Advertisement
ಹೊರೆಕಾಣಿಕೆ ವಿಶೇಷತೆಮೇ 8ರಂದು ಬೆಳಗ್ಗೆ 9 ಕ್ಕೆ ಕುತ್ಯಾರು ದೇವಸ್ಥಾನದಿಂದ 100 ಜನ ಸ್ವಯಂ ಸೇವಕರ ನೇತೃತ್ವದಲ್ಲಿ ಮೆರವಣಿಗೆ ಹೊರಡಲಿದೆ. 2,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
6 ಎಕರೆಯಲ್ಲಿ ಪಾರ್ಕಿಂಗ್ ವಾಹನ ನಿಲುಗಡೆಗೆ 6 ಎಕರೆ ಪ್ರದೇಶ ಮೀಸಲಿರಿಸಿದ್ದು, 4 ಎಕರೆ ಪ್ರದೇಶದಲ್ಲಿ ಚತುಶ್ಚಕ್ರ ವಾಹನ, 2 ಎಕರೆ ಪ್ರದೇಶದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ವ್ಯವಸ್ಥೆ ಮಾಡಲಾಗಿದೆ. ಒಟ್ಟು 50 ಮಂದಿ ಸ್ವಯಂಸೇವಕರು ನಿರಂತರ ಕಾರ್ಯನಿರ್ವಹಿಸಲಿದ್ದಾರೆ.
ಅಂದಾಜು 50 ಸಾವಿರ ಚದರ ಅಡಿಗೂ ಅಧಿಕ ವಿಸ್ತೀರ್ಣದ ಚಪ್ಪರ ಹಾಕಲಾಗಿದೆ. ಅನ್ನದಾನ, ಸಭಾ ಮಂಟಪ, ದೇವಸ್ಥಾನ ಸುತ್ತಮುತ್ತ, ಹಸುರುವಾಣಿಗೆ, ಕಾರ್ಯಾಲಯಕ್ಕೆ ಚಪ್ಪರ ಸಜ್ಜುಗೊಂಡಿದೆ. 50 ರಿಂದ 70 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿಂದ ಆಡಳಿತ ಸಮಿತಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿದೆ. ಭೋಜನ ವ್ಯವಸ್ಥೆ
ಸತ್ಯನಾರಾಯಣ ಭಟ್ ನೇತೃತ್ವದಲ್ಲಿ 50 ಮಂದಿಯ ಬಾಣಸಿಗರ ತಂಡ ಅಡುಗೆ ತಯಾರಿಯಲ್ಲಿ ತೊಡಗಲಿದೆ. ಭೋಜನಕ್ಕೆ ಸ್ಟೀಲ್ ತಟ್ಟೆ ಉಪಯೋಗಿಸಲಾಗುತ್ತಿದ್ದು, ಬಫೆ, ವಿವಿಐಪಿ, ಕುಳಿತು ಊಟ ಮಾಡುವ ವ್ಯವಸ್ಥೆ ಇರಲಿದೆ. ದಕ್ಷಿಣ ಭಾರತ ಶೈಲಿಯ ಭೋಜನ ಸಿದ್ಧಗೊಳ್ಳಲಿದೆ.
Related Articles
ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ನೀರು ಬಳಸದೆ ಪ್ಯೂರಿಫೈಡ್ ನೀರಿನ 4 ಯಂತ್ರಗಳನ್ನು ತರಿಸಲಾಗಿದೆ. ಪ್ಲಾಸ್ಟಿಕ್‌ಮುಕ್ತ ಕಾರ್ಯಕ್ರಮ ಚಿಂತನೆ ಆಯೋಜಕರದಾಗಿದ್ದು, ಇದಕ್ಕಾಗಿ ಸ್ವತ್ಛತೆ ದೃಷ್ಟಿಯಿಂದ ಹಾಳೆ ತಟ್ಟೆಯನ್ನೂ ಬಳಸದೆ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಸ್ವಚ್ಛತೆಗಾಗಿ 300 ಮಂದಿ ಸ್ವಯಂಸೇವಕರನ್ನು ನಿಯೋಜಿಸಲಾಗಿರುವುದು ವಿಶೇಷತೆಗಳಲ್ಲೊಂದು.
Advertisement
ದಶದ್ವಾರಲಾೖಲ ಕುತ್ರೊಟ್ಟು ಸಮೀಪ 10 ಲೋಡ್ ಬಿದಿರಿನಿಂದ ಮುಖ್ಯದ್ವಾರವನ್ನು ಅತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ. ಹೇಮಂತ್ ಅವರ 30 ಮಂದಿ ತಂಡ 10 ದಿನಗಳಿಂದ ದ್ವಾರ ನಿರ್ಮಾಣದಲ್ಲಿ ತೊಡಗಿದ್ದು, ಭವ್ಯವಾಗಿ ಮೂಡಿಬಂದಿದೆ. ಉಳಿದಂತೆ ಲಾೖಲ, ಪುತ್ರಬೈಲು, ಹೊಕ್ಕಿಲ, ಬೆಳ್ತಂಗಡಿ ಚರ್ಚ್, ಮಂಚದ ಪಲ್ಕೆ, ಪಡ್ಲಾಡಿ, ದರ್ಪಿಂಜ, ನಿರ್ಪರಿ, ಗಾಂಧಿನಗರದಲ್ಲಿ ಸಾಂಪ್ರದಾಯಿಕವಾಗಿ ದ್ವಾರಗಳು ನಿರ್ಮಾಣಗೊಂಡು ಸ್ವಾಗತಕ್ಕೆ ಸಜ್ಜಾಗಿವೆ.