Advertisement

First Time:ಸುಖೋಯಿ ಮೂಲಕ ಬ್ರಹ್ಮೋಸ್‌ ಕ್ಷಿಪಣಿ ಯಶಸ್ವಿ ಪರೀಕ್ಷೆ

03:50 PM Nov 22, 2017 | Team Udayavani |

ಹೊಸದಿಲ್ಲಿ : ವಿಶ್ವದ ಅತೀ ವೇಗದ ಸೂಪರ್‌ಸಾನಿಕ್‌ ಕ್ರೂಯಿಸ್‌ ಮಿಸೈಲ್‌ ಬ್ರಹ್ಮೋಸ್‌ ಇಂದು ಬುಧವಾರ ಪ್ರಪ್ರಥಮ ಬಾರಿಗೆ ಭಾರತೀಯ ವಾಯು ಪಡೆಯ ಸುಖೋಯಿ-30 ಎಂಕೆಐ ಫೈಟರ್‌ ಜೆಟ್‌ ಮೂಲಕ ಯಶಸ್ವೀ ಪರೀಕ್ಷಾರ್ಥ ಉಡ್ಡಯನದೊಂದಿಗೆ ಹೊಸ ಇತಿಹಾಸವನ್ನು ಸೃಷ್ಟಿಸಿತು.

Advertisement

ಎಸ್‌ಯು-30 ಫ್ಯೂಸ್‌ಲೇಜ್‌ನಿಂದ ಬ್ರಹ್ಮೋಸ್‌ ಕ್ಷಿಪಣಿಯನ್ನು ಗುರುತ್ವಾಕರ್ಷ ಪತನ ಪ್ರಯೋಗ ನಡೆಸಲಾಯಿತು. ಎರಡು ಹಂತಗಳ ಈ ಕ್ಷಿಪಣಿಯ ಇಂಜಿನ್‌ ಬಂಗಾಲ ಕೊಲ್ಲಿಯಲ್ಲಿನ ತನ್ನ ಉದ್ದೇಶಿತ ಗುರಿಯತ್ತ ಧಾವಿಸಿತು. 

ಸುಖೋಯಿ ಫೈಟರ್‌ ಜೆಟ್‌ ಮೂಲಕ ಆಗಸಕ್ಕೆ ಒಯ್ಯಲ್ಪಡುವ ಸೂಪರ್‌ಸಾನಿಕ್‌ ಕ್ರೂಯಿಸ್‌ ಬ್ರಹ್ಮೋಸ್‌ ಮಿಸೈಲ್‌ ನ ಇಂದಿನ ಯಶಸ್ವೀ ಪ್ರಾಯೋಗಿಕ ಚೊಚ್ಚಲ ಪರೀಕ್ಷೆಯಿಂದಾಗಿ ಭಾರತೀಯ ವಾಯು ಪಡೆಯ ಯುದ್ಧ ಸಾಮರ್ಥಯಕ್ಕೆ ಹೊಸ ಆಯಾಮ ಲಭಿಸಿತು. 

2.5 ಟನ್‌ ತೂಕ ಹೊಂದಿರುವ ಬ್ರಹ್ಮೋಸ್‌ ಎಎಲ್‌ಸಿಎಂ ಕ್ಷಿಪಣಿಯು ಭಾರತದ ಎಸ್‌ಯು3- ಫೈಟರ್‌ ಜೆಟ್‌ ಮೂಲಕ ನಿಯೋಜಿಸಲ್ಪಡುವ ಅತ್ಯಂತ ಭಾರದ ಶಸ್ತ್ರವಾಗಿದೆ. ಘನ ಶಸ್ತ್ರಾಸ್ತ್ರ ಗಳನ್ನು ಒಯ್ಯುವುದಕ್ಕೆ ಅನುಕೂಲವಾಗುವಂತೆ ಎಚ್‌ಎಎಲ್‌ ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. 

ಭಾರತದ ಡಿಆರ್‌ಡಿಓ ಮತ್ತು ರಶ್ಯದ ಎನ್‌ಪಿಓಎಂ ನ ಜಂಟಿ ಸಾಹಸದಲ್ಲಿ ಬ್ರಹ್ಮೋಸ್‌ ಹೊಸ ರೂಪ ಮತ್ತು ಭೀಮಬಲವನ್ನು ತಳೆದಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಎರಡೂ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next