ಕಾಪು: ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಬೆಳಕನ್ನು ತೋರಿದ ಮಹಾನ್ ದಾರ್ಶನಿಕರು. ನಾರಾಯಣಗುರುಗಳು ಜಗತ್ತಿಗೆ ಸಾರಿದ ಗುರುತತ್ವ ಮತ್ತು ಗುರುಸಂದೇಶವು ಇಡೀ ಸಮಾಜದ ಮುನ್ನಡೆಗೆ ಪ್ರೇರಣೆ ಮತ್ತು ಶಕ್ತಿಯಾಗಿದೆ. ಸಮಸ್ತ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಅವರು ಹಾಕಿಕೊಟ್ಟ ಸತ್ಪಥದ ಹಾದಿಯಲ್ಲಿ ಮುನ್ನಡೆಯುವುದು ಇಂದಿನ ಅನಿವಾರ್ಯತೆಯಾಗಿದೆ ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಸೆ. 6ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆಯ ಧಾರ್ಮಿಕ ಸಭೆ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ರತ್ನಾಕರ ಎನ್. ಅಂಚನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಸೋಮಪ್ಪ ಡಿ. ಪಾಲನ್, ಸಲ್ಪಾ ಸ್ಯಾನಿಟರಿಯ ಮಾಲಕ ಅಶೋಕ್ ಎನ್. ಪೂಜಾರಿ, ವನಿತಾ ಆರ್. ಪೂಜಾರಿ ಕಟಪಾಡಿ, ಕರಾವಳಿ ಆಟೋಮೊಬೈಲ್ಸ್‌ನ ವಾಸು ಪೂಜಾರಿ ಕಟಪಾಡಿ, ಕರಿಯ ಪೂಜಾರಿ ವಳದೂರು, ದಾನಿ ರಾಧಾಕೃಷ್ಣ ಕತಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ವೈ. ಮಾಧವ ಅಂಚನ್, ಜೊ. ಕಾರ್ಯದರ್ಶಿಗಳಾದ ಇಂದುಶೇಖರ್ ಸುವರ್ಣ, ದಿವಾಕರ ಸನಿಲ್, ಕಮಿಟಿ ಸದಸ್ಯರಾದ ಕಿಶೋರ್ ಅಂಬಾಡಿ, ಲೀಲಾಧರ ಕೋಟ್ಯಾನ್, ಮಹೇಶ್ ಪೂಜಾರಿ, ರಮೇಶ್ ಬಂಗೇರ, ದೇವಪ್ಪ ಪೂಜಾರಿ, ಸುಲೋಚನಾ ಪಾಲನ್, ಗಣ್ಯರಾದ ಶೀÅಕರ ಸುವರ್ಣ ಕಟಪಾಡಿ, ಕಟಪಾಡಿ ಶಂಕರ ಪೂಜಾರಿ, ದಯಾನಂದ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಏಣಗುಡ್ಡೆ ಪಕೀರ ಪೂಜಾರಿ ಸ್ಮಾರಕ ದತ್ತಿನಿಧಿ, ಏಣಗುಡ್ಡೆ ಗರಡಿಮನೆ ನಾಗಪ್ಪ ಪೂಜಾರಿ ಸ್ಮಾರಕ ದತ್ತಿನಿಧಿ, ಕಟಪಾಡಿ ಮುದ್ದುಸುವರ್ಣ ಮತ್ತು ಕಮಲ ಸುವರ್ಣ ಸ್ಮಾರಕ ದತ್ತಿನಿಧಿ ಹಾಗೂ ವಿವಿಧ ದಾನಿಗಳಿಂದ ಸಂಗ್ರಹಿತ ನಿಧಿಗಳಿಂದ ವಿದ್ಯಾರ್ಥಿಗಳಿಗೆ ಸುಮಾರು ಒಂದು ಲಕ್ಷ ರೂ. ಗೂ ಮಿಕ್ಕಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಗೌಣ ಪ್ರಣ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್ ಸ್ವಾಗತಿಸಿ, ಎನ್. ಜಿ. ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಜಿ. ಅಮೀನ್ ವಂದಿಸಿದರು.