ಬ್ರಹ್ಮಾವರ: ಇಲ್ಲಿನ ದೂಪದಕಟ್ಟೆ ಬಳಿ ರಾ.ಹೆ.-66ರಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಮೃತರನ್ನು ಶಿವಮೊಗ್ಗದ ಸುಮೀತ್ ಕುಮಾರ್(19) ಮತ್ತು ಕೋಟದ ವಾಗೀಶ ಕೆದ್ಲಾಯ (19) ಎನ್ನಲಾಗಿದೆ.
ಈರ್ವರೂ ಉಡುಪಿಯ ಸಂಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ. ಪರೀಕ್ಷೆ ಮುಗಿಸಿ ಉಡುಪಿಯಿಂದ ಕೋಟದತ್ತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಬೈಕ್ ಮತ್ತು ಲಾರಿ ಎರಡೂ ಕೋಟದತ್ತ ಹೋಗುತ್ತಿತ್ತು. ಬೈಕ್ ಸ್ಕಿಡ್ ಆಗಿ ಬಿದ್ದಾಗ ಲಾರಿ ಅದರ ಮೇಲೆ ಚಲಿಸಿತ್ತೇ ಅಥವಾ ಬೈಕ್‌ಗೆ ಲಾರಿ ಢಿಕ್ಕಿಯಾಯಿತೇ ಎಂಬುದು ಗೊತ್ತಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Related Articles
ಸಿಎ ಮತ್ತು ಪದವಿ ವ್ಯಾಸಂಗ
ಸುಮೀತ್ ಮತ್ತು ವಾಗೀಶ್ ಆತ್ಮೀಯ ಮಿತ್ರರಾಗಿದ್ದು, ಪ್ರತಿಭಾನ್ವಿತರು. ಇಬ್ಬರೂ ಹಗಲಿನಲ್ಲಿ ಸಿಒ ಅಭ್ಯಾಸ ನಡೆಸುತ್ತಿದ್ದರೆ, ಸಂಜೆ ತರಗತಿ ಮೂಲಕ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಅವರು ಎರಡನೇ ವರ್ಷದ ಪದವಿಯಲ್ಲಿದ್ದರು. ಸುಮಿತ್ ಕುಮಾರ್ ಅವರು ಕೋಟದ ವಾಗೀಶ ಕೆದ್ಲಾಯ ಅವರ ಮನೆಯಲ್ಲೇ ಉಳಿದು ಕಾಲೇಜಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಡೆತ್ ನೋಟ್ ಬರೆದಿಟ್ಟು ನದಿಗೆ ಹಾರಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