Advertisement

Bramavara: ಬಾರ್‌ನಲ್ಲಿ ಗಲಾಟೆ; ಪ್ರಕರಣ ದಾಖಲು

08:05 PM Oct 09, 2024 | Team Udayavani |

ಬ್ರಹ್ಮಾವರ: ಇಲ್ಲಿನ ಬಾರ್‌ನಲ್ಲಿ ಮಂಗಳವಾರ ಮದ್ಯಪಾನ ಮಾಡಿದ ನಿತಿನ್‌ ಎಂಬಾತನು ವೈಟರ್‌ ರಾಜಶೇಖರ ಅವರಿಗೆ ಅವಾಚ್ಯ ಶಬ್ದದಿಂದ ಬೈದು, ಗಾಜಿನ ಗ್ಲಾಸ್‌ ಹಾಗೂ ಕುರ್ಚಿಯನ್ನು ಎಸೆದಿರುವುದಾಗಿ ಆರೋಪಿಸಲಾಗಿದೆ.

Advertisement

ಸುಮಾರು 2,300 ರೂ. ನಷ್ಟವಾಗಿರುವುದಾಗಿ ಸುನೀಲ್‌ ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಹಾವಂಜೆ: ಕೋಳಿ ಅಂಕಕ್ಕೆ ದಾಳಿ
ಬ್ರಹ್ಮಾವರ: ಹಾವಂಜೆ ಗ್ರಾಮ ಬೆಳ್ಮಾರು ರಸ್ತೆಯ ಹಾಡಿಯಲ್ಲಿ ಮಂಗಳವಾರ ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿದ್ದಾರೆ.

ಗುರುಪ್ರಸಾದ್‌, ವಿಜಯ, ಗಣೇಶ್‌ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಸಂತೋಷ್‌ ಆಟ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಕೆಲವರು ಓಡಿ ಪರಾರಿಯಾಗಿದ್ದಾರೆ. 2 ಕೋಳಿ, 2 ಕೋಳಿ ಬಾಲ್‌ ಹಾಗೂ 5 ಸ್ಕೂಟರ್‌ಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next