಿಂಗ್ಸ್‌
ಫೋನ್‌ ಸೆಟ್ಟಿಂಗ್ಸ್‌ಗಳ ಮೂಲಕವೂ ಜಾಹೀರಾತುಗಳನ್ನು ಒಂದಷ್ಟು ತಡೆಯಬಹುದು. ನಿಮ್ಮ ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ಪ್ರೈವೆಸಿಯನ್ನು ತೆರೆಯಿರಿ. ಪ್ರೈವೆಸಿ ಒಳಭಾಗದಲ್ಲಿ ಆ್ಯಡ್‌ ಸರ್ವೀಸ್‌ ಎಂದಿರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಪರ್ಸನಲೈಸ್ಡ್ ಆ್ಯಡ್‌ ರೆಕಮಂಡೇಶನ್‌ ಎಂದಿರುತ್ತದೆ. ಆ ಕುರಿತ ಸ್ವಿಚ್‌ ಅನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಒಂದಷ್ಟು ಜಾಹೀರಾತು ಗಳಿಂದ ಮುಕ್ತಿ ಕಾಣಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next