Advertisement

Brahmavar: ಲಾಕ್‌ಅಪ್‌ ಡೆತ್‌; ಕೇರಳ ಸಿಎಂಗೆ ದೂರು

07:51 PM Nov 27, 2024 | Team Udayavani |

ಬ್ರಹ್ಮಾವರ: ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಮೃತಪಟ್ಟ ಕೇರಳ ಕೊಲ್ಲಂ ಮೂಲದ ಬಿಜು ಯೊಹನ್‌(45) ಕುಟುಂಬಸ್ಥರು ಕೇರಳ ಮುಖ್ಯಮಂತ್ರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Advertisement

ಚೇರ್ಕಾಡಿಯಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟ ಬಿಜು ಯೊಹನ್‌ ನ. 9ರಂದು ಲಾಕ್‌ಅಪ್‌ನಲ್ಲಿ ಮೃತಪಟ್ಟಿದ್ದರು. ಪೊಲೀಸರು ಕಾನೂನು ಪ್ರಕಾರ ವಶಕ್ಕೆ ಪಡೆದ ಬಗ್ಗೆ ಅನುಮಾನವಿದೆ. ಮೃತನ ದೇಹದಲ್ಲಿ ಹಲವು ಗಾಯಗಳಿದ್ದವು. ಅಸಹಜ ಸಾವು ಆಗಿದ್ದು, ಬ್ರಹ್ಮಾವರ ಪೊಲೀಸರ ಮೇಲೆ ಬಹಳಷ್ಟು ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಠಾಣೆಯ ಉಪನಿರೀಕ್ಷಕ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಓರ್ವನನ್ನು ಅಮಾನತು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next