Advertisement
ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಸರ್ಕಲ್‌ನ ಶಂಕರಮಠ ಬಳಿ ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಗಚುಕುಪ್ಪೆ ಗ್ರಾಮದ ಉಮಾದೇವಿ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಹೆಗ್ಗನಹಳ್ಳಿಯ ಗ್ಯಾಸ್ ಏಜೆನ್ಸಿ ಮಾಲೀಕ ಪುನೀತ್ ನಾಯಕ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
Related Articles
Advertisement
ಇತ್ತೀಚೆಗೆ ಉಮಾದೇವಿ ತನ್ನ ಊರಿಗೆ ಹೋಗಿದ್ದು, ಅದೇ ಸಂದರ್ಭದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪುನೀತ್‌ನನ್ನು ಆತನ ಪರಿಚಯಸ್ಥರೇ ಡಿಸೆಂಬರ್ 25ರಂದು ಹತ್ಯೆ ಮಾಡಿದ್ದರು. ಇದರಿಂದ ನೊಂದಿದ್ದ ಉಮಾದೇವಿ ಕಾಲೇಜಿಗೆ ಹೋಗುವುದಾಗಿ ಹೇಳಿ ಊರಿನಿಂದ ಬಂದು ಪುನೀತನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪುನೀತ್ ಹತ್ಯೆಯಾಗಿದ್ದರಿಂದ ಆತ ವಾಸವಿದ್ದ ಮನೆ ಖಾಲಿಮಾಡಿಕೊಂಡು ಹೋಗಲು ಆತನ ಪೋಷಕರು ಬುಧವಾರ ನಗರಕ್ಕೆ ಬಂದಿದ್ದು, ಮನೆಯ ಬಾಗಿಲು ಬಳಿ ಹೋಗುತ್ತಿದ್ದಂತೆ ಒಳಗಡೆಯಿಂದ ದುರ್ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಮೂರ್‍ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ನಡೆದಿರುವ ಶಂಕೆಯಿದ್ದು, ದೇಹ ಕೊಳೆತ ಸ್ಥಿತಿಯಲ್ಲಿತ್ತು. ಆತ್ಮಹತ್ಯೆಗೂ ಮುನ್ನ ಯುವತಿ ಡೆತ್‌ನೋಟ್ ಬರೆದಿಟ್ಟಿದ್ದು, “ಪ್ರಿಯಕರ ಪುನೀತ್ ಸಾವಿನಿಂದ ನೋವಾಗಿದೆ. ಪುನೀತ್ ಇಲ್ಲದೆ ಬದುಕಲು ಬೇಜಾರಿಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.