Advertisement

ಗಡಿಗಳು ಈಗಾಗಲೇ ಸೀಲ್ ಆಗಿವೆ: ಉದ್ಧವ್ ಠಾಕ್ರೆ ಹೇಳಿಕೆಗೆ ಡಿಕೆಶಿ ಕಿಡಿ

07:52 PM Dec 26, 2022 | Team Udayavani |

ಹುಬ್ಬಳ್ಳಿ: ನಮ್ಮ ರಾಜ್ಯದ ಮತ್ತು ಮಹಾರಾಷ್ಟ್ರದ ಗಡಿಗಳು ಈಗಾಗಲೇ ಸೀಲ್ ಆಗಿವೆ. ನಮ್ಮ ರಾಜ್ಯದ ಹಳ್ಳಿಗಳು ಅವರಿಗೆ ಬೇಡ, ಅವರ ಹಳ್ಳಿಗಳು ನಮಗೆ ಬೇಡ. ಎರಡೂ ಗಡಿಯಲ್ಲಿನ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಶಾಂತಿ ಭಂಗ ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿ, ಕಾರವಾರ, ನಿಪ್ಪಾಣಿ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಅನ್ನೋ ಉದ್ಧವ್ ಠಾಕ್ರೆ ಹೇಳಿಕೆಗೆ ಕಿಡಿಕಾರಿದರು.

ಅವರ ಮಂತ್ರಿಗಳು, ಲೀಡರ್ ಗಳು ನಮ್ಮ ರಾಜ್ಯಕ್ಕೆ ಪ್ರವೇಶ ಮಾಡುವುದು ಬೇಡ. ನಮ್ಮ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಬೆಳಗಾವಿ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೇಜ್ ನೀಡಲಾಗುವುದು. ವಲಸೆ ಹೋಗೋದನ್ನ ತಪ್ಪಿಸುತ್ತೇವೆ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು.

ಈಗಾಗಲೇ ಬೆಳಗಾವಿಯಲ್ಲಿ ನಾವು ಸುವರ್ಣ ಸೌಧ ಕಟ್ಟಿದ್ದೇವೆ. ಏಕೆ ಶಾಂತಿ ಭಂಗ ಮಾಡುತ್ತಾರೆ ಅನ್ನೋದು ಗೊತ್ತಿಲ್ಲ. ಇದು ನಮ್ಮ ಸರಕಾರದ ದೌರ್ಬಲ್ಯ. ಕೇಂದ್ರದ ಗೃಹ ಸಚಿವರು ಎರಡೂ ರಾಜ್ಯಗಳ ಸಿಎಂಗಳ ಸಭೆ ಕರೆದದ್ದು ಏನಾಯ್ತು. ಅವರ ಮಾತಿಗೆ ಕಿಮ್ಮತ್ತು ಇಲ್ಲದ್ಹಂಗೆ ಆಯ್ತಲ್ಲ. ಇದೆಲ್ಲ ಬಿಜೆಪಿಯ ಆಂತರಿಕ ಯೋಜನೆ ಎಂದರು.

ನಮಗೂ ಮಾಹಾರಷ್ಟ್ರ ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ. ನಮ್ಮ ನೆಲ, ಜಲ,ಸಂಸ್ಕ್ರತಿ, ಭೂಮಿ ನಮ್ಮ ಹಕ್ಕು. ಆಗ ಉಮೇಶ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು ಅಂತಿದ್ದರು. ಇದೆಲ್ಲ ಬಿಜೆಪಿ ಪ್ಲಾನ್. ಏನು ಮಾಡೋಕೆ ಆಗಲ್ಲ ಎಂದರು.

Advertisement

ಇಂದಿನಿಂದ ಮಾಸ್ಕ್ ಕಡ್ಡಾಯ ವಿಚಾರವಾಗಿ, ಅವರು ಹೇಳಿದರೂ ನಾವು ಬಸ್ ಯಾತ್ರೆ ಮಾಡುತ್ತೇವೆ. ಇದು ನಮ್ಮ‌ ಹಕ್ಕು. ಎಸಿ ರೂಮ್, ಕಚೇರಿ, ಕಾರಿನಲ್ಲಿ ಕುಳಿತವರಿಗೂ ಮಾಸ್ಕ್ ಕಡ್ಡಾಯ ಮಾಡಲಿ. ಸುಮ್ಮನೆ ಜನರಿಗೆ ಭಯ ಹುಟ್ಟಿಸುವ ಕೆಲಸ ಬಿಡಲಿ. ಹೊರಗಡೆಯಿಂದ ಬರುವವರನ್ನು ತಪ್ಪಿಸಿ. ಹಿಂದೆ ನೀವೇನು ಸಹಾಯ ಮಾಡಿಲ್ಲ. ಇದೀಗ ಜನರಿಗೆ ದೊಡ್ಡ ಭಯ ಉಂಟು ಮಾಡುತ್ತಿದ್ದಾರೆ ಎಂದರು.

ಅವರೇನು ಭಿಕ್ಷುಕರಲ್ಲ

ಅವಧಿ ಪೂರ್ಣ ಚುನಾಚಣೆ ಇಲ್ಲ ಎನ್ನುವ ಸಿಎಂ ಹಾಗೂ ಜೋಶಿ ಅಧಿಕಾರಿಗಳೊಂದಿಗೆ ಏನು ಚರ್ಚೆ ಮಾಡಿದರು ಅನ್ನುವುದನ್ನು ಬಹಿರಂಗ ಮಾಡಲಿ. ತರಾತುರಿಯಲ್ಲಿ ಮೀಸಲಾತಿ ಭಾಗ ಮಾಡಿ ಬಿಟ್ಟಿದಾರೆ. ಒಕ್ಕಲಿಗರಿಗೆ ಮೂರು ಪರ್ಸೆಂಟ್ ಕೊಡೋಕೆ ಅವರೇನು ಭಿಕ್ಷುಕರಲ್ಲ. ಒಕ್ಕಲಿಗರು ಅನ್ನದಾತರು, ಅವರು ಸಮಾಜಕ್ಕೆ ತನ್ನದೇಯಾದ ಕೊಡುಗೆ ಕೊಟ್ಟಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಟ್ಟಿರೋದಕ್ಕೆ ನಮ್ಮ ತಕರಾರಿಲ್ಲ. ಬೇರೆಯವರದು ಕಿತ್ತುಕೊಂಡು ಕೊಡೋದು ನಮಗೆ ಬೇಡ. ನಮ್ಮ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಶೇ. 12 ಮೀಸಲಾತಿ ಕೊಡಿ. ಮುಖ್ಯಮಂತ್ರಿಗಳು ಕೊಡುತ್ತೇವೆ ಅನ್ನುತ್ತಾರೆ. ಇದೀಗ ಮೂರು ಪರ್ಸೆಂಟ್ ಎಂದು ಹೇಳುತ್ತಿದ್ದಾರೆ. ನಾವೇನು ಭಿಕ್ಷುಕರಲ್ಲ. ನಮಗೆ 12 ಪರ್ಸೆಂಟ್ ಸಿಗಬೇಕು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next