ಬ್ಯಾಂಕಾಕ್: ಭಾರತದ ಬಾಕ್ಸರ್ ನಿಶಾಂತ್ ದೇವ್ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ನಡೆಯು ತ್ತಿರುವ “ಬಾಕ್ಸಿಂಗ್ ಒಲಿಂಪಿಕ್ ಕ್ವಾಲಿ ಫೈಯರ್’ ಪಂದ್ಯಾವಳಿಯಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಅವರಿಗೆ ಅರ್ಹತೆ ಲಭಿಸಿತು. ನಿಶಾಂತ್ ಪುರುಷರ ವಿಭಾಗದಿಂದ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ ಭಾರತದ ಮೊದಲ ಬಾಕ್ಸರ್ ಎಂಬುದು ವಿಶೇಷ.
ಅಮಿತ್ ಪಂಘಲ್ (51 ಕೆಜಿ), ಅರುಂಧತಿ ಚೌಧರಿ (66 ಕೆಜಿ) ಕೂಡ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಲ್ಡೋವಾದ ವ್ಯಾಸಿಲ್ ಸೆಬೊಟರಿ ವಿರುದ್ಧ ನಿಶಾಂತ್ ದೇವ್ 5-0 ಅಂತರದ ಗೆಲುವು ಸಾಧಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ನಿಶಾಂತ್‌ಗೆ ಕಳೆದ ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಸ್ವಲ್ಪದರಲ್ಲೇ ತಪ್ಪಿತ್ತು.
ಈಗಾಗಲೇ ವನಿತಾ ವಿಭಾಗದಿಂದ ನಿಖತ್ ಜರೀನ್ (50 ಕೆಜಿ), ಪ್ರೀತ್ ಪವಾರ್ (54 ಕೆಜಿ) ಮತ್ತು ಲವಿÉನಾ ಬೊರ್ಗೊಹೇನ್ (75 ಕೆಜಿ) ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ.