Advertisement

ಬ್ರೆಜಿಲ್‌ ಅಧ್ಯಕ್ಷ ಗಣರಾಜ್ಯೋತ್ಸವ ಅತಿಥಿ

09:46 AM Nov 16, 2019 | Team Udayavani |

ಬ್ರೆಸಿಲಿಯಾ: ಬ್ರೆಜಿಲ್‌ ಅಧ್ಯಕ್ಷ ಬೋಲ್ಸೊನಾರೋ ಅವರು ಮುಂದಿನ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಳ್ಳಲಿದ್ದಾರೆ.

Advertisement

ಬ್ರಿಕ್ಸ್‌ ಶೃಂಗಕ್ಕಾಗಿ ಬ್ರೆಜಿಲ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಗುರುವಾರ ಬೋಲ್ಸೊನಾರೋ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ವೇಳೆ ಅವರಿಗೆ ಗಣರಾಜ್ಯೋತ್ಸವದ ಅತಿಥಿ ಯಾಗುವಂತೆ ಆಮಂತ್ರಣ ನೀಡಿದ್ದು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇದೇ ವೇಳೆ, ಬೃಹತ್‌ ಉದ್ಯಮಿ ಗಳ ನಿಯೋಗ ಕೂಡ ಭಾರತಕ್ಕೆ ಆಗಮಿಸಲಿದೆ. ಕಳೆದ ಗಣ ರಾಜ್ಯೋತ್ಸವದಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಮುಖ್ಯ ಅತಿಥಿ ಯಾಗಿ ಬಂದಿದ್ದರು. ಇದೇ ವೇಳೆ 2ನೇ ಮಹಾಯುದ್ಧದ 75ನೇ ವಿಜಯೋತ್ಸವ ಮುಂದಿನ ಮೇ ತಿಂಗಳಿನಲ್ಲಿ ರಷ್ಯಾದಲ್ಲಿ ನಡೆಯ ಲಿದ್ದು, ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ರಷ್ಯಾ ಅಧ್ಯಕ್ಷರ ಆಹ್ವಾನಕ್ಕೆ ಮೋದಿ ಒಪ್ಪಿಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next