Advertisement

Bodybuilder: ಸ್ಟಿರಾಯ್ಡ್‌ ಎಫೆಕ್ಟ್-‌ ಯುವ ದೇಹದಾರ್ಢ್ಯ ಪಟು ಹೃದಯಾಘಾತದಿಂದ ಮೃತ್ಯು!

01:14 PM Sep 04, 2024 | Team Udayavani |

ಬ್ರೆಜಿಲ್:‌ ಬ್ರೆಜಿಲ್‌ ನ ಯುವ ದೇಹದಾರ್ಢ್ಯ (Bodybuilder) ಪಟು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಭಾನುವಾರ (ಸೆ.01) ಮಧ್ಯಾಹ್ನ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.

Advertisement

ಮ್ಯಾಥ್ಯೂಸ್‌ ಪವ್ಲಾಕ್‌ (Matheus Pavlak- 19ವರ್ಷ) ಕೇವಲ ಐದು ವರ್ಷಗಳಲ್ಲಿ ತನ್ನ ದೇಹವನ್ನು ಕಟ್ಟುಮಸ್ತುಗೊಳಿಸಿ ಯುವ ದೇಹದಾರ್ಢ್ಯ ಪಟುವಾಗಿ ಬೆಳೆದಿದ್ದ. ಸತತವಾಗಿ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ Bodybuilding ವಲಯದಲ್ಲಿ ಯುವ ತಾರೆಯಾಗಿ ಮಿಂಚತೊಡಗಿದ್ದ.

2023ರಲ್ಲಿ ನಡೆದ U23 ಸ್ಪರ್ಧೆಯಲ್ಲಿ ಮ್ಯಾಥ್ಯೂ ವಿಜೇತನಾಗಿದ್ದ. ಅಲ್ಲದೇ ಇತ್ತೀಚೆಗೆ ನಡೆದ ಬ್ರೆಜಿಲ್‌ ನ ಸ್ಥಳೀಯ ಸ್ಪರ್ಧೆಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಎಂದು ಟಿಎಂಝಡ್‌ ವರದಿ ತಿಳಿಸಿದೆ.

ಮ್ಯಾಥ್ಯೂ ತನ್ನ ಸ್ನಾಯು ಅಂಗಾಂಶದ ಬೆಳವಣಿಗೆ ಹೆಚ್ಚಿಸುವ ಮತ್ತು ಅಂಗ ಸೌಷ್ಠವ ಬಲಿಷ್ಠಗೊಳಿಸಲು ಅನಾಬೋಲಿಕ್‌ ಸ್ಟಿರಾಯ್ಡ್‌ ಅನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದು, ಇದರಿಂದಲೇ ಹೃದಯಾಘಾತಕ್ಕೆ ಕಾರಣವಾಗಿದೆ ಎಂಬ ಊಹಾಪೋಹ ವಿವಾದಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.

Advertisement

ಇಷ್ಟು ಕಿರಿಯ ವಯಸ್ಸಿನಲ್ಲೇ ಗಮನಸೆಳೆಯವ ಮೈಕಟ್ಟು ಹೊಂದಿರುವ ಮ್ಯಾಥ್ಯೂ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದು, ಅನಾಬೋಲಿಕ್‌ ಸ್ಟಿರಾಯ್ಡ್‌ ನಿಂದಾಗಿಯೇ ಕೊನೆಯುಸಿರೆಳೆಯುವಂತಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ದೇಹದಾರ್ಢ್ಯ ಪಟು ಪವ್ಲಾಕ್‌ ನಿಧನಕ್ಕೆ ಮಾಜಿ ಟ್ರೈನರ್‌ ಲೂಕಾಸ್‌ ಚೆಗಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಇಂದು ದುಃಖದಾಯಕ ದಿನವಾಗಿದ್ದು, ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡಂತಾಗಿದೆ. ಇದು ನಿಜಕ್ಕೂ ಆಘಾತಕಾರಿ ವಿಷಯ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next