Advertisement

ಹೈದರಾಬಾದ್‌ನಿಂದ ಹೊರಬಿದ್ದ ಕೇನ್‌ ವಿಲಿಯಮ್ಸನ್‌, ಪೂರಣ್‌

11:03 PM Nov 15, 2022 | Team Udayavani |

ಹೊಸದಿಲ್ಲಿ: ಐಪಿಎಲ್‌ ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಕ್ರಿಕೆಟಿಗರ ಯಾದಿ ಅನೇಕಾನೇಕ ಅಚ್ಚರಿಗಳೊಂದಿಗೆ ಮಂಗಳವಾರ ರಾತ್ರಿ ವೇಳೆ ಬಹುತೇಕ ಪೂರ್ತಿಗೊಂಡಿದೆ.

Advertisement

ಇನ್ನಷ್ಟು ಅಚ್ಚರಿಗೆ ತಳ್ಳಿದ ಬೆಳವಣಿಗೆಯೆಂದರೆ, ಸನ್‌ರೈಸರ್ ಹೈದರಾಬಾದ್‌ ತನ್ನ ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ನಿಕೋಲಸ್‌ ಪೂರಣ್‌ ಅವರನ್ನು ಕೈಬಿ ಟ್ಟದ್ದು. ಹೈದರಾಬಾದ್‌ ಇನ್ನು ನೂತನ ನಾಯಕನನ್ನು ಆರಿಸಬೇಕಿದೆ.

ಇದೇ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ನೊಂದಿಗಿನ ನಂಟು ಇನ್ನೇನು ಕಳೆದುಕೊಂಡೇ ಬಿಟ್ಟರು ಎಂದೇ ಸುದ್ದಿಯಲ್ಲಿದ್ದ ಆಲ್‌ರೌಂಡರ್‌ ರವೀಂದ್ರ ಜಡೇಜ ಇದೇ ತಂಡದಲ್ಲಿ ಮುಂದುವರಿದಿದ್ದಾರೆ. ಇವರೊಂದಿಗೆ ಆಂಬಾಟಿ ರಾಯುಡು ಕೂಡ ಉಳಿದುಕೊಂಡಿದ್ದಾರೆ. ಆದರೆ ಡ್ವೇನ್‌ ಬ್ರಾವೊ ಅವರನ್ನು ಸಿಎಸ್‌ಕೆ ಕೈಬಿಟ್ಟಿದೆ.

ಲಕ್ನೋದಿಂದ ಕೆರಿಬಿಯನ್‌ ಆಲ್‌ರೌಂಡರ್‌ ಜೇಸನ್‌ ಹೋಲ್ಡರ್‌, ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ನಿಂದ ಇಂಗ್ಲೆಂಡ್‌ ಓಪನರ್‌ ಜೇಸನ್‌ ರಾಯ್‌ ಹಾಗೂ ಕೆಕೆಆರ್‌ನಿಂದ ಅಲೆಕ್ಸ್‌ ಹೇಲ್ಸ್‌ ಬೇರ್ಪಟ್ಟಿದ್ದಾರೆ.

ಬಿಡುಗಡೆಗೊಂಡ ಕ್ರಿಕೆಟಿಗರು
ಚೆನ್ನೈ ಸೂಪರ್‌ ಕಿಂಗ್ಸ್‌: ಡ್ವೇನ್‌ ಬ್ರಾವೊ, ರಾಬಿನ್‌ ಉತ್ತಪ್ಪ (ನಿವೃತ್ತಿ), ಕ್ರಿಸ್‌ ಜೋರ್ಡನ್‌, ಆ್ಯಡಂ ಮಿಲೆ°, ಎನ್‌. ಜಗದೀಶನ್‌, ಸಿ. ಹರಿ ನಿಶಾಂತ್‌, ಕೆ. ಭಗತ್‌ ವರ್ಮ, ಕೆ.ಎಂ. ಆಸಿಫ್.

Advertisement

ಲಕ್ನೋ ಸೂಪರ್‌ ಜೈಂಟ್ಸ್‌: ಜೇಸನ್‌ ಹೋಲ್ಡರ್‌, ಎವಿನ್‌ ಲೂಯಿಸ್‌, ಶಾದಾಬ್‌ ನದೀಂ, ಮನೀಷ್‌ ಪಾಂಡೆ, ಆ್ಯಂಡ್ರೂé ಟೈ, ಅಂಕಿತ್‌ ರಜಪೂತ್‌, ದುಷ್ಮಂತ ಚಮೀರ.

ಸನ್‌ರೈಸರ್ ಹೈದರಾಬಾದ್‌: ಕೇನ್‌ ವಿಲಿಯಮ್ಸನ್‌, ನಿಕೋಲಸ್‌ ಪೂರಣ್‌, ರೊಮಾರಿಯೊ ಶೆಫ‌ರ್ಡ್‌, ಜೆ. ಸುಚಿತ್‌, ಶ್ರೇಯಸ್‌ ಗೋಪಾಲ್‌.

