Advertisement

ಏಪ್ರಿಲ್ ಅಂತ್ಯದಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ

10:50 AM Mar 16, 2021 | Team Udayavani |

ಲಂಡನ್ : ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬಂದ ನಂತರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಏಪ್ರಿಲ್ ತಿಂಗಳಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಅವರ ಕಚೇರಿ ತಿಳಿಸಿದೆ.

Advertisement

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ನೀತಿ ಬಲವರ್ಧನೆಗೆ, ವ್ಯಾಪಾರ ಮಾತುಕತೆಗಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡುವುದೆಂದು ನಿರ್ಣಯವಾಗಿತ್ತು, ಆದರೇ, ಕೋವಿಡ್ 19 ಸಾಂಕ್ರಾಮಿಕ ಸೋಂಕಿನ ಕಾರಣದಿಂದ ಬೋರಿಸ್ ಅವರ ಭಾರತದ ಭೇಟಿ ಮೊಟಕುಗೊಂಡಿತ್ತು.

ಓದಿ : ಶೇ. 4.17 ಕ್ಕೆ ಏರಿದ ಸಗಟು ಹಣದುಬ್ಬರ..!

ಬ್ರಿಟನ್ ಸರ್ಕಾರದ ನೀತಿಯ ಸಮಗ್ರ ವಿಮರ್ಶೆಯ ಭಾಗವಾಗಿ ಇಂಡೋ–ಪೆಸಿಫಿಕ್ ಪ್ರದೇಶದತ್ತ ತನ್ನ ಗಮನವನ್ನು ಹರಿಸಲಿದೆ. ಈ ಪ್ರದೇಶವು ವಿಶ್ವದ ಭೌಗೋಳಿಕ ರಾಜಕೀಯ ಕೇಂದ್ರವನ್ನು ಹೆಚ್ಚು ಪ್ರತಿನಿಧಿಸುತ್ತಿರುವ ಹಿನ್ನಲೆ, ಇಂಡೋ–ಪೆಸಿಫಿಕ್ ಪ್ರದೇಶದತ್ತ ಹೆಚ್ಚು ಗಮನ ಹರಿಸಲಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಕಳೆದ ತಿಂಗಳು ಟ್ರಾನ್ಸ್ ಪೆಸಿಫಿಕ್ ಸಹಭಾಗಿತ್ವಕ್ಕಾಗಿ(ಸಿಪಿಟಿಪಿಪಿ) ಸಮಗ್ರ ಮತ್ತು ಪ್ರಗತಿಪರ ಒಪ್ಪಂದಕ್ಕೆ ಸೇರಲು ಬ್ರಿಟನ್ ಔಪಚಾರಿಕ ವಿನಂತಿ ಮಾಡಿತ್ತು, ಬ್ರೆಕ್ಸಿಟ್ ನಂತರದ ವ್ಯಾಪಾರ ಮತ್ತು ಪ್ರಭಾವಕ್ಕೆ ಹೊಸ ಮಾರ್ಗಗಳನ್ನು ತೆರೆಯಲು 11 ದೇಶಗಳನ್ನು ಕೋರಿತ್ತು.

Advertisement

ಇನ್ನು, ಬೋರಿಸ್ ಭಾರತದ ಭೇಟಿಯಿಂದ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಸೇರಿ ಮತ್ತಿತರ ವಿಷಯಗಳ ಚರ್ಚೆಯೊಂದಿಗೆ ಇಂಡೋ–ಪೆಸಿಫಿಕ್ ಪ್ರದೇಶದ ಬಗ್ಗೆ ಮಾತುಕತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.

ಓದಿ :ಶಾನ್ವಿ ಕಣ್ಣಲ್ಲಿ ‘ಕಸ್ತೂರಿ ಮಹಲ್‌’ ಕನಸು: 19 ರಂದು ಲಿರಿಕಲ್‌ ವಿಡಿಯೋ ರಿಲೀಸ್‌

Advertisement

Udayavani is now on Telegram. Click here to join our channel and stay updated with the latest news.

Next