Advertisement

ಬಿ.ಆರ್‌. ಪಾಟೀಲ ವಿಶ್ವಾಸ ದ್ರೋಹಿ

10:16 AM Dec 04, 2017 | Team Udayavani |

ಆಳಂದ: ನನ್ನ ಸಾಧನೆ ಪ್ರಶ್ನೆ ಮಾಡ್ತಿರಾ? ಕೃಷಿ ಬಜೆಟ್‌, ಎರಡು ಸಲ ಸಾಲಮನ್ನಾ, ರೈತರ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್‌, ಭಾಗ್ಯಲಕ್ಷ್ಮೀ ಬಾಂಡ್‌, ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡಿದ್ದು ನಾನೇ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಪಟ್ಟಣದಲ್ಲಿ ರವಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಕುರುಬ ಸಮಾಜದವ ಅಲ್ಲ. ಆದರೆ, ಕಾಗಿನಲೆ ಅಭಿವೃದ್ಧಿಗೆ 40 ಕೋಟಿ ರೂ., ಹಜ್‌ ಭವನ ಕಟ್ಟಿಸಿದೆ. ನನಗೆ ಜಾತಿ ಗೊತ್ತಿಲ್ಲ. ಸರ್ವರಿಗೂ ಸಮಬಾಳು-ಸಮಪಾಲು ಎನ್ನುವಂತೆ ಅಧಿಕಾರ ಮಾಡಿದ್ದೇನೆ ಎಂದರು.

ಶಾಸಕ ಬಿ.ಆರ್‌. ಪಾಟೀಲ ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ. ಯಡಿಯೂರಪ್ಪನ ಕೈಹಿಡಿದು ಚುನಾವಣೆಯಲ್ಲಿ ಗೆದ್ದು ಸಿಎಂ ಸಿದ್ದರಾಮಯ್ಯನ ಬಾಲಂಗೊಚಿಯಾಗಿ ಓಡಾಡುತ್ತಿದ್ದಾರೆ. ನಾನು ಇವರನ್ನುಗೆಲ್ಲಿಸಿ ತಪ್ಪು ಮಾಡಿದೆ. ಕ್ಷಮಿಸಿ ಎಂದರು.

ಬಂಡೆ ಸಾವಿನ ಧ್ವನಿ: ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಪ್ರಕರಣವನ್ನು ನೆನಪಿಸಿದ ಯಡಿಯೂರಪ್ಪ, ರಾಜ್ಯ ಸರ್ಕಾರ ಅವರ ಸಾವಿನ ತನಿಖೆ ಮಾಡಿಲ್ಲ. ಈ ನೋವಿನಿಂದಲೇ ಅವರ ಪತ್ನಿ ಮಲ್ಲಮ್ಮ ಬಂಡೆ ಮೃತಪಟ್ಟಿದ್ದಾರೆ. ಇನ್ನುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಈ ಕುರಿತು ಹೋರಾಟ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣವನ್ನು ವಾಪಸು ಪಡೆದು ಬಂಡೆ ಸಾವಿನ ಕುರಿತು ತನಿಖೆ ನಡೆಸಿ, ಆರೋಪಿಗಳನ್ನು ಮಟ್ಟಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರತಾಪಸಿಂಹ ಬಂಧನಕ್ಕೆ ಖಂಡನೆ: ಮೈಸೂರಿನ ಹುಣಸಿನಲ್ಲಿ ನಡೆದ ಹನುಮಾನ ಜಾತ್ರೆಯಲ್ಲಿ ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸಿ, ಅನೇಕರ ಮೇಲೆ ಲಾಟಿ ಬೀಸಿದ ಪ್ರಕರಣವನ್ನು ಖಂಡಿಸಿದರು.

Advertisement

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಯಡಿಯೂರಪ್ಪ ಅಧಿಕಾರದಲ್ಲಿ ವಾಗªರಿ-ರಿಬ್ಬನಪಲ್ಲಿ,
ಕೇಂದ್ರೀಯ ವಿಶ್ವ ವಿದ್ಯಾಲಯ ಅನೇಕ ಕೆಲಸಗಳಾಗಿವೆ ಎಂದರು. 

ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದರಾದ ಶ್ರೀರಾಮುಲು, ಭಗವಂತ ಖೂಬಾ, ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಮಸ್ತಾನ ಪಟೇಲ್‌, ಅಬ್ದುಲ್‌ ಅಜೀಜ, ಮಾಜಿ ಸಚಿವ
ರೇವುನಾಯಕ ಬೆಳಮಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಣ್ಣಾರಾವ್‌ ಕಲವಗಾ, ಜಿಪಂ ಮಾಜಿ ಸದಸ್ಯ ವೀರಣ್ಣಾ
ಮಂಗಾಣೆ, ಸೂರ್ಯಕಾಂತ ತಟ್ಟಿ, ಮಹಾಂತಪ್ಪ ಆಲೂರೆ ಸರಸಂಬಾ ಶಾಸಕರ ವಿರುದ್ಧ ಹರಿಹಾಯ್ದರು.

ಮಾಜಿ ಸಚಿವ ಬಾಬುರಾವ್‌ ಚವ್ಹಾಣ, ಎಂಎಲ್‌ಸಿ ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ರಘುನಾಥ ಮಲ್ಕಾಪೂರೆ, ಜಿಲ್ಲಾ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಸುರೇಶ ಸಜ್ಜನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಕಾರ್ಯದರ್ಶಿ ಮಾಜಿ ಎಂಎಲ್‌ಸಿ ಶಶೀಲ ಜಿ. ನಮೋಶಿ, ಜಿಪಂ ಅಧ್ಯಕ್ಷ ಸುವರ್ಣಾ ಮಲಾಜಿ, ತಾಪಂ ಅಧ್ಯಕ್ಷೆ ನಾಗಮ್ಮ ಗುತ್ತೇದಾರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ ಸಾವಳೇಶ್ವರ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಗುರುಶಾಂತ ಪಾಟೀಲ ನಿಂಬಾಳ, ಶ್ಯಾಮರಾವ್‌ ಪ್ಯಾಟಿ, ತುಕಾರಾಮ ವಗ್ಗೆ, ಆಸೀಫ್‌ ಅನ್ಸಾರಿ, ಇಸೂಫ್‌ ಅನ್ಸಾರಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಪ್ರಧಾನ ಕಾರ್ಯದರ್ಶಿ ಮಹೇಶ ಗೌಳಿ, ಮಲ್ಲಿಕಾರ್ಜುನ ಸಾವಳಗಿ, ತಡಕಲ್‌ ರಾಜಶೇಖರ ಮಲಶೆಟ್ಟಿ, ಅಶೋಕ ಗುತ್ತೇದಾರ, ತಾಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಮಲ್ಲಣ್ಣಾ ನಾಗೂರೆ, ವೀರಣ್ಣಾ ಹತ್ತರಕಿ, ರಾಜಶೇಖರ ಹತ್ತರಕಿ ಪಾಲ್ಗೊಂಡಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೊಡ, ಅಪ್ಪಸಾಬ ಗುಂಡೆ ನಿರೂಪಿಸಿದರು. ವೀರಣ್ಣಾ ಮಂಗಾಣೆ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next