ರಾಯಲ್‌ ಚಾಲೆಂಜರ್ ಬೆಂಗಳೂರು: ಶೆರ್ಫೇನ್ ರುದರ್ಫೋರ್ಡ್, ಜೇಸನ್‌ ಬೆಹ್ರೆಂಡೋರ್ಫ್, ಆನೀಶ್ವರ್‌ ಗೌತಮ್‌, ಚಾಮ ಮಿಲಿಂದ್‌, ಲವ್‌ನೀತ್‌ ಸಿಸೋಡಿಯ.

ಮುಂಬೈ ಇಂಡಿಯನ್ಸ್‌: ಕೈರನ್‌ ಪೊಲಾರ್ಡ್‌, ಅನ್ಮೋಲ್‌ಪ್ರೀತ್‌ ಸಿಂಗ್‌, ಆರ್ಯನ್‌ ಜುಯಲ್‌, ಬಾಸಿಲ್‌ ಥಂಪಿ, ಡೇನಿಯಲ್‌ ಸ್ಯಾಮ್ಸ್‌, ಫ್ಯಾಬಿಯನ್‌ ಅಲೆನ್‌, ಜೈದೇವ್‌ ಉನಾದ್ಕತ್‌, ಮಾಯಾಂಕ್‌ ಮಾರ್ಕಂಡೆ, ಮುರುಗನ್‌ ಅಶ್ವಿ‌ನ್‌, ರಾಹುಲ್‌ ಬುದ್ಧಿ, ರಿಲೀ ಮೆರಿಡಿತ್‌, ಸಂಜಯ್‌ ಯಾದವ್‌, ಟೈಮಲ್‌ ಮಿಲ್ಸ್‌.

ಪಂಜಾಬ್‌ ಕಿಂಗ್ಸ್‌: ಮಾಯಾಂಕ್‌ ಅಗರ್ವಾಲ್‌, ವೈಭವ್‌ ಅರೋರ, ಬೆನ್ನಿ ಹೋವೆಲ್‌, ಇಶಾನ್‌ ಪೊರೆಲ್‌, ಅಂಶ್‌ ಪಟೇಲ್‌, ಪ್ರೇರಕ್‌ ಮಂಕಡ್‌, ಸಂದೀಪ್‌ ಶರ್ಮ, ಋತಿಕ್‌ ಚಟರ್ಜಿ.

ರಾಜಸ್ಥಾನ್‌ ರಾಯಲ್ಸ್‌: ಡ್ಯಾರಿಲ್‌ ಮಿಚೆಲ್‌, ಜೇಮ್ಸ್‌ ನೀಶಮ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಅನುನಯ್‌ ಸಿಂಗ್‌, ಕಾರ್ಬಿನ್‌ ಬಾಶ್‌, ಕರುಣ್‌ ನಾಯರ್‌, ನಥನ್‌ ಕೋಲ್ಟರ್‌ ನೈಲ್‌, ಶುಭಂ ಗರ್ವಾಲ್‌, ತೇಜಸ್‌ ಬರೋಕ.

ಗುಜರಾತ್‌ ಜೈಂಟ್ಸ್‌: ರಹಮತುಲ್ಲ ಗುರ್ಬಜ್‌, ಲಾಕೀ ಫ‌ರ್ಗ್ಯುಸನ್‌, ಡೊಮಿನಿಕ್‌ ಡ್ರೇಕ್ಸ್‌, ಗುರುಕೀರತ್‌ ಸಿಂಗ್‌, ಜೇಸನ್‌ ರಾಯ್‌, ವರುಣ್‌ ಆರೋನ್‌.

ಡೆಲ್ಲಿ ಕ್ಯಾಪಿಟಲ್ಸ್‌: ಶಾರ್ದೂಲ್ ಠಾಕೂರ್, ಟಿಮ್‌ ಸೀಫ‌ರ್ಟ್‌, ಅಶ್ವಿ‌ನ್‌ ಹೆಬ್ಟಾರ್‌, ಕೆ.ಎಸ್‌. ಭರತ್‌, ಮನ್‌ದೀಪ್‌ ಸಿಂಗ್‌.

ಕೋಲ್ಕತಾ ನೆಟ್‌ರೈಡರ್: ಪ್ಯಾಟ್‌ ಕಮಿನ್ಸ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಅಮಾನ್‌ ಖಾನ್‌, ಶಿವಂ ಮಾವಿ, ಮೊಹಮ್ಮದ್‌ ನಬಿ, ಚಮಿಕ ಕರುಣರತ್ನೆ, ಆರನ್‌ ಫಿಂಚ್‌, ಅಲೆಕ್ಸ್‌ ಹೇಲ್ಸ್‌, ಅಭಿಜಿತ್‌ ತೋಮರ್‌, ಅಜಿಂಕ್ಯ ರಹಾನೆ, ಅಶೋಕ್‌ ಶರ್ಮ, ಬಾಬಾ ಇಂದ್ರಜಿತ್‌, ಪ್ರಥಮ್‌ ಸಿಂಗ್‌, ರಮೇಶ್‌ ಕುಮಾರ್‌, ರಾಸಿಕ್‌ ಸಲಾಂ, ಶೆಲ್ಡನ್‌ ಜಾಕ್ಸನ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next