Advertisement

ಪ್ರಧಾನಿ ಮೋದಿಯ ವಾರಣಾಸಿ ಇನ್ಮುಂದೆ ಹಣ್ಣು, ತರಕಾರಿ ರಫ್ತು ಕೇಂದ್ರ; ಏನಿದು ಬ್ರ್ಯಾಂಡ್ ಕಾಶಿ

11:09 AM Aug 29, 2019 | Nagendra Trasi |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರ ಶೀಘ್ರದಲ್ಲಿಯೇ ಹಣ್ಣು-ಹಂಪಲು ಮತ್ತು ತರಕಾರಿ ರಫ್ತು ಮಾಡುವ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ.

Advertisement

ಈ ನಿಟ್ಟಿನಲ್ಲಿ ವಾರಣಾಸಿಯ ರೈತರಿಗೆ ಯುರೋಪ್, ಗಲ್ಫ್, ಸಿಂಗಾಪೂರ್ ದೇಶಗಳಿಗೆ ರಫ್ತು ಮಾಡುವ ಹಣ್ಣು ಹಂಪಲು, ತರಕಾರಿ ಗುಣಮಟ್ಟ ಹೇಗಿರಬೇಕು, ಯಾವ ಶ್ರೇಣಿಯಲ್ಲಿ ಬೆಳೆಯಬೇಕು ಎಂಬ ಬಗ್ಗೆ ತರಬೇತಿ ನೀಡುವುದಾಗಿ ವಾಣಿಜ್ಯ ಇಲಾಖೆ ಘೋಷಿಸಿದೆ.

ವಾರಣಾಸಿಯಲ್ಲಿ ಬೆಳೆಯುವ ಹಣ್ಣು ಹಂಪಲು, ತರಕಾರಿ ಇನ್ಮುಂದೆ ಬನಾರಸ್ ಬ್ರ್ಯಾಂಡ್ ಕಾಶಿ ಅಥವಾ ಬ್ರ್ಯಾಂಡ್ ಕಾಶಿ ಎಂದೇ ಪ್ರಸಿದ್ಧಿಯಾಗುವಂತೆ ಎಲ್ಲಾ ಸಿದ್ಧತೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ಹಣ್ಣು, ತರಕಾರಿ ರಫ್ತು ಕಾರ್ಯಕ್ರಮ ಕೃಷಿ ರಫ್ತು ನಿಯಮದ ಅನುಸಾರವೇ ನಡೆಯಲಿದೆ. ಇದರಿಂದ ವಿದೇಶದ ಮಾರುಕಟ್ಟೆಗೆ ರಫ್ತು ಮಾಡುವ ರೈತರಿಗೆ ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂದು ವರದಿ ವಿವರಿಸಿದೆ.

ರಫ್ತು ನೀತಿಯ ಮುಖ್ಯ ಉದ್ದೇಶವೇನೆಂದರೆ ಭಾರತದ ರಫ್ತು ಮಾರುಕಟ್ಟೆಯನ್ನು ವಿಶ್ವದಲ್ಲಿಯೇ ದ್ವಿಗುಣಗೊಳಿಸುವುದು ಈ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತು ಪ್ರಮಾಣವನ್ನು ಆದಷ್ಟು ಶೀಘ್ರವಾಗಿ ಹೆಚ್ಚಿಸುವುದಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಬೆಳೆದ ಹಣ್ಣುಗಳನ್ನು ಹೆಚ್ಚಾಗಿ ರಫ್ತು ಮಾಡುವ ದೇಶಗಳಲ್ಲಿ ನೆದರ್ಲ್ಯಾಂಡ್, ಅಮೆರಿಕ, ಜಪಾನ್ ಮತ್ತು ಯುಎಇ ಸೇರಿದೆ. 2018-19ರಲ್ಲಿ ಭಾರತದಿಂದ ರಫ್ತಾಗುವ ಪ್ರಮಾಣ ಶೇ.8ರಷ್ಟಿದೆ. ಹಣ್ಣುಗಳ ರಫ್ತು ಪ್ರಮಾಣ ಶೇ.12ರಷ್ಟಿದೆ ಎಂಬುದು ವಾಣಿಜ್ಯ ಸಚಿವಾಲಯದ ಅಂಕಿ-ಅಂಶವಾಗಿದೆ. ಅದೇ ರೀತಿ ಈ ಹಿಂದಿನ ವರ್ಷದಲ್ಲಿ ಭಾರತದಿಂದ ರಫ್ತಾಗುವ ತರಕಾರಿ ಶೇ.0.3ರಷ್ಟು ಎಂದು ತಿಳಿಸಿದೆ.

Advertisement

ಹಣ್ಣು ಹಂಪಲು, ತರಕಾರಿ ರಫ್ತು ಮಾಡುವ ಮೂಲಕ ದೇಶದ ತರಕಾರಿ, ಹಣ್ಣು ಹಂಪಲು ಉತ್ಪಾದನೆಯ ಪ್ರಮಾಣವನ್ನೂ ಹೆಚ್ಚಿಸಬಹುದಾಗಿದೆ. ಆ ನಿಟ್ಟಿನಲ್ಲಿ ರೈತರು ತಮ್ಮ ಬೆಳೆಯನ್ನು ಲಾಭದಾಯಕವಾಗುವ ನಿಟ್ಟಿನಲ್ಲಿ ಬೆಳೆಸಬೇಕೇ ವಿನಃ, ಸಬ್ಸಿಡಿಗಳ ಮೇಲೆ ಅವಲಂಬಿತರಾಗಬಾರದು ಎಂದು ಕೃಷಿ ಸಚಿವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಾರಣಾಸಿ ತರಕಾರಿ ರಫ್ತು; 2 ಹಂತದಲ್ಲಿ ಯೋಜನೆ ಜಾರಿ

ವಾರಣಾಸಿಯನ್ನು ತರಕಾರಿ ಮತ್ತು ಹಣ್ಣುಹಂಪಲು ರಫ್ತು ಕೇಂದ್ರವನ್ನಾಗಿ ಮಾಡಲು ಸರಕಾರ ಎರಡು ಹಂತಗಳಲ್ಲಿ ಯೋಜನೆ ಜಾರಿ ಮಾಡಲಿದೆ ಎಂದು ಹೇಳಿದೆ. ಮೊದಲ ಹಂತದಲ್ಲಿ ರೈತರಿಗೆ ರಫ್ತು ಮಾಡುವ ಹಣ್ಣು, ತರಕಾರಿ ಪ್ಯಾಕೇಜ್ ಮಾಡುವ ಪ್ರಾಥಮಿಕ ತರಬೇತಿ ಹಾಗೂ ಜಿಲ್ಲೆಗಳಲ್ಲಿರುವ ರೈತರು ಗುಣಮಟ್ಟದ ರಫ್ತು ತರಕಾರಿ, ಹಣ್ಣು ಹೇಗೆ ಬೆಳೆಸಬೇಕೆಂಬ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಎರಡನೇ ಹಂತದಲ್ಲಿ ರಫ್ತು ಮಾಡುವ ತರಕಾರಿ, ಹಣ್ಣುಗಳ ಕುರಿತು ಪ್ರಚಾರ ಮಾಡುವ ಬಗ್ಗೆ ತಿಳಿಸಲಾಗುವುದು. ಅಲ್ಲದೇ ವಿಮಾನ ನಿಲ್ದಾಣದ ಸಮೀಪ ಆ್ಯಗ್ರೋ ಪ್ರೋಸೆಸಿಂಗ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next