ಕೊಡಿಯಾಲಬೈಲ್: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೆದುಳು ಜ್ವರ ಹೆಚ್ಚಿದೆ. 2019ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು ಹತ್ತು ಪ್ರಕರಣಗಳು ವರದಿಯಾಗಿವೆ. ಎಂದು ಎನ್‌ವಿಬಿಡಿಸಿಪಿ ಉಪ ನಿರ್ದೇಶಕ ಡಾ| ಪ್ರಕಾಶ್‌ಕುಮಾರ್ ಬಿ.ಜಿ. ಹೇಳಿದರು.
ಯೇನಪೊಯಾ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮೆದುಳು ಜ್ವರ ನಿಯಂತ್ರಣ ಕಾರ್ಯಾಗಾರ ಮತ್ತು ತರಬೇತಿಯಲ್ಲಿ ಅವರು ಅತಿಥಿಯಾಗಿದ್ದರು.
ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ದಾವಣಗೆರೆ ಸಹಿತ ಬಹುತೇಕ ಜಿಲ್ಲೆಗಳಲ್ಲಿ ಮೆದುಳು ಜ್ವರ ಸಮಸ್ಯೆ ವರದಿಯಾಗುತ್ತದೆ. ಅದಕ್ಕಾಗಿ ಈ ಜಿಲ್ಲೆ ಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗು ತ್ತದೆ. ಪಕ್ಷಿಗಳಿಂದ ಹಂದಿಗಳಿಗೆ ತಗುಲಿ, ಆ ಹಂದಿಯ ಮೂಲಕ ಸೊಳ್ಳೆ, ಸೊಳ್ಳೆಯಿಂದ ಮಾನವನ ದೇಹಕ್ಕೆ ಈ ರೋಗ ತಗಲುತ್ತದೆ. ಪಕ್ಷಿಗಳು ಹೆಚ್ಚಾಗಿರುವ ಗದ್ದೆ, ನದಿ ತೋಡು ಬದಿಯಲ್ಲಿ ವಾಸಿಸುವವರು ಜಾಗರೂಕತೆ ಯಿಂದಿರಬೇಕು ಎಂದವರು ಹೇಳಿದರು.
ಯೇನಪೊಯಾ ಆಸ್ಪತ್ರೆಯ ನಿರ್ದೇ ಶಕ ಡಾ| ಮೊಹಮ್ಮದ್ ತಾಹೀರ್ ಉದ್ಘಾಟಿ ಸಿದರು. ಎನ್‌ವಿಬಿಡಿಸಿಪಿಯ ಸಂಶೋಧನ ಅಧಿಕಾರಿ ಡಾ| ಮೊಹಮ್ಮದ್ ಶರೀಫ್, ಹಿರಿಯ ಪ್ರಾದೇಶಿಕ ನಿರ್ದೇಶಕ ಡಾ| ರವಿಕುಮಾರ್ ಕೆ., ವೈದ್ಯ ಡಾ| ಶಾಂತಾರಾಮ ಬಾಳಿಗಾ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ| ನವೀನ್‌ಚಂದ್ರ ಉಪಸ್ಥಿತರಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಅರುಣ್‌ಕುಮಾರ್ ಸ್ವಾಗತಿಸಿದರು.