Advertisement

ನ್ಯಾನೋ ಪಯಣಕ್ಕೆ ಬ್ರೇಕ್‌

12:30 AM Jan 26, 2019 | |

ನವದೆಹಲಿ: ವಿಶ್ವದ ಅತಿ ಅಗ್ಗದ ಕಾರು ಎಂಬ ಹೆಗ್ಗಳಿಕೆಯ, ಉದ್ಯಮಿ ರತನ್‌ ಟಾಟಾ ಅವರ ಮಹತ್ವಾಕಾಂಕ್ಷೆಯಾದ “ನ್ಯಾನೋ’ ಕಾರಿನ ಉತ್ಪಾದನೆ ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ. ಬದಲಾದ ಕಾನೂನಿನನ್ವಯ, ಈ ಕಾರಿಗೆ ಹೊಸ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಅತಿ ಹೆಚ್ಚಿನ ಬಂಡವಾಳ ಹೂಡಬೇಕಿದ್ದು, ಇದು ದುಬಾರಿ ಆಗಲಿರುವುದರಿಂದ ಬರುವ ಏಪ್ರಿಲ್‌ನಿಂದ ನ್ಯಾನೋ ಉತ್ಪಾದನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಟಾಟಾ ಮೋಟಾರ್ಸ್‌ ಹೇಳಿದೆ. 2009ರಲ್ಲಿ ಒಂದೂವರೆ ಲಕ್ಷ ರೂ. ಮೌಲ್ಯದೊಂದಿಗೆ ಹ್ಯಾಚ್‌ಬ್ಯಾಕ್‌ ಮಾದರಿಯ “ನ್ಯಾನೋ’ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಆರಂಭದಲ್ಲಿ ಉತ್ತಮ ಜನಸ್ಪಂದನೆ ಸಿಕ್ಕಿದರೂ ಆನಂತರ ಮಾರುಕಟ್ಟೆಯಲ್ಲಿ ಆಕರ್ಷಣೆ ಕಳೆದುಕೊಂಡಿತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next