Advertisement

ಮತ್ತೆ ಬಿರುಕು ಬಿಟ್ಟ ಬ್ರಹ್ಮಗಿರಿ ಬೆಟ್ಟ

12:42 AM Sep 08, 2019 | Sriram |

ಮಡಿಕೇರಿ: ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಪಶ್ಚಿಮ ಘಟ್ಟ ವಲಯದ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಆತಂಕಕಾರಿ ಬಿರುಕು ಕಾಣಿಸಿಕೊಂಡಿದೆ.

Advertisement

ಆಗಸ್ಟ್‌ ಎರಡನೇ ವಾರ ಸುರಿದ ಧಾರಾಕಾರ ಮಳೆಯ ಸಂದರ್ಭ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ.18ರಂದು ಸ್ಥಳಕ್ಕೆ ಭೂವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ವಿಜ್ಞಾನಿಗಳ ವರದಿ ಜಿಲ್ಲಾಡಳಿತದ ಕೈಸೇರುವ ಮೊದಲೇ ಬಿರುಕು ಮತ್ತಷ್ಟು ಆಳವಾಗಿದೆಯಲ್ಲದೆ ಇನ್ನಷ್ಟು ವಿಸ್ತರಿಸಿದೆ.

ಬೆಟ್ಟದಲ್ಲಿ ಸಾರ್ವಜನಿಕರು ಪ್ರವೇಶಿಸದ ಭಾಗಕ್ಕೆ ಶನಿವಾರ ಅರಣ್ಯಾಧಿಕಾರಿಗಳು ಭೇಟಿ ನೀಡಿದ ಸಂದರ್ಭ ಆತಂಕಕಾರಿ ಬಿರುಕು ಪತ್ತೆಯಾಗಿದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಆತಂಕ ಉಂಟಾಗಿದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಕಳೆದ ತಿಂಗಳು ಭಾಗಮಂಡಲದ ಕೋರಂಗಾಲದಲ್ಲಿ ಭೂಕುಸಿತ ಉಂಟಾಗಿ ಐವರು ಅದರಡಿಯಲ್ಲಿ ಸಿಲುಕಿ ಮೃತಪಟ್ಟ ದುರ್ಘ‌ಟನೆಯ ದುಃಖ ಆರುವ ಮೊದಲೇ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಭಯ ಮೂಡಿಸಿದೆ.

ಮಳೆ ಕಡಿಮೆ
ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿದಿದೆ. ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲೂ ಹದವಾಗಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next