ಮಹಾರಾಷ್ಟ್ರ: ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: 5 ವರ್ಷದ ಸಾಗರ್ ಬುಧ ಬರೇಲಾ ಸೋಮವಾರ ಸಂಜೆ 4 ಗಂಟೆಯ ವೇಳೆಗೆ ( ಮಾ.13 ರಂದು) ಜಮೀನವೊಂದರಲ್ಲಿ ತೆರೆದ ಕೊಳವೆ ಬಿದ್ದಿದ್ದಾರೆ. ಈ ವಿಚಾರ ಅಧಿಕಾರಿಗಳಿಗೆ ತಲುಪುತ್ತಿದ್ದಂತೆ ಎನ್ ಡಿಆರ್ ಎಫ್ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಆ್ಯಂಬುಲೆನ್ಸ್, ಆಕ್ಸಿಜನ್, ವೈದ್ಯರು ಎಲ್ಲರೂ ಘಟನಾ ಸ್ಥಳದಲ್ಲಿದ್ದು ಬಾಲಕನ ಚಲನವಲನವನ್ನು ಗಮನಿಸಿ ಆತನಿಗೆ ಕೃತಕ ಆಕ್ಸಿಜನ್ ನೆರವನ್ನು ನೀಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆಗೆ ಹಣ ನೀಡಿದ ಪ್ರಕರಣ: ಜಮ್ಮು & ಕಾಶ್ಮೀರದ ವಿವಿಧೆಡೆ ಎನ್ ಐಎ ದಾಳಿ
200 ಅಡಿ ಆಳದ ಕೊಳವೆ ಬಾವಿಯಲ್ಲಿ 15 ಆಳದಲ್ಲಿ ಬಾಲಕ ಸಿಲುಕಿದ್ದಾನೆ. ಆತನನ್ನು ಉಳಿಸುವ ಎಲ್ಲಾ ಪ್ರಯತ್ನ ಮಾಡಿದರೂ ಬಾಲಕ ಸಾಗರ್ ಮಂಗಳವಾರ ಮುಂಜಾನೆ ಉಸಿರು ಗಟ್ಟಿ ಸಾವನ್ನಪ್ಪಿದ್ದಾನೆ. ಬಾಲಕ ಮೃತಪಟ್ಟಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Related Articles
ಬಾಲಕ ಸಾಗರ್ ಕುಟುಂಬ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯವರಾಗಿದ್ದು, ಕುಟುಂಬವು ಕಬ್ಬು ಕಡಿಯುವ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿತ್ತು ಎಂದು ವರದಿ ತಿಳಿಸಿದೆ.
ಇದೇ ವರ್ಷದ ಜನವರಿಯಲ್ಲಿ ಉತ್ತರ ಪ್ರದೇಶದ ಹಾಪುರ್ ನಲ್ಲಿ ಕೊಳೆವೆ ಬಾವಿಗೆ ಬಿದ್ದಿದ್ದ 6 ವರ್ಷದ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು.