ಭೋಪಾಲ್: ಆಟ ಆಡುತ್ತಿದ್ದ ವೇಳೆ 7 ವರ್ಷದ ಬಾಲಕ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಮಧ್ಯ ಪ್ರದೇಶದ ವಿದಿಶಾದಲ್ಲಿ ನಡೆದಿದೆ.
ಜಿಲ್ಲೆಯ ಲಾಟೇರಿ ತಹಸಿಲ್ ವ್ಯಾಪ್ತಿಯ ಖೇರ್ಖೇಡಿ ಪಥರ್ ಗ್ರಾಮದಲ್ಲಿ ಬಾಲಕ ಲೋಕೇಶ್ ಅಹಿರ್ವಾರ್ ಮಂಗಳವಾರ ( ಮಾ.14 ರಂದು) ಮುಂಜಾನೆ 11 ಗಂಟೆಯ ವೇಳೆಗೆ ಮನೆಯ ಪಕ್ಕದಲ್ಲಿ ಆಡುತ್ತಿದ್ದಾಗ ಕಾಲು ಜಾರಿ ಅಲ್ಲೇ ಇದ್ದ ಕೊಳವೆ ಬಾವಿಗೆ ಬಿದ್ದಿದ್ದಾನೆ.
ಘಟನೆ ಬಗ್ಗೆ ಕೂಡಲೇ ವಿಚಾರವನ್ನು ತಿಳಿದ ಅಧಿಕಾರಿಗಳು ಬಾಲಕನನ್ನು ಸುರಕ್ಷಿತವಾಗಿ ಹೊರ ತೆಗೆಯಲು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಬಾಲಕ ಲೋಕೇಶ್ 60 ಅಡಿ ಆಳದ ಕೊಳವೆ ಬಾವಿಯಲ್ಲಿ, 43 ಅಡಿ ಆಳದಲ್ಲಿ ಸಿಲುಕಿದ್ದು, ಆತನಿಗೆ ಕೃತಕ ಉಸಿರಾಟವನ್ನು ನೀಡಲಾಗುತ್ತಿದೆ. ಕ್ಯಾಮರಾವನ್ನು ಬೋರ್ ವೆಲ್ ಗೆ ಇಳಿಸಿ ಆತನ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಬೋರ್ ವೆಲ್ ಪಕ್ಕದಲ್ಲಿ ಮತ್ತೊಂದು ಸುರಂಗವನ್ನು ಅಗೆಯುತ್ತಿದ್ದೇವೆ. 2 ಗಂಟೆಗಳಲ್ಲಿ ಸುರಂಗ ಅಗೆಯುವ ಕಾರ್ಯ ಪೂರ್ತಿಗೊಳ್ಳುತ್ತದೆ ಎಂದು ವಿದಿಶಾ ಎಎಸ್ ಪಿ ಸಮೀರ್ ಯಾದವ್ ಹೇಳಿದ್ದಾರೆ.
Related Articles
ನಿನ್ನೆಯಷ್ಟೇ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ನಡೆದಿತ್ತು.