Advertisement

ಪ.ಮಲ್ಲೇಶ್‌ ಹೇಳಿಕೆ ಖಂಡಿಸಿ ಬ್ರಾಹ್ಮಣರ ಪ್ರತಿಭಟನೆ

03:16 PM Nov 22, 2022 | Team Udayavani |

ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ, ಪ್ರಗತಿಪರ ಚಿಂತಕ ಪ.ಮಲ್ಲೇಶ್‌ ಅವರು ಬ್ರಾಹ್ಮಣ ಸಮಾಜವನ್ನು ನಿಂದಿಸಿರುವುದನ್ನು ಖಂಡಿಸಿ ಮೈಸೂರು ನಗರ ಹಾಗೂ ಜಿಲ್ಲೆಯ ಬ್ರಾಹ್ಮಣ ಸಂಘಟನೆಗಳು ಸೋಮವಾರ ಇಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿತು.

Advertisement

ಪ್ರತಿಭಟನಾ ಮೆರವಣಿಗೆಯು ಇಲ್ಲಿನ ವಿದ್ಯಾಶಂಕರ ಕಲ್ಯಾಣ ಮಂಟಪ ಮುಂಭಾಗದಿಂದ ಆರಂಭವಾಗಿ ನೂರಡಿ ರಸ್ತೆ, ಶಾಂತಲಾ ಚಿತ್ರಮಂದಿರ ಸರ್ಕಲ್‌, ನಾರಾ ಯಣಶಾಸ್ತ್ರೀ ರಸ್ತೆ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಉಪನಿಷತ್ತು ವಿರೋಧಿಸುವವರಿಗೆ ಧಿಕ್ಕಾರ: ಪ್ರತಿಭಟನಾ ಮೆರವಣಿಗೆಯಲ್ಲಿ ಮಲ್ಲೇಶ್‌ ವಿರುದ್ಧ ಧಿಕ್ಕಾರದ ಘೋಷಣೆ ಕೂಗಲಾಯಿತು. ಬ್ರಾಹ್ಮಣ ಸಮಾಜವನ್ನು ನಿಂದಿಸುವುದನ್ನು ಖಂಡಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಬ್ರಾಹ್ಮಣರು ಶಾಂತಿಪ್ರಿಯರು, ವೇದ ಉಪನಿಷತ್ತುಗಳನ್ನು ವಿರೋಧಿಸುವವರಿಗೆ ಧಿಕ್ಕಾರ, ಬ್ರಹ್ಮ ದ್ವೇಷಿಗಳಿಗೆ ಧಿಕ್ಕಾರ ಎಂದು ಕೂಗಲಾಯಿತು. ಪ್ರತಿಭಟನಾಕಾರರು ಭಗವಾಧ್ವಜವನ್ನು ಹಿಡಿದಿದ್ದರು. ವೇದ ಉಪ ನಿಷತ್ತು ಹಿಂದೂ ಧರ್ಮದ ಸಂಪತ್ತು ಎಂಬ ಭಿತ್ತಿಪತ್ರ ಹಿಡಿಯಲಾಗಿತ್ತು. ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿ ರಾರು ಮಂದಿ ಬ್ರಾಹ್ಮಣರು ಮಾತ್ರವಲ್ಲದೇ ಇತರ ಸಮುದಾಯದ ಸ್ಥಳೀಯ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ: ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರು ಮನವಿ ಪತ್ರದಲ್ಲಿ ಪ.ಮಲ್ಲೇಶ್‌ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತ ನಾಡಿದ್ದಾರೆ. ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ಮಲ್ಲೇಶ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ. ಮಲ್ಲೇಶ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನಾ ಮೆರವಣಿಗೆಯಲ್ಲಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಎಸ್‌.ಎ. ರಾಮದಾಸ್‌, ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಪ್ರೊ.ಭಾಷ್ಯಂ ಸ್ವಾಮೀಜಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್‌, ಭಾನುಪ್ರಕಾಶ್‌ ಶರ್ಮ, ಮಾಜಿ ಶಾಸಕ ಗೋ.ಮಧುಸೂದನ್‌, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿ ವಾಸಗೌಡ, ಮಹಾನಗರಪಾಲಿಕಾ ಸದಸ್ಯ ಮ.ವಿ.ರಾಮಪ್ರಸಾದ್‌, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್‌, ಯೋಗಾನರಸಿಂಹ, ಜಿ.ಆರ್‌.ನಾಗರಾಜ್‌, ನಟರಾಜ್‌ ಜೋಯಿಸ್‌, ಶ್ರೀಕಾಂತ್‌ ಕುಮಾರ್‌, ಕೆ.ಆರ್‌. ಮೋಹನ್‌ ಕುಮಾರ್‌, ಟಿ.ಎಸ್‌. ರವಿಶಂಕರ್‌, ಎನ್‌. ಎಂ. ನವೀನ್‌ ಕುಮಾರ್‌, ಕೆ.ಎಂ. ನಿಶಾಂತ್‌, ಶಂಕರ ರಾಜಾ ಭಟ್‌, ಮಹೇಶಕುಮಾರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next