Advertisement

ಗರ್ಭಿಣಿ ಸಹೋದರಿಯ ಶಿರಚ್ಛೇದ ಮಾಡಿ ಸೆಲ್ಫಿ ತೆಗೆದ ಸಹೋದರ : ಕೃತ್ಯಕ್ಕೆ ಸಾಥ್ ನೀಡಿದ ತಾಯಿ

03:46 PM Dec 06, 2021 | Team Udayavani |

ಮುಂಬೈ : ಗರ್ಭಿಣಿ ಸಹೋದರಿಯ ಶಿರಚ್ಛೇದ ಮಾಡಿ ಅದರೊಂದಿಗೆ ತಾಯಿ ಮತ್ತು ಮಗ ಸೆಲ್ಫಿ ತೆಗೆದುಕೊಂಡ ಕ್ರೂರ ಘಟನೆ ಮಹಾರಾಷ್ಟ್ರದಲ್ಲಿ ರವಿವಾರ ಸಂಭವಿಸಿದೆ.

Advertisement

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದ ಹತ್ಯೆಯಿಂದ ಇಡೀ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ, ಹೆತ್ತ ತಾಯಿಯೇ ತನ್ನ ಮಗಳ ಕೊಲೆಗೆ ಪ್ರಚೋದನೆ ನೀಡಿರುವುದು ನಿಜಕ್ಕೂ ಮೈ ಜುಂ ಎನಿಸುವಂತದ್ದೇ.. ಮನುಷ್ಯನ ಕ್ರೂರತೆ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸ್ಪಷ್ಟ ನಿದರ್ಶನವಾಗಿದೆ.

ಘಟನೆ ವಿವರ : ಕೀರ್ತಿ ಎಂಬ ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನ ಜೊತೆ ಕಳೆದ ಜೂನ್ ತಿಂಗಳಲ್ಲಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಾಳೆ, ಆದರೆ ಈ ವಿಚಾರ ಹೆತ್ತ ತಾಯಿ ಮತ್ತು ಆಕೆಯ ಸಹೋದರನಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಈ ಕಾರಣಕ್ಕೆ ಆಕೆಯನ್ನು ಹೇಗಾದರು ಮಾಡಿ ಕೊಲೆ ಮಾಡಲೇಬೇಕೆಂದು ತಾಯಿ ಮತ್ತು ಸಹೋದರ ನಿರ್ಧರಿಸಿದ್ದರು.

ಕಳೆದ ಒಂದು ವಾರದ ಹಿಂದೆ ಮಗಳ ಮೊಬೈಲ್ ನಂಬರ್ ಗೆ ಕಾಲ್ ಮಾಡಿದ ತಾಯಿ, ನಿನ್ನನ್ನು ನೋಡಲು ತುಂಬಾ ಮನಸ್ಸಾಗುತ್ತಿದೆ ಎಂದಿದ್ದಾರೆ, ತಾಯಿಯ ಹೇಳಿಕೆಗೆ ಮಗಳು ಮನೆಗೆ ಬರಲು ಹೇಳಿದ್ದಾಳೆ ಅದರಂತೆ ತಾಯಿ ಮತ್ತು ಸಹೋದರ ಡಿಸೆಂಬರ್ 5 ರಂದು ಆಕೆಯ ಮನೆಗೆ ತೆರಳಿದ್ದಾರೆ, ಈ ವೇಳೆ ಕೀರ್ತಿಯ ಪತಿಯು ಮನೆಯಲ್ಲಿದ್ದು ತನ್ನ ರೂಮಿನೊಳಗೆ ಇದ್ದ ಎನ್ನಲಾಗಿದೆ. ದೂರದಿಂದ ಬಂದ ತಾಯಿ ಮತ್ತು ಸಹೋದರನಿಗೆ ಕುಡಿಯಲು ನೀರು ಕೊಟ್ಟು ಚಹಾ ಮಾಡಿ ಕೊಡಲು ಅಡುಗೆ ಕೋಣೆಯೊಳಗೆ ಹೋದಾಗ ಹಿಂದಿನಿಂದ ಹೋದ ಸಹೋದರ ಹರಿತವಾದ ಆಯುಧದಿಂದ ತನ್ನ ಸಹೋದರಿ ಗರ್ಭಿಣಿಯೆಂದು ಕೂಡಾ ಯೋಚಿಸದೆ ಶಿರಚ್ಛೇದ ಮಾಡಿದ್ದಾನೆ ಅಲ್ಲದೆ ಈ ವೇಳೆ ಹೆತ್ತ ತಾಯಿ ಮಗಳ ಕಾಲನ್ನು ಹಿಡಿದು ಕೊಲೆಗೆ ಸಹಕಾರ ನೀಡಿದ್ದಾರೆ.

ಇದನ್ನೂ ಓದಿ : ಹೊಕ್ಕಾಡಿಗೋಳಿ ಕಂಬಳ: ಬಿದ್ದರೂ ಛಲ ಬಿಡದೆ ಗೆದ್ದ ಕಂಬಳ ಓಟಗಾರ; ವಿಡಿಯೋ  ವೈರಲ್

Advertisement

ಅಡುಗೆ ಮನೆಯಲ್ಲಿ ಪಾತ್ರಗಳ ಸದ್ದು ಕೇಳಿದ ಪತಿ ಕೋಣೆಯಿಂದ ಎದ್ದು ಬಂದಾಗ ಕೊಲೆಯ ದೃಶ್ಯ ಕಣ್ಣಿಗೆ ಬಿದ್ದಿದೆ ಈ ವೇಳೆ ಸಹೋದರ ಕೀರ್ತಿಯ ಪತಿಯ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ, ಆದರೆ ಕೀರ್ತಿಯ ಪತಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಅಷ್ಟು ಮಾತ್ರ ಮಾಡದೆ ಸಹೋದರಿಯ ಶಿರಚ್ಛೇದ ಮಾಡಿದ ಬಳಿಕ ರುಂಡವನ್ನು ಮನೆಯ ಹೊರಗೆ ತಂದು ಸುತ್ತಮುತ್ತಲಿನ ಮನೆಯವರಿಗೆ ತೋರಿಸಿ ಬಳಿಕ ರುಂಡದ ಜೊತೆಗೆ ತಾಯಿ ಮತ್ತು ಮಗ ಸೆಲ್ಫಿ ತೆಗೆದು ಸಹೋದರಿಯ ರುಂಡವನ್ನು ಹಿಡಿದು ಠಾಣೆಗೆ ಹೋಗಿ ಶರಣಾಗಿದ್ದಾನೆ.

ವೈಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಯಿ ಮತ್ತು ಸಹೋದರನನ್ನು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ

 

Advertisement

Udayavani is now on Telegram. Click here to join our channel and stay updated with the latest news.

Next