Advertisement

ಬೊರಿವಲಿ ಪೂರ್ವ ಸೈಂಟ್‌ ಕ್ಸೇವಿಯರ್ ಶಾಲೆಯಲ್ಲಿ ಪದವಿ ಪ್ರದಾನ

03:09 PM Jul 01, 2018 | Team Udayavani |

ಮುಂಬಯಿ: ರಾಯನ್‌ ಇಂಟರ್‌ನ್ಯಾಶನಲ್‌ ಶಿಕ್ಷಣ ಸಂಸ್ಥೆ ಸಂಚಾಲಕತ್ವದ ಬೊರಿವಲಿ ಪೂರ್ವದ ಸೈಂಟ್‌ ಕ್ಸೇವಿಯರ್ ಹೈಸ್ಕೂಲ್‌ನಲ್ಲಿ ಪದವಿ ಪ್ರದಾನ ಕಾರ್ಯಕ್ರಮವು  ಜೂ. 30ರಂದು ಶಾಲಾ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ದೇಶದ ಭವಿಷ್ಯವು ತರಗತಿಯಲ್ಲಿ ಅಭಿವೃದ್ಧಿಯಾಗಬೇಕು ಎಂಬ ಧ್ಯೇಯ
-ಘೋಷಣೆಯೊಂದಿಗೆ ಸೈಂಟ್‌ ಕ್ಸೇವಿಯರ್‌ ಶಿಕ್ಷಣ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಎಳೆಯ ಮಕ್ಕಳಲ್ಲಿ ನಾಯಕತ್ವ ಗುಣ,  ದೇಶ ಪ್ರೇಮ, ಸತ್ಯ, ನಿಷ್ಠೆ, ಸಮಾಜ ಸೇವೆ ಇನ್ನಿತರ ಭಾವನೆಗಳನ್ನು  ಬೆಳೆಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಮಾನವೀಯ ಸಂಬಂಧಗಳನ್ನು ಬೆಸೆಯುವ ಕಾರ್ಯಕ್ರಮವನ್ನು ಹೂಡಿಕೆ ಸಮಾರಂಭದ ಮೂಲಕ ಮಾಡುತ್ತಿದೆ.

ವಿದ್ಯಾರ್ಥಿಗಳಿಗೆ ನಾಯಕತ್ವವನ್ನು ನೀಡಿ ವಿದ್ಯಾರ್ಥಿ ಪರಿಷತ್ತನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ವಿದ್ಯಾರ್ಥಿ ಪರಿಷತ್ತಿನ ಸದಸ್ಯ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಂಡರು. ಕಾರ್ಯ ಕ್ರಮದಲ್ಲಿ ದೈನಿಕ ಭಾಸ್ಕರ್‌ ಗ್ರೂಪ್‌ನ ಹಿರಿಯ ವರದಿಗಾರ ವಿನೋದ್‌ ಯಾಧವ್‌ ಅವರು ಉಪಸ್ಥಿತರಿದ್ದರು.

ವಿಶೇಷ ಅತಿಥಿಯಾಗಿ ನ್ಯಾಯ ವಾದಿ ಹರೀಶ್‌ ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ಮಕ್ಕಳಲ್ಲಿ ನಾಯಕತ್ವದ ಗುಣವು ಎಳವೆಯಲ್ಲೇ ಮೊಳಕೆಯೊಡೆಯುತ್ತದೆ. ಇದರಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿದೆ ಎಂದು ನುಡಿದರು. ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷೆ ಮತ್ತು ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್‌ ಪಿಂಟೋ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು. ಅತಿಥಿ-ಗಣ್ಯರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next