Advertisement

ಸ್ಪೀಡ್‌ ಸುಖೋಯ್‌ಗೆ ಬ್ರಹ್ಮೋಸ್‌ ಬಲ…

06:00 AM Nov 23, 2017 | Harsha Rao |

ಹೊಸದಿಲ್ಲಿ: ಭಾರತದ ಶಸ್ತ್ರಾಸ್ತ್ರಗಳ ಸಾಮರ್ಥ್ಯಕ್ಕೆ ಈಗ ಇನ್ನಷ್ಟು ಬಲ ಬಂದಿದೆ. ದೇಶದ ಹೆಗ್ಗಳಿಕೆಯ ಬ್ರಹ್ಮೋಸ್‌ ಕ್ಷಿಪಣಿಯನ್ನು ಈಗಾಗಲೇ ಭೂಮಿಯಿಂದ ಭೂಮಿಗೆ ಮತ್ತು  ಸಮುದ್ರದಿಂದ ಭೂಮಿಗೆ ಹಾರಿಸುವ ಪ್ರಯತ್ನಗಳು ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ದೇಶದ ರಣಶಕ್ತಿ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯನ್ನು ಸುಖೋಯ್‌ ಯುದ್ಧವಿಮಾನ ದಿಂದ ಯಶಸ್ವಿ ಯಾಗಿ ಉಡಾಯಿಸಲಾಗಿದೆ. 

Advertisement

ವಿಶೇಷ ರಾಡಾರ್‌
ಸುಖೋಯ್‌ನಲ್ಲಿ ವಿಶೇಷ ರಾಡಾರ್‌ ಇದ್ದು, ಶತ್ರು ಹಡಗನ್ನು ಗುರಿಯಾಗಿಸಿ ಕ್ಷಿಪಣಿ ಉಡಾಯಿ ಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಬ್ರಹ್ಮೋಸ್‌ಗೆ ಸುಖೋಯ್‌ನಿಂದಾಗಿ ರಾಡಾರ್‌ ಸೌಲಭ್ಯ ದೊರೆಯಲಿದೆ. ಶತ್ರುಗಳ  ದಾಳಿಗೆ ಮುನ್ನವೇ ಎದುರಾಳಿ ಯುದ್ಧ ಹಡಗುಗಳ ಮೇಲೆ ದಾಳಿ ನಡೆಸಿ ನಾಶ ಮಾಡಬಲ್ಲದು.

ಬ್ರಹ್ಮಪುತ್ರಾ+ಮಾಸ್ಕೋ: ಬ್ರಹ್ಮೋಸ್‌
ಬ್ರಹ್ಮೋಸ್‌ ಕ್ಷಿಪಣಿಯನ್ನು ರಷ್ಯಾ ಹಾಗೂ ಭಾರತ ಜಂಟಿಯಾಗಿ ನಿರ್ಮಿಸಿದ್ದು, ಇದಕ್ಕೆ ಬ್ರಹ್ಮಪುತ್ರಾ  ನದಿ ಮತ್ತು ರಷ್ಯಾದ ರಾಜಧಾನಿ ಮಾಸ್ಕೋದ ಮೊದಲ ಅಕ್ಷರಗಳನ್ನು ಸಂಯೋಜಿಸಿ ನಾಮಕರಣ ಮಾಡಲಾಗಿದೆ. ಇದು ವಿಶ್ವದ ಏಕೈಕ ಸೂಪರ್‌ಸಾನಿಕ್‌ ಕ್ಷಿಪಣಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next