Advertisement

ಬ್ರಾಹ್ಮಣರು ಸನಾತನ ಸಂಸ್ಕೃತಿಯ ವಾಹಕರು: ಹಾರನಹಳ್ಳಿ

01:12 PM May 08, 2022 | Team Udayavani |

ಗದಗ: ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ಬ್ರಾಹ್ಮಣ ಸಮಾಜದ ಮೇಲಿದೆ. ಸಂಘಟನೆ, ಸಂಸ್ಕಾರ ಮತ್ತು ಸ್ವಾವಲಂಬನೆ ಬೆಳೆಸಿಕೊಂಡ ಬ್ರಾಹ್ಮಣರು ಸನಾತನ ಸಂಸ್ಕೃತಿಯ ವಾಹಕರಾಗಿದ್ದಾರೆ ಎಂದು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಹೇಳಿದರು.

Advertisement

ಶ್ರೀ ಶಂಕರ ಮಠದ ಶ್ರೀ ಶಂಕರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ವಿವಿಧ ಬ್ರಾಹ್ಮಣ ಸಂಘಟನೆಗಳ ಆಶ್ರಯದಲ್ಲಿ ನಡೆದ ಗದಗ ಜಿಲ್ಲಾ ಬ್ರಾಹ್ಮಣರ ಬೃಹತ್‌ ಸಮಾವೇಶ ಹಾಗೂ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ರಾಜ್ಯಾದ್ಯಂತ ಸಂಚರಿಸಿ ಬ್ರಾಹ್ಮಣ ಸಂಘಟನೆ ಕೈಗೊಳ್ಳುತ್ತಿದೆ. ವೀರನಾರಾಯಣ ಹಾಗೂ ಕುಮಾರವ್ಯಾಸನ ನಲೆವೀಡು ಗದುಗಿನಲ್ಲಿ ವೀರವಿಪ್ರರ ಸಂಘಟನೆ ನೋಡಿ ತಮಗೆ ತುಂಬಾ ಸಂತೋಷವಾಗಿದೆ. ಬ್ರಾಹ್ಮಣರು ವಿಶಾಲ ಮನೋಭಾವನೆ ಹೊಂದಿ ತಮ್ಮ ತಾತ್ವಿಕ ಮತ, ಪಂಥ, ಭೇದ ಮರೆತು ಒಗ್ಗಟ್ಟಿನಿಂದ ಸಾಗಬೇಕಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಬ್ರಾಹ್ಮಣ ಬಾಂಧವರ ಸಂಕಷ್ಟಗಳನ್ನು ಪರಿಹರಿಸಲು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅನೇಕ ಯೋಜನೆಗಳನ್ನು ರೂಪಿಸಿದೆ. ವಿಪ್ರ ವೈದ್ಯಕೀಯ ವೇದಿಕೆ, ವಿಪ್ರ ವಿದ್ಯಾನಿಧಿ ಮುಂತಾದ ಕಾರ್ಯಕ್ರಮಗಳ ಮೂಲಕ ಬ್ರಾಹ್ಮಣ ಬಾಂಧವರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕೆಂದು ಹೇಳಿದರು.

ಬ್ರಾಹ್ಮಣ ಸಮಾಜದ ರಾಜ್ಯಮಟ್ಟದ ಹಿರಿಯ ನಾಯಕರಾದ ಹಿರಿಯಣ್ಣ ಸ್ವಾಮಿ ಮಾತನಾಡಿ, ಬ್ರಾಹ್ಮಣರು ತಮ್ಮ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ತ್ಯಜಿಸದೇ ಸಂಘಟಿತರಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದರು.

ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಗದಗ ಜಿಲ್ಲಾ ಉಸ್ತುವಾರಿ ವಿಜಯ ನಾಡಜೋಶಿ ಮಾತನಾಡಿ, ಬಿಡಿ ಬಿಡಿಯಾಗಿ ಬ್ರಾಹ್ಮಣರು ಅನೇಕ ಸಾಧನೆಗಳನ್ನು ಮಾಡಿದ್ದರೂ ಇಡೀ ಸಮಾಜ ಒಗ್ಗಟ್ಟಾಗಿ ಸಾಗಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಹೇಳಿದರು.

Advertisement

ಸಮಾರಂಭ ವೇ.ಮೂ. ದತ್ತಂಭಟ್‌ ತೆಂಬದಮನಿ ಹಾಗೂ ಗದಗ ಬೇಟಗೇರಿ ಬ್ರಹ್ಮ ವೃಂದದವರ ವೇದಘೋಷದೊಂದಿಗೆ ಆರಂಭಗೊಂಡಿತು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ಗದಗ ತಾಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷರಾದ ವೇ.ಮೂ. ರತ್ನಾಕರ ಭಟ್‌ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಗದಗ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಹುಯಿಲಗೋಳ ಸ್ವಾಗತಿಸಿ, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿ ಮಂಡಳಿ ಸದಸ್ಯರಾದ ಗುರುರಾಜ ಬಳಗಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ|ದತ್ತಪ್ರಸನ್ನ ಪಾಟೀಲ ನಿರೂಪಿಸಿ, ಪ್ರೊ|ಪ್ರಶಾಂತ ಪಾಟೀಲ ವಂದಿಸಿದರು.

ವೇದಿಕೆಯ ಮೇಲೆ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಜಯಸಿಂಹ, ಕಾರ್ತಿಕ ಬಾಪಟ್‌, ವಿಶ್ವನಾಥ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ವಸಂತ ನಾಡಜೋಶಿ, ಗದಗ ಜಿಲ್ಲೆ ವಿವಿಧ ತಾಲೂಕುಗಳ ವಿಪ್ರ ಮುಖಂಡರಾದ ಅಶೋಕ ಕುಲಕರ್ಣಿ, ಪ್ರಶಾಂತ ಜೋಶಿ, ಸಂಜೀವ ಜೋಶಿ, ಗೋಪಾಲ ಫಡ್ನಿಸ್‌, ದತ್ತಾತ್ರೇಯ ಜೋಶಿ, ವಿನಾಯಕ ಸದರಜೋಶಿ, ಸತೀಶ ಹುಯಿಲಗೋಳ ಗದಗ ಜಿಲ್ಲಾ ಬ್ರಾಹ್ಮಣ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಗಿರೀಶ ಕುಲಕರ್ಣಿ, ಜಿಲ್ಲೆಯ ವಿಪ್ರ ಮುಖಂಡರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ರಾಜಗೋಪಾಲಾಚಾರ್‌ ಮಳಗಿ, ವೆಂಕಟೇಶ ಗುಡಿ, ಎಚ್‌ .ಡಿ.ಪಾಟೀಲ, ಪ್ರೊ.ಪಿ.ಆರ್‌.ಇನಾಮದಾರ, ಪ್ರೊ.ಅನೀಲ ವೈದ್ಯ, ಎಚ್‌.ಡಿ.ಪಾಟೀಲ, ಮುಕುಂದ ಪೋತ್ನಿಸ್‌, ಕೃಷ್ಣಮೂರ್ತಿ ಪಾಟೀಲ, ವೆಂಕಟೇಶ ಕುಲಕರ್ಣಿ, ಜಂತ್ಲಿಶಿರೂರ, ರಮೇಶ ಪೂಜಾರ, ಕಲಾವತಿ ಅಲಬೂರ, ರವೀಂದ್ರ ಜೋಶಿ, ಆನಂದ ಕುಲಕರ್ಣಿ, ಅನೀಲ ತೆಂಬದಮನಿ, ಪ್ರಹ್ಲಾದಾಚಾರ್‌ ನಿಲೂಗಲ್‌, ಪುರಾಣಿಕ ರಾಜೀವ ಉಮರ್ಜಿ, ಜೋತಿ ಗಜೇಂದ್ರಗಡ ಸೇರಿದಂತೆ ನೂರಾರು ವಿಪ್ರ ಬಾಂಧವರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next