Advertisement

Partygate case: ಸಂಸತ್‌ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್

12:55 PM Jun 10, 2023 | Team Udayavani |

ಲಂಡನ್:‌ ಪಾರ್ಟಿಗೇಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಶುಕ್ರವಾರ (ಜೂನ್‌ 09) ಬ್ರಿಟನ್‌ ಸಂಸತ್‌ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.‌

Advertisement

ಇದನ್ನೂ ಓದಿ:Gangavathi: ಲಘುವಿಮಾನ ಹಾರಾಟ; ಗಾಬರಿಗೊಂಡ ಜನತೆ; ಅಧಿಕಾರಿಗಳಿಗೆ ಮೊಬೈಲ್ ಕರೆ

ಕೋವಿಡ್‌ 19 ಸಂದರ್ಭದಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸಂತೋಷ ಕೂಟವನ್ನು ಆಯೋಜಿಸಿರುವ ಬಗ್ಗೆ ಬೋರಿಸ್‌ ಅವರು ಸಂಸತ್‌ ಗೆ ತಪ್ಪು ಮಾಹಿತಿ ನೀಡಿರುವುದಾಗಿ ತನಿಖಾ ಸಂಸ್ಥೆ ವರದಿ ನೀಡಿದ್ದು, ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಬೋರಿಸ್‌ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿ ವಿವರಿಸಿದೆ.

ಬೋರಿಸ್‌ ಜಾನ್ಸನ್‌ ಅವರು ಬರೆದ ಸುದೀರ್ಘ ರಾಜೀನಾಮೆ ಪತ್ರದಲ್ಲಿ, ತಮ್ಮ ರಾಜಕೀಯ ಜೀವನವನ್ನು ಮುಗಿಸಲು ವಿಪಕ್ಷಗಳು ಯತ್ನಿಸುತ್ತಿರುವುದಾಗಿ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ತುಂಬಾ ಖೇದಕರ ವಿಷಯವಾಗಿದೆ. ನನ್ನ ದೋಷಿಯನ್ನಾಗಿ ಮಾಡಲು ಷಡ್ಯಂತ್ರ ನಡೆಸಲಾಗಿದೆ. ಸತ್ಯವನ್ನು ಮರೆಮಾಚಿ, ರಾಜಕೀಯ ಜೀವನದಿಂದ ಹೊರಗಿಡುವ ಸಂಚು ನಡೆಸಲಾಗಿದೆ ಎಂದು ಬೋರಿಸ್‌ ದೂರಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next