Advertisement

“ಬ್ರಹ್ಮಗಂಟು’ಬಂದು, ಬ್ರಹ್ಮನೇ ಕಾಪಾಡಿದ!

06:28 PM Jul 11, 2017 | Harsha Rao |

ನಾನು ಡಿಗ್ರಿ ಮುಗಿಸಿ ಸ್ನಾತಕೋತ್ತರ ಪದವಿಗೆ ಸೇರಿದೆ. ಆ ಕ್ಲಾಸ್‌ನಲ್ಲಿ ನನಗಿಂತ ದಪ್ಪವಿರುವ ಮುಗ್ಧ ಮುಖ ಕಾಣಿಸಿತ್ತು. ಆಗ ನಾನು ಫ‌ುಲ್‌ ಖುಷ್‌… ಯಾಕಂದ್ರೆ, ನನಗಿಂತಲೂ ದಪ್ಪದವಳು ನನ್ನ ಜೊತೆಗೆ ಇದಾಳಲ್ಲ ಅನ್ನೋ ಸಮಾಧಾನ!

Advertisement

ಪ್ರಪಂಚದಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೂ ಆಸೆ ಅನ್ನೋದು ಇದ್ದೇ ಇರುತ್ತದೆ. ಆ ಆಸೆ ಆಕಾಂಕ್ಷೆಗಳನ್ನು ತೀರಿಸೋದಕ್ಕೆ ಏನೆಲ್ಲಾ ಕಸರತ್ತು ಮಾಡ್ತಾರೆ ನಮ್‌ ಹುಡುಗರು. ಟೀನೇಜ್‌ಗೆ ಕಾಲಿಟ್ಟರೆ ಸಾಕು ನಮ್ಮ ಹುಡುಗ, ಹುಡುಗೀರ್‌ಗೆ ಸ್ಟೈಲ್‌ ಎಂಬ ಭೂತ ಬೆನ್ನು ಬಿಡದೆ ಹಿಂಬಾಲಿಸುತ್ತೆ. ಸ್ಟೈಲ್‌ ಮಾಡೋದಕ್ಕೆ ಸಿನಿಮಾ ಹೀರೋ, ಹಿರೋಯಿನ್‌ಗಳನ್ನು ಕೂಡ ಫಾಲೋ ಮಾಡ್ತಾರೆ. ಹುಡುಗರು ಸಿಕ್ಸ್‌ ಪ್ಯಾಕ್‌ಗಾಗಿ ಜಿಮ್‌, ವಾಕ್‌ ಅಂತ ಮೊರೆ ಹೋದ್ರೆ, ಹುಡುಗೀರೇನು ಕಮ್ಮಿನಾ? ಕತ್ರಿನಾ ಕೈಫ್, ಕರೀನಾ ಕಪೂರ್‌ನಂಥ ನಟಿಯರನ್ನು ಮೀರಿಸುವ ಛಲದಲ್ಲಿ ಝೀರೋ ಸೈಝ್ಗಾಗಿ ಅನ್ನ, ಊಟ ಬಿಟ್ಟು ಸ್ಕೆಲಿಟನ್‌ಗಳಂತೆ ಕಾಣೋದ್ರಲ್ಲಿ ಡೌಟ್‌ ಇಲ್ಲ. ಈ ನಮ್ಮ ಹುಡುಗೀರು ಝೀರೋ ಸೈಝ್ ಅಂತ ಹೋಗಿ ಸ್ಕೆಲಿಟನ್‌ ಯಾವುದು, ಝೀರೋ ಸೈಝ್ ಯಾವುದು ಅನ್ನೋ ಅನುಮಾನ ಶುರುವಾಗೋದು ಪಕ್ಕಾ! ಹಾಗಂತ ಎಲ್ಲಾ ಹುಡುಗೀರೂ ಸ್ಕೆಲಿಟನ್‌ ದೇಹ, ಅಲ್ಲಲ್ಲಾ ಝೀರೋ ಸೈಝ್ ಇರ್ತಾರೆ ಅನ್ನೋದಕ್ಕೆ ಆಗಲ್ಲ. ಇನ್ನೂ ಕೆಲವು ಹುಡುಗೀರು ಇದ್ದಾರೆ. ಅವರು ಡಯೆಟ್‌, ಝೀರೋ ಸೈಝ್ ಎಂಬ ಪದವನ್ನೇ ತಮ್ಮ ಡಿಕ್ಷನರಿಯಿಂದ ಕಿತ್ತು ಬಿಸಾಕಿದ್ದಾರೆ.

ಹೀಗೇನೇ ನನಗೂ 2- 3 ವರ್ಷಗಳ ಹಿಂದೆ ಈ ಝೀರೋ ಸೈಝ್ ಎಂಬ ಕಾನ್ಸೆಪ್ಟ್ ತಲೆಯೊಳಗೆ ಹೋಗಿತ್ತು. ಆದರೆ, ಅದು ಯಾವಾಗ ನನ್ನ ತಲೆಯಿಂದ ಹೊರಗೆ ಬಂದಿತ್ತೋ ಗೊತ್ತಿಲ್ಲ… ಹುಟ್ಟಿದಾಗಿನಿಂದ ಗುಂಡು ಗುಂಡಾಗಿದ್ದ ನಾನು ಸಣ್ಣ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಯಿಂದ ಸ್ವಲ್ಪ ಸಮಯ ತೆಳ್ಳಗಾಗಿದ್ದೆ ಅಂತ ಅಮ್ಮ ಹೇಳ್ತಾ ಇರ್ತಾರೆ. ನನ್ನ ಪ್ರಕಾರ ಅದೇ ಕೊನೆಯಾಗಿತ್ತು ಅನ್ಸುತ್ತೆ ಮತ್ತೆ ನಾನು ದಪ್ಪಗಾಗಲು ಶುರುವಾದೆ. ಅಲ್ಲಿಂದ ಯಾವತ್ತೂ ತೆಳ್ಳಗಾಗುವ ಸಂದರ್ಭ ಬರಲೇ ಇಲ್ಲ. ಪ್ರತಿ ವರ್ಷವೂ ದಪ್ಪಗಾಗುತ್ತೇನೆಯೇ ಹೊರತು ತೆಳ್ಳಗಾಗುವ ಲಕ್ಷಣ ಕಂಡುಬಂದಿಲ್ಲ. ಹಾಗಂತ ತೆಳ್ಳಗಾಗುವ ಆಸೆಯೂ ನನಗಿಲ್ಲ. ತೆಳ್ಳಗಾಗುವ ಆಸೆ ಏನೋ ಇಲ್ಲ, ನಿಜ. ಆದರೆ, ಅಪ್ಪನ ಬಾಯಿಂದ ಬೈಗುಳ ತಿಂದು ತಿಂದು ಇನ್ನಷ್ಟು ದಪ್ಪ ಆದೆನೇ ಹೊರತು ತೆಳ್ಳಗಾಗಲೇ ಇಲ್ಲ. ಯಾವುದೇ ಫ್ಯಾಮಿಲಿ ಸಮಾರಂಭಗಳಲ್ಲಿ ಸಂಬಂಧಿಕರು, ಗೆಳೆಯರು ನನ್ನನ್ನು ನೋಡಿ ಗೇಲಿ ಮಾಡ್ತಾ ಇದ್ರು. ಅವರ ಮಾತುಗಳಿಂದ ತುಂಬಾನೇ ನೋವಾಗ್ತಾ ಇತ್ತು. ಆದ್ರೆ ಏನ್‌ ಮಾಡ್ಲಿ? ಆ ದೇವರು ನನ್ನ ಮೇಲೆ ಕರುಣೆ ತೋರಿಸಲೇ ಇಲ್ಲ. ಅವರು ತಮಾಷೆ ಮಾಡೋದನ್ನೂ ನಿಲ್ಲಿಸ್ಲಿಲ್ಲ.

ಅಂತೆಯೇ ನಾನು ಡಿಗ್ರಿ ಮುಗಿಸಿ ಸ್ನಾತಕೋತ್ತರ ಪದವಿಗಾಗಿ ಸೇರಿಕೊಂಡೆ. ಅಲ್ಲಿ ನನ್ನ ಕ್ಲಾಸ್‌ನಲ್ಲಿ ನನಗಿಂತ ದಪ್ಪವಿರುವ ಮುಗ್ಧ ಮುಖ ಕಾಣಿಸಿತ್ತು. ಅದೇ ದಿನ ನನಗೆ ಸ್ವಲ್ಪ ಖುಷಿಯಾಗಿದ್ದು… ಯಾಕಂದ್ರೆ ನನಗಿಂತಲೂ ದಪ್ಪದವಳು ನನ್ನ ಜೊತೆಗೆ ಇದಾಳಲ್ಲ ಅನ್ನೋದು! ಆಕೆಯೇ ನನ್ನ ಗೆಳತಿ ರೋಶ್ನಿ. ನೋಡೋದಕ್ಕೆ ನನಗಿಂತಲೂ ದಪ್ಪ ಇದ್ದರೂ ಮನಸ್ಸು ಮಾತ್ರ ಚಿಕ್ಕ ಮಗುವಿನಂತೆ ಇತ್ತು. ಇತ್ತೀಚಿಗೆ ಬಹುಶಃ ಸುಮಾರು ಒಂದು ವರ್ಷದಿಂದ ಯಾವೊಬ್ಬ ಗೆಳೆಯ, ಗೆಳತಿಯರೂ ನನಗೆ ಗೇಲಿಯಾಗಲೀ, ನೋವಾಗಲೀ ಮಾಡಿಲ್ಲ. ಬದಲಾಗಿ “ನೀನು ದಪ್ಪಗಿದ್ದರೆ ನೋಡಲು ಚೆನ್ನಾಗಿ ಕಾಣಿಸ್ತೀಯಾ’ ಅಂತ ಹೇಳ್ಳೋದಕ್ಕೆ ಶುರುಮಾಡಿದ್ದಾರೆ. ಫೇಸುºಕ್‌ನಂಥ ಸಾಮಾಜಿಕ ಜಾಲತಾಣದಲ್ಲೂ ದಪ್ಪಗಿರುವ ಹುಡುಗಿಯರಿಗೆ ಖುಷಿ ಕೊಡುವಂಥ ಸಂದೇಶಗಳು ಹರಿದಾಡುತ್ತಿವೆ. ನನಗೆ ಮೊದಲು ಸಿಕ್ಕ ಸಂದೇಶವೇ “ಚಬ್ಬಿ ಗರ್ಲ್ಸ್‌ ಆರ್‌ ಡಾಮ್‌° ಕ್ಯೂಟ್‌’! ಈ ಸಂದೇಶ ನೋಡಿಯೋ ಅಥವಾ ನನ್ನನ್ನು ನೋಡಿಯೋ ಗೊತ್ತಿಲ್ಲ. ನನ್ನ ಫ್ರೆಂಡ್ಸ್‌ “ನಿನ್ನ ಫ್ಯಾಟ್‌ ನಮಗೂ ಸ್ವಲ್ಪ ಕೊಡು’ ಅಂತ ಕೆನ್ನೆ ಹಿಂಡಿ ಕೇಳಿದ್ದು ತುಂಬಾನೇ ಜನ. ಇನ್ನು ಈ ಡಯೆಟ್‌ ನನ್ನ ಶತ್ರು ಇದ್ದಂತೆ. ಅದಕ್ಕೇ ನಾನು ಜಾಸ್ತಿನೇ ತಿನ್ನೋದು.

ಇನ್ನೊಂದು ತಮಾಷೆಯ ಸಂಗತಿಯೆಂದರೆ, ಇತೀಚೆಗೆ ನನ್ನ ಗೆಳತಿ ರಮ್ಯಾ “ನಿನ್ನ ಸೀರಿಯಲ್‌ ಶೂಟಿಂಗ್‌ ಹೇಗೆ ನಡೀತಾ ಇದೆ?’ ಅಂತ ಕೇಳಿದುÉ. ನನಗೆ ಆಶ್ಚರ್ಯ! ಯಾವ ಸೀರಿಯಲ್‌ ಅಂತ ಕೇಳಿದ್ದಕ್ಕೆ ಪ್ರತ್ಯುತ್ತರವಾಗಿ ನನ್ನ ಫ್ರೆಂಡ್‌ “ಬ್ರಹ್ಮಗಂಟು’ ಎಂದು ಹೇಳಿ ಜೋರಾಗಿ ನಕ್ಕು ಬಿಟ್ಲು. ನಾನೂ ಜೋರಾಗಿ ನಾನು ನಕ್ಕು ಬಿಟ್ಟೆ. ಅವತ್ತಿನಿಂದ ಅವಳು ನನ್ನನ್ನು “ಗುಂಡಮ್ಮ’ ಅಂತ ಕರೀತಾಳೆ. ಅವಳು ಕರೆಯೋದು ನೋಡಿ ಎಲ್ಲರೂ “ಗುಂಡಮ್ಮ’, “ಗುಂಡು’, “ಗುಂಡುಮನಿ’ ಅಂತ ನಾಮಕರಣ ಮಾಡಿಯೇ ಬಿಟ್ರಾ. ದಪ್ಪಗಿರುವವರ ಸಮಸ್ಯೆ, ಸಂತೋಷ ಎಲ್ಲಾ ದಪ್ಪಗಿರುವವರಿಗೆ ಮಾತ್ರಾನೇ ಗೊತ್ತಾಗೋದು ಅನ್ನೋದು ನಿಜ. ಪ್ರತಿಯೊಬ್ಬರೂ ತಾವೇಕೆ ಹೀಗಿದ್ದೇವೆ ಅನ್ನೋ ಚಿಂತೆ ಬಿಟ್ಟು, ತಾವು ಇರೋದೆ ಹೀಗೆ ಅಂತ ಅಂದುಕೊಂಡರೆ, ಬದುಕಿನಲ್ಲಿ ಅದಕ್ಕಿಂತ ಜೋಶ್‌ ಮತ್ತೇನಿದೆ ಹೇಳಿ? 

Advertisement

– ಅನ್ವಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next