Advertisement
ಪಾರ್ಕ್‌ಗೆ ಬೇಡಿಕೆನಗರದಲ್ಲಿ ಅಜ್ಜರಕಾಡು ಪಾರ್ಕ್ ಹೊರತುಪಡಿಸಿದರೆ, ಬನ್ನಂಜೆ ಬಾಲ ಭವನದಲ್ಲಿರುವ ಮಕ್ಕಳ ಪಾರ್ಕ್‌ಗೆ ಬೇಡಿಕೆ ಇದೆ. ಈ ಹಿಂದೆ ಮಕ್ಕಳ ಆಟದ ಪರಿಕರಗಳಿರುವ ಜಾಗದಲ್ಲಿ ಪೊದೆಗಳು ಬೆಳೆದು ನಿಂತಿದ್ದವು. ಇದರಲ್ಲಿ ವಿಷ ಜಂತುಗಳು ಅಡಗಿ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿತ್ತು.
ಬ್ರಹ್ಮಗಿರಿ ಮಕ್ಕಳ ಪಾರ್ಕ್‌ನಲ್ಲಿ ಬೆಳೆದು ನಿಂತ ಗಿಡಗಂಟಿಗಳು ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ಉದಯವಾಣಿ ಸುದಿನ “ಮಕ್ಕಳ ಜೀವಕ್ಕೆ ಕಂಟಕವಾದ ಬ್ರಹ್ಮಗಿರಿ ಪಾರ್ಕ್’ ಎನ್ನುವ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಳ್ಳುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಪಾರ್ಕ್ ಅನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಇದನ್ನೂ ಓದಿ:ಕಮಲ್ ಪುತ್ರ ಬಕುಲ್‌ನಾಥ್ ವಿರುದ್ಧ ಹೊಸ ಸಾಕ್ಷ್ಯ ಬಿಚ್ಚಿಟ್ಟ “ಪಂಡೊರಾ’
Related Articles
ಪ್ರಸ್ತುತ ಮಕ್ಕಳಿಗೆ ಸಾಲು -ಸಾಲು ರಜೆ ಇರುವುದರಿಂದ ಪಾರ್ಕ್‌ಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಜ್ಜರಕಾಡು ಪಾರ್ಕ್‌ನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯ ಸಮೀಪದವರು ಬಾಲಭವನದ ಸಮೀಪ ಇರುವ ಪಾರ್ಕ್ ಕಡೆಗೆ ಮುಖ ಹಾಕುತ್ತಿದ್ದಾರೆ.
Advertisement