Advertisement

ಪ್ರತಿಭೆಗೆ ವಯಸ್ಸಿಲ್ಲ : ಎಳೆಯ ಹುಡುಗನ ಮೈಕ್, ಲೈಟಿಂಗ್ಸ್ ಕರಾಮತ್ತು

10:00 PM Apr 19, 2022 | Team Udayavani |

ಶಿರಸಿ: ಯಾರ ಯಾರ ಪ್ರತಿಭೆ, ಅನುಭವ ಎಲ್ಲೆಲ್ಲಿ ಇರುತ್ತದೆ ಗೊತ್ತಿಲ್ಲ. ಇಲ್ಲೊಬ್ಬ ಬಾಲಕ ಕಳೆದ ಐದು ವರ್ಷದಿಂದ ಲೈಟಿಂಗ್ ಹಾಗೂ‌ ಮೈಕಿನ ವಿಚಾರದಲ್ಲಿ ಪರಿಣಿತಿ ಸಾಧಿಸುತ್ತಿದ್ದಾನೆ. ಸ್ವತಃ ಕಾರ್ಯಕ್ರಮಕ್ಕೆ ಬೇಕಾದ‌ ಲೈಟಿಂಗ್ಸ್, ಮೈಕ್ ಜೋಡಣೆ ನಿರ್ವಹಣೆಯಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾನೆ.

Advertisement

ಶಿರಸಿಯ ಉದಯ ಸೌಂಡ್ಸನ ಮಾಲಕ ಉದಯ ಪೂಜಾರಿ ಹಾಗೂ ಯಶೋದಾ ಪೂಜಾರಿ ಪುತ್ರ ಆದಿತ್ಯ ಪೂಜಾರಿ ಈ ಸಾಧನೆಯಲ್ಲಿ ಪಳಗುತ್ತಿದ್ದಾನೆ.

ರಾತ್ರಿ ಬೆಳಗಿನ ತನಕದ ಯಕ್ಷಗಾನ, ನಾಟಕ, ಸಂಗೀತ ಸೇರಿದಂತೆ ಇತರ ಕಾರ್ಯಕ್ರಮಗಳಿಗೂ ಹೋಗುತ್ತಿರುತ್ತಾನೆ‌. ಅಪ್ಪ ಉದಯನ ಜೊತೆ ತೆರಳುತ್ತಿರುವ ಈತ‌ ಲೈಟ್, ಮೈಕ್ ಜೋಡಿಸಿ ಅದರ ಚೆಕ್‌ ಕೂಡ ಮಾಡುತ್ತಾನೆ.

ಸ್ವತಂತ್ರವಾಗಿ ಕಾರ್ಯಕ್ರಮ ಕೂಡ ನಿರ್ವಹಣೆ‌ ಮಾಡಬಲ್ಲ ಈತನಿಗೆ ಲೈಟಿಂಗ್ ನಿರ್ವಹಣೆ ಎಂದರೆ ಇಷ್ಟವಂತೆ. ಅಪ್ಪ ಉದಯ ಹೇಳುವ ಪ್ರಕಾರ, ತೂಕ ಇರುವ ವಸ್ತುಗಳ ಸಾಗಾಟದ ನಿರ್ವಹಣೆ ಕಷ್ಟ. ಅದು ಬಿಟ್ಟರೆ ನಾವು ಊಟ ತಿಂಡಿಗೆ ಹೋದಾಗಲೂ ಒಬ್ಬನೇ ನಿರ್ವಹಿಸಬಲ್ಲನು ಎನ್ನುತ್ತಾನೆ. ಆತನಿಗೆ ಆರೇಳು ಉದಯ.

ಆದಿತ್ಯ ಶಿರಸಿಯ ಶಾಲೆಯಲ್ಲಿ ಇನ್ನು ಎಂಟನೇ ತರಗತಿ ಓದಲಿದ್ದಾನೆ.

Advertisement

ಇದನ್ನೂ ಓದಿ : ಶಿವಪುರ ಗ್ರಾ.ಪಂ. ಕಾರ್ಯದರ್ಶಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು : ಕಾರಣ ನಿಗೂಢ

Advertisement

Udayavani is now on Telegram. Click here to join our channel and stay updated with the latest news.

Next