Advertisement

ಬ್ರಹ್ಮಾವರ ಉಪನೋಂದಣಿ ಕಚೇರಿ ಅವ್ಯವಸ್ಥೆಯ ಆಗರ

06:00 AM Sep 06, 2018 | |

ಬ್ರಹ್ಮಾವರ: ವಾರ್ಷಿಕ ಸರಾಸರಿ 12 ಕೋಟಿ ರೂ. ಕಂದಾಯ ಪಾವತಿ ಇರುವ ಬ್ರಹ್ಮಾವರ ಉಪನೋಂದಣಿ ಅಧಿಕಾರಿ (ಸಬ್‌ರಿಜಿಸ್ಟ್ರಾರ್‌) ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಶೌಚಾಲಯ ದುಃಸ್ಥಿತಿ ಆಸ್ತಿ ನೊಂದಣಿ, ವಿವಾಹ ನೊಂದಣಿ ಹೀಗೆ ಹಲವು ಕಾರ್ಯಗಳಿಗಾಗಿ ಕಚೇರಿಗೆ ಪ್ರತಿನಿತ್ಯ ನೂರಾರು ಮಂದಿ ಆಗಮಿಸುತ್ತಾರೆ. ಆದರೆ ಶೌಚಾಲಯ ತೀರ ದುಸ್ಥಿತಿಯಲ್ಲಿದೆ. ಮಹಿಳೆಯರು, ಮಕ್ಕಳ ಪಾಡು ಹೇಳ ತೀರದು. ಶೌಚಾಲಯ ಉಪಯೋಗಕ್ಕೆ ಸಾಧ್ಯವೇ ಇಲ್ಲದ ಸ್ಥಿತಿ ತಲುಪಿದೆ.

Advertisement

ಕಾದು ಕಾದು..
ಬ್ರಹ್ಮಾವರದ ಕಚೇರಿಯಲ್ಲಿ ಪ್ರತಿನಿತ್ಯ ಸರಾಸರಿ 30 ನೋಂದಣಿಗಳಿರುತ್ತದೆ. ಸರ್ವರ್‌ ಸಮಸ್ಯೆ, ಕಂಪ್ಯೂಟರ್‌ ತೊಂದರೆ, ಸಿಬಂದಿ ಕೊರತೆ ಹೀಗೆ ಹಲವು ಕಾರಣಗಳಿಂದ ಗಂಟೆಕಟ್ಟಲೆ ಕಾಯಬೇಕಾಗಿರುವುದು ಸಾಮಾನ್ಯವಾಗಿದೆ. 

140 ವರ್ಷ ಹಳೆಯ ಕಟ್ಟಡ !
ಬ್ರಹ್ಮಾವರ ಉಪನೊಂದವಣಾ ಕಚೇರಿ ಬರೋಬ್ಬರಿ 140 ವರ್ಷ ಹಳೆಯದಾದ ಕಟ್ಟಡದಲ್ಲಿದೆ. ಅಮೂಲ್ಯ ದಾಖಲೆಗಳಿರುವ ಕಚೇರಿಯ ಮಾಡು ಸೋರುತ್ತಿದ್ದರು ಹೊಸ ಕಟ್ಟಡ ನಿರ್ಮಾಣವಾಗಿಲ್ಲ.ಕೇಂದ್ರದಲ್ಲಿ ಕುಳಿತುಕೊಳ್ಳಲು ಸಾಕಷ್ಟು ಆಸನದ ವ್ಯವಸ್ಥೆ ಇಲ್ಲಿಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಜನರು ಬಂದರೆ ಕಟ್ಟಡದ ಬದಿಯಲ್ಲಿ ನಿಲ್ಲಬೇಕಿದೆ. ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಕಂಪ್ಯೂಟರ್‌, ಸ್ಕ್ಯಾನರ್‌ ಇನ್ನಿತರ ಉಪಕರಣ ಮೇಲ್ದರ್ಜೆಗೇರಬೇಕಿದೆ.

ಮಿನಿ ವಿಧಾನಸೌಧ ಅಗತ್ಯ
ಬ್ರಹ್ಮಾವರವು ತಾಲೂಕು ಆಗಿ ಘೋಷಣೆ ಯಾಗಿದೆ. ಆದರೆ ತಾಲೂಕು ಮಟ್ಟದ ಹಲವು ಕಚೇರಿ ಆರಂಭವಾಗಬೇಕಿದೆ. 
ಈ ಎಲ್ಲಾ ಕಚೇರಿಗಳು ಒಂದೇ ಸಮುಚ್ಚಯದಲ್ಲಿ ಇರಲು ಇಲ್ಲಿ ಸುಸಜ್ಜಿತ  ಮಿನಿ ವಿಧಾನಸೌಧ‌ದ ಅಗತ್ಯವಿದೆ ಎನ್ನುವುದು ಆಗ್ರಹವಾಗಿದೆ. 

ಖಾಯಂ ಉಪನೋಂದಣಿ ಅಧಿಕಾರಿ  ಇಲ್ಲ
ಅಷ್ಟೇ ಅಲ್ಲ, ಮೇ 31ಕ್ಕೆ ಇಲ್ಲಿನ ಉಪನೋಂದಣಿ ಅಧಿಕಾರಿ ನಿವೃತ್ತರಾಗಿದ್ದರೂ  ಹುದ್ದೆ ಭರ್ತಿಯಾಗಿಲ್ಲ.ಕಳೆದ ಮೇ 31ಕ್ಕೆ ಉಪ ನೊಂದ‌ಣಾಧಿಕಾರಿ ನಿವೃತ್ತರಾಗಿದ್ದರೂ ಇದುವರೆಗೆ  ಈ ಹುದ್ದೆ ಇನ್ನೂ ಭರ್ತಿಯಾಗಿಲ್ಲ.

Advertisement

ಮನವಿ
ಜನ ಸಾಮಾನ್ಯರ ಕಾರ್ಯಗಳು ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಬ್ರಹ್ಮಾವರಕ್ಕೆ ಪೂರ್ಣಕಾಲಿಕ ಉಪ ನೋಂದಣಿ ಅಧಿಕಾರಿ ನೇಮಿಸುವಂತೆ ಕಂದಾಯ ಸಚಿವರಿಗೆ ಖುದ್ದಾಗಿ ಮನವಿ ಮಾಡಲಾಗಿದೆ. ಮಿನಿ ವಿಧಾನ ಸೌಧಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
– ಕೆ.ರಘುಪತಿ ಭಟ್‌, 
ಶಾಸಕ, ಉಡುಪಿ

ಕಟ್ಟಡ ಅಗತ್ಯ
ಕಡತ, ಕಂಪ್ಯೂಟರ್‌ ಸುರಕ್ಷತೆಗಾಗಿ ಕಚೇರಿಗೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಈ ನಿಟ್ಟಿನಲ್ಲಿ 2015ರಲ್ಲೇ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
– ನಾಗರಾಜ ಬಿ. ಓಲೇಕಾರ್‌
ಪ್ರಭಾರ ಉಪನೊಂದ‌ಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next