Advertisement

Brain-Eating Amoeba: ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಮೃತ್ಯು

01:55 PM Jul 21, 2023 | Team Udayavani |

ನ್ಯೂಯಾರ್ಕ್: ಅಮೇರಿಕಾದ ನೆವಾಡಾದಲ್ಲಿ ಎರಡು ವರ್ಷದ ಮಗುವೊಂದು ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲ್ಪಡುವ ನೇಗ್ಲೇರಿಯಾ ಫೌಲೆರಿ ಸೋಂಕಿನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

Advertisement

‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಮಗು ನೀರಿನಲ್ಲಿ ಆಟವಾಡಿದ ಮಗುವಿಗೆ ಅನಾರೋಗ್ಯ ಕಾಡಿದೆ ಈ ವೇಳೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ತಪಾಸಣೆ ನಡೆಸಿದ ವೇಳೆ ಮಗುವಿನಲ್ಲಿ ನೇಗ್ಲೇರಿಯಾ ಫೌಲೆರಿ ಸೋಂಕು ಇರುವುದು ಕಂಡು ಬಂದಿದೆ. ಇದಕ್ಕೆ ಚಿಕಿತ್ಸೆಯೂ ಇಲ್ಲದ ಪರಿಣಾಮ ಮಗು ಮೃತಪಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ನೋವಿನ ವಿಚಾರವನ್ನು ಹಂಚಿಕೊಂಡ ತಾಯಿ ಬ್ರಿಯಾನ ‘ನನಗೆ ವಿಶ್ವದ ಅತ್ಯಂತ ಬಲಿಷ್ಠ ಮಗನಿದ್ದಾನೆ ಎಂದು ನನಗೆ ತಿಳಿದಿತ್ತು’ ಎಂದು ಅವರು ಹೇಳಿದರು. ‘ಅವನು ನನ್ನ ನಾಯಕ ಮತ್ತು ನನಗೆ ಭೂಮಿಯ ಮೇಲಿನ ಅತ್ಯುತ್ತಮ ಮಗುವನ್ನು ನೀಡಿದ ದೇವರಿಗೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ ಮತ್ತು ಒಂದು ದಿನ ಆ ಹುಡುಗ ನನ್ನನ್ನು ಸ್ವರ್ಗದಲ್ಲಿ ಭೇಟಿಯಾಗುತ್ತಾನೆ ಎಂದು ತಿಳಿದುಕೊಳ್ಳಲು ನಾನು ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ಕೂಡ ಇದೇ ರೀತಿಯ ಸೋಂಕಿನಿಂದ ಮೃತಪಟ್ಟಿದ್ದ. ಇದು ಮೊದಲ ಪ್ರಕರಣವಾಗಿದ್ದು ಇದೀಗ ಅಮೇರಿಕಾದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ.

ಈ ಸೋಂಕಿನ ಮೂಲವೇನು?
ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾದ ಈ ನೇಗ್ಲೇರಿಯಾ ಫೌಲೇರಿ ಎಂಬ ಅಮೀಬಾವೇ ಸೋಂಕಿನ ಮೂಲ. ಇದು ಮಣ್ಣು, ಸರೋವರ, ನದಿಗಳಲ್ಲಿ ಇರುತ್ತವೆ. ಈ ಅಮೀಬಾವನ್ನು ಒಳಗೊಂಡಿರುವ ನೀರು ಮನುಷ್ಯರ ಮೂಗಿನೊಳಕ್ಕೆ ಸೇರಿದರೆ, ಅದು ನೇರವಾಗಿ ಮೆದುಳಿನ ಸೋಂಕಿಗೆ ಕಾರಣವಾಗುತ್ತದೆ. ಹೀಗಾಗಿಯೇ ಇದನ್ನು “ಮೆದುಳು ತಿನ್ನುವ ಅಮೀಬಾ’ ಎಂದು ಕರೆಯುತ್ತಾರೆ. ಅಮೆರಿಕದಲ್ಲಿ ಪ್ರತಿ ವರ್ಷ 3 ಮಂದಿ ಈ ಸೋಂಕಿಗೆ ತುತ್ತಾಗುತ್ತಾರೆ. ಆದರೆ, ಈ ಸೋಂಕು ಸಾಮಾನ್ಯವಾಗಿ ಮಾರಣಾಂತಿಕವೇ ಆಗಿರುತ್ತದೆ.

Advertisement

ಇದನ್ನೂ ಓದಿ: Mangaluru: ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್

Advertisement

Udayavani is now on Telegram. Click here to join our channel and stay updated with the latest news.

Next