Advertisement

ಬ್ರಹ್ಮಕಲಶೋತ್ಸವಕ್ಕೆ ಸಜ್ಜಾದ ದೂಂಬ್ರ ಶ್ರೀ ಸುಬ್ರಹ್ಮಣ್ಯ, ನಾಗರಾಜ, ನಾಗಕನ್ಯಕೆ ಬನ

03:17 PM May 03, 2019 | keerthan |

ಬದಿಯಡ್ಕ: ಕುಂಭ್ಡಾಜೆ ಗ್ರಾಮದ ಗೋಸಾಡ ಸಮೀಪದ ದೂಂಬ್ರ ಶ್ರೀ ಸುಬ್ರಹ್ಮಣ್ಯ, ನಾಗರಾಜ, ನಾಗಕನ್ಯಕೆ ಬನದ ಜೀರ್ಣೋದ್ಧಾರ ಕಾರ್ಯಗಳು ಸಂಪೂರ್ಣಗೊಂಡು ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.

Advertisement

ಸುಮಾರು 300 ವರ್ಷಗಳ ಪುರಾತನವಿರುವ ಈ ಸನ್ನಿಧಿಯ ಜೀರ್ಣೋದ್ಧಾರ ಕಾರ್ಯಗಳು ಕಳೆದ ಒಂದು ವರ್ಷಗಳಿಂದ ತ್ವರಿತ ಗತಿಯಲ್ಲಿ ಸಾಗಿ ಇದೀಗ ಪೂರ್ಣಗೊಂಡು ಇದೇ ಜೂನ್‌ 11ಮತ್ತು 12 ನೇ ತಾರೀಕುಗಳಲ್ಲಾಗಿ ಬ್ರಹ್ಮ ಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ನೇತೃತ್ವದಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವವೂ ಜರಗಲಿರುವುದು. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಶ್ರೀ ಸನ್ನಿಧಿ ಪರಿಸರದಲ್ಲಿ ಜರಗಿತು. ಆಮಂತ್ರಣ ಪತ್ರಿಕೆಯನ್ನು ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಆಧ್ಯಕ್ಷರಾದ ನಾರಾಯಣ ರೈ ಕುದ್ರಾಡಿಯವರು ಬ್ರಹ್ಮಕಲಶೋತ್ಸವದ ಪ್ರಚಾರ ಸಮಿತಿ ಸಂಚಾಲಕರಾದ ರಾಜೇಶ್‌ ಶೆಟ್ಟಿಯವರಿಗೆ ನೀಡುವ ಮೂಲಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಅದೇ ರೀತಿ ಅನ್ನದಾನದ ಹಾಗೂ ಲಕ್ಕಿ ಕೂಪನ್‌ನನ್ನು ಧಾರ್ಮಿಕ ಮುಂದಾಳು, ಅಧ್ಯಾಪಕರೂ ಆದ ಹರಿನಾರಯಣ ಚೂರಿಕ್ಕೋಡುರವರು ಆರ್ಥಿಕ ಸಮಿತಿ ಸಹ ಸಂಚಾಲಕರಾದ ಪ್ರಸಾದ್‌ ಗೋಸಾಡರವರಿಗೆ ನೀಡಿ ಬಿಡುಗಡೆಗೊಳಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕುಂಞಿರಾಮ ಗೋಸಾಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕ್ಷೇತ್ರೇಶರರೂ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ ಆದ ಕೃಷ° ಅಮ್ಮಣ್ಣಾಯ, ಶ್ರೀನಿವಾಸ ಅಮ್ಮಣ್ಣಾಯ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಕೋಶಾಧಿಕಾರಿ ಮನಮೋಹನ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ರವಿಂದ್ರ ರೈ ಸ್ವಾಗತಿಸಿ ಹಾಗೂ ರವಿರಾಜ ಮಲ್ಲಮೂಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next